ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ 14,476 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಬೆಂಗಳೂರು ದಕ್ಷಿಣ ವಲಯದಲ್ಲಿ ಅತಿ ಹೆಚ್ಚು 2,798 ಜನರಿಗೆ ಕೋವಿಡ್ ಹಬ್ಬಿದೆ. ಪಶ್ಚಿಮದಲ್ಲಿ 2,275, ಪೂರ್ವದಲ್ಲಿ 2,148, ಬೊಮ್ಮನಹಳ್ಳಿಯಲ್ಲಿ 1,519, ದಾಸರಹಳ್ಳಿಯಲ್ಲಿ 438, ಮಹದೇವಪುರದಲ್ಲಿ 1,482, ಆರ್.ಆರ್.ನಗರದಲ್ಲಿ 880, ಯಲಹಂಕದಲ್ಲಿ 839, ಅನೇಕಲ್ನಲ್ಲಿ 457, ಪೂರ್ವ ತಾಲೂಕು 116, ಉತ್ತರ ತಾಲೂಕು 217, ದಕ್ಷಿಣ ತಾಲೂಕು 212 ಪ್ರಕರಣಗಳು ವರದಿಯಾಗಿವೆ.