ಬೆಂಗಳೂರು:ಪುಡ್ ಡಿಲೆವರಿ ಬಾಯ್ಗಳಿಂದ ದೌರ್ಜನ್ಯ ಪ್ರಕರಣಗಳು ಇತ್ತೀಚೆಗೆ ವರದಿಯಾದ ಹಿನ್ನೆಲೆ, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿ ಎಲ್ಲ ಆ್ಯಪ್ ಮುಖ್ಯಸ್ಥರನ್ನು ಕರೆಸಿ ಸಭೆ ನಡೆಸಿದ ನಗರ ಪೊಲೀಸ್ ಆಯುಕ್ತರು ಆ್ಯಪ್ ಆಧಾರಿತ ಡಿಲೇವರಿ ಬಾಯ್ಗಳ ಮೇಲೆ ಸಿಸಿಬಿ ಕಣ್ಣಿಡಲಿದೆ ಎಂದು ಎಚ್ಚರಿಸಿದ್ದಾರೆ.
ಮಹಿಳೆಯರ ಮೇಲೆ ದೌರ್ಜನ್ಯ ಸೇರಿದಂತೆ ದರೋಡೆಯತಂಹ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಎಚ್ಚರಿಕೆ ನೀಡಿ, ಆ್ಯಪ್ ಕಂಪನಿಗಳಿಗೆ ಕೆಲ ಸೂಚನೆಗಳನ್ನೂ ನೀಡಿದ್ದಾರೆ. ಆಪ್ ಆಧಾರಿತ ಸೇವೆಯಲ್ಲಿ ಸುಮಾರು 80 ಸಾವಿರಕ್ಕೂ ಅಧಿಕ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ.
ಹಿನ್ನೆಲೆ ಪರಿಶೀಲಿಸಬೇಕು: ಅಪರಾಧ ಹಿನ್ನೆಲೆ ಉಳ್ಳ ಕೆಲವರು ಈ ಸೇವೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂತವರ ಮೇಲೆ ಹದ್ದಿನ ಕಣ್ಣಿಡಬೇಕು. ಕೆಲಸಕ್ಕೆ ಸೇರುವವರ ಹಿನ್ನೆಲೆ ಪರಿಶೀಲನೆ ನಡೆಸುವುದು ಕಂಪನಿಗಳ ಜವಾಬ್ದಾರಿಯಾಗಿದ್ದು, ಕೆಲಸಕ್ಕೆ ಸೇರುವವರ ವಿಳಾಸ ಪರಿಶೀಲನೆ ನಡೆಸುವುದು ಕಡ್ಡಾಯ ಎಂದು ಕಂಪನಿಗಳಿಗೆ ಸೂಚನೆ ನೀಡಿದ್ದಾರೆ.
ಆ್ಯಪ್ ಆಧಾರಿತ ಕಂಪನಿಗಳಿಗೆ ನಗರ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್..! ಕೆಲಸ ಮಾಡುವರ ಮಾಹಿತಿ ಲಭ್ಯವಿರಬೇಕು: ಅಪರಾಧ ಹಿನ್ನೆಲೆ ಉಳ್ಳವರಾದರೆ ಅತಂಹವರನ್ನ ಕೆಲಸಕ್ಕೆ ನೇಮಿಸಿಕೊಳ್ಳಬಾರದು. ಈ ಮಾಹಿತಿಯನ್ನು ಸ್ಥಳೀಯ ಪೊಲೀಸರ ಗಮನಕ್ಕೆ ತರಬೇಕು. ಸಿಬ್ಬಂದಿ ನೇಮಕವಾದ ನಂತರ ತಿಂಗಳಿಗೊಮ್ಮೆ ಅವರ ಹಿನ್ನೆಲೆ ಪರಿಶೀಲನೆ ಮಾಡಬೇಕು. ನೇಮಕವಾದವರ ಸಂಪೂರ್ಣ ಮಾಹಿತಿ ಆ್ಯಪ್ನಲ್ಲಿ ಉಲ್ಲೇಖ ಮಾಡಬೇಕು ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಮನೆ ಕಳ್ಳತನ: ಬೆಂಗಳೂರು ನಗರ ಪೊಲೀಸ್ ಇಲಾಖೆಯಿಂದ ಕಿರುಚಿತ್ರದ ಮೂಲಕ ಜಾಗೃತಿ