ಕರ್ನಾಟಕ

karnataka

ETV Bharat / state

ನೈಟ್ ಕರ್ಫ್ಯೂ ಜಾರಿ: ಸಿಎಂ ಭೇಟಿ ಮಾಡಿ ಚರ್ಚಿಸಿದ ನಗರ ಪೊಲೀಸ್ ಆಯುಕ್ತ - ನೈಟ್ ಕರ್ಫ್ಯೂ ಕರ್ನಾಟಕದಲ್ಲಿ

ಬ್ರಿಟನ್​​ನಲ್ಲಿ ಹೊಸ ಬಗೆಯ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇಂದಿನಿಂದ ಜಾರಿಗೆ ಬರುವಂತೆ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಈ ವೇಳೆ ನಗರದಲ್ಲಿ ಕೈಗೊಳ್ಳಲಿರುವ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ನಡೆಸಿದರು.

File Photo
ಸಂಗ್ರಹ ಚಿತ್ರ

By

Published : Dec 23, 2020, 2:16 PM IST

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದಲೇ ನೈಟ್ ಕರ್ಫ್ಯೂ ಜಾರಿಗೊಳಿಸುತ್ತಿದ್ದಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ನಗರದಲ್ಲಿನ ಭದ್ರತೆ ಕುರಿತು ಚರ್ಚೆ ನಡೆಸಿದರು.

ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ಆಗಮಿಸಿದ ಪಂತ್, ಬೆಂಗಳೂರು ನಗರದಲ್ಲಿ ಮುಂದಿನ 9 ದಿನಗಳ ಕಾಲ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು. ಬಳಿಕ ಪ್ರತಿಕ್ರಿಯಿಸಿದ ಅವರು, ಸರ್ಕಾರದ ನಿರ್ದೇಶನಗಳಿಗಾಗಿ ನಾವು ಕಾಯುತ್ತಿದ್ದೇವೆ. ಮಾರ್ಗಸೂಚಿ ಪ್ರಕಟವಾದ ಬಳಿಕ ನೈಟ್ ಕರ್ಫ್ಯೂ ಬಗ್ಗೆ ಮಾತನಾಡಲು ಸಾಧ್ಯ ಎಂದರು.

ಈ ಹಿಂದಿನ ಕರ್ಫ್ಯೂ ಪರಿಸ್ಥಿತಿ ಬೇರೆ, ಈಗಿನ ಸ್ಥಿತಿ ಬೇರೆ. ಹಿಂದಿನ ನಿಬಂಧನೆಗಳನ್ನೇ ಮುಂದುವರೆಸುತ್ತೇವೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಸರ್ಕಾರದಿಂದ ಬಂದ ಗೈಡ್ ಲೈನ್ಸ್ ಪ್ರಕಾರ ಕರ್ಫ್ಯೂ ಜಾರಿಯಾಗಲಿದೆ ಎಂದು ತಿಳಿಸಿದರು.

ಪ್ರತಿದಿನ ನೈಟ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೊಳ್ಳಲು ಬೇಕಾದ ಕ್ರಮ ಕೈಗೊಳ್ಳಿ. ಕ್ರಿಸ್ ಮಸ್ ಹಾಗು ಹೊಸ ವರ್ಷಾಚರಣೆ ಸಮಯದಲ್ಲಿ ಕಟ್ಟೆಚ್ಚರ ವಹಿಸಿ. ಯಾವುದೇ ಕಾರಣಕ್ಕೂ ಕರ್ಫ್ಯೂ ಉಲ್ಲಂಘನೆ ಆಗದಂತೆ ನೋಡಿಕೊಳ್ಳಿ ಎಂದು ಕಮಲ್ ಪಂತ್​​ಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ.

ABOUT THE AUTHOR

...view details