ಕರ್ನಾಟಕ

karnataka

ETV Bharat / state

ಬೆಂಗಳೂರು ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ - Bengaluru corona case

ಬೆಂಗಳೂರಲ್ಲಿ ಇಂದು ಕೋವಿಡ್ ಸೋಂಕಿತರ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು, ನಿನ್ನೆಗಿಂತ 4 ಸಾವಿರ ಪ್ರಕರಣ ಕಡಿಮೆಯಾಗಿವೆ..

bengaluru-covid-report-today
ಬೆಂಗಳೂರು ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ

By

Published : Jan 21, 2022, 6:13 PM IST

ಬೆಂಗಳೂರು :ಕೋವಿಡ್ ಸೋಂಕಿತರ ಪ್ರಮಾಣದಲ್ಲಿ ಪ್ರತಿನಿತ್ಯ ಏರಿಳಿಕೆ ಆಗುತ್ತಿದೆ. ನಿನ್ನೆ ರಾಜಧಾನಿಯಲ್ಲಿ 30 ಸಾವಿರ ದಾಟಿದ್ದ ಸೋಂಕಿತರ ಸಂಖ್ಯೆ ಇಂದು 26,794ಕ್ಕೆ ಇಳಿಕೆಯಾಗಿದೆ. ನಿನ್ನೆಗಿಂತ ಇಂದು 4 ಸಾವಿರ ಪ್ರಕರಣ ಕಡಿಮೆಯಾದಂತಾಗಿದೆ.

ಕೆಲವೇ ವಾರ್ಡ್​​ಗಳಿಗೆ ಸೀಮಿತವಾಗಿದ್ದ ಕೋವಿಡ್ ಇದೀಗ ಇಡೀ ಬೆಂಗಳೂರನ್ನು ಆವರಿಸಿದೆ. 198 ವಾರ್ಡ್​​ಗಳ ಪೈಕಿ 101 ವಾರ್ಡ್​ಗಳಲ್ಲಿ ಅಪಾಯದ ಹಂತದಲ್ಲಿದೆ. 33 ವಾರ್ಡ್​ಗಳಲ್ಲಿ ಸೋಂಕಿತರ ಸಂಖ್ಯೆ ಸಾವಿರಕ್ಕೂ ಮೀರಿದೆ.

ಬೆಂಗಳೂರು ಕೋವಿಡ್ ವರದಿ

ನಗರದ ಬೊಮ್ಮನಹಳ್ಳಿ ವಲಯದಲ್ಲಿ 3,100, ದಾಸರಹಳ್ಳಿ 753, ಬೆಂಗಳೂರು ಪೂರ್ವ 4,373, ಮಹದೇವಪುರ 4,102, ಆರ್ ಆರ್‌ನಗರ 1,610, ದಕ್ಷಿಣ ವಲಯ 3,831, ಪಶ್ಚಿಮ 1,951, ಯಲಹಂಕ 1,825, ಅನೇಕಲ್ 1,515, ಬೆಂಗಳೂರು ಹೊರವಲಯ 2,037 ಸೇರಿದಂತೆ ಇಂದು ಒಟ್ಟು 26,794 ಪಾಸಿಟಿವ್ ದೃಢಪಟ್ಟಿದೆ.

ಜಾಹೀರಾತು:ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ರಾಜ್ಯದಲ್ಲಿ ನಾಳೆಯಿಂದ ವೀಕೆಂಡ್ ಕರ್ಫ್ಯೂ ರದ್ದುಗೊಳಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು, ನೈಟ್ ಕರ್ಫ್ಯೂ ಹಾಗೂ ಶೇ.50ರ ನಿಯಮ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ. ರಾಜ್ಯಾದ್ಯಂತ ಶಾಲಾ-ಕಾಲೇಜು ನಡೆಯಲಿವೆ. ಆದರೆ, ಬೆಂಗಳೂರಿನಲ್ಲಿ ಶಾಲೆಗಳ ಆರಂಭ ಕುರಿತು ಮುಂದಿನ ವಾರ ನಿರ್ಧಾರ ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ:ಸಿಎಂ ಬೊಮ್ಮಾಯಿ ನೇತೃತ್ವದ ಕೋವಿಡ್​​ ಸಭೆಯಲ್ಲಿ ತಜ್ಞರು ನೀಡಿದ ಸಲಹೆಗಳಿವು..

ABOUT THE AUTHOR

...view details