ಬೆಂಗಳೂರು: ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಹೀಗಾಗಿ ನಗರದಲ್ಲಿ ಆಸ್ಪತ್ರೆಗೆ ಹೋಗಲು ಪರದಾಡುವ ರೋಗಿಗಳ ಬಳಕೆಗೆ ಪೊಲೀಸರ ಹೊಯ್ಸಳ ವಾಹನಗಳ ನಿಯೋಜನೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಅನಾರೋಗ್ಯವಿದ್ರೆ ಡೋಂಟ್ ವರಿ... ಡಯಾಲಿಸಿಸ್, ಹೃದ್ರೋಗಿಗಳ ನೆರವಿಗೆ ಬರಲಿದೆ ಹೊಯ್ಸಳ ವಾಹನ - ಭಾಸ್ಕರ್ ರಾವ್ ಟ್ವೀಟ್
ಲಾಕ್ಡೌನ್ ನಿಂದಾಗಿ ಪರದಾಡುತ್ತಿದ್ದ ರೋಗಿಗಳ ಬಳಕೆಗಾಗಿ ಪೊಲೀಸರ ಹೊಯ್ಸಳ ವಾಹನಗಳನ್ನು ನಿಯೋಜಿಸಲಾಗಿದೆ.
ನಗರದಲ್ಲಿ ನಿನ್ನೆಯಿಂದ ನಗರದಲ್ಲಿ 250 ಹೊಯ್ಸಳ ವಾಹನಗಳು ಕಾರ್ಯರಂಭ ಮಾಡಿದ್ದು ಒಂದೇ ದಿನ ಸುಮಾರು 4,500 ಮಂದಿ ಹೊಯ್ಸಳ ಬಳಕೆ ಮಾಡಿದ್ದಾರೆ.
ಡಯಾಲಿಸಿಸ್, ಕ್ಯಾನ್ಸರ್ ರೋಗಿಗಳು, ಕಾರ್ಮಿಕರು, ಹೃದಾಯಘಾತ ಮತ್ತು ಹಿರಿಯ ನಾಗರಿಕರು ಹೆಚ್ಚಿನ ಮಂದಿ 100ಕ್ಕೆ ಕರೆ ಮಾಡಿ ಹೊಯ್ಸಳ ಕೇಳುತ್ತಿದ್ದರು. ಹೀಗಾಗಿ ತುರ್ತು ಸನ್ನಿವೇಶದಲ್ಲಿರುವ ನಾಗರಿಕರ ಬಳಕೆಗೆ 250 ಹೊಯ್ಸಳವನ್ನ ಸರ್ಕಾರದ ಸೂಚನೆ ಮೇರೆಗೆ ಪೊಲೀಸ್ ಕಮೀಷನರ್ ನೀಡಿದ್ದಾರೆ. ಹೀಗಾಗಿ ಹೊಯ್ಸಳ ವಾಹನಗಳು ಯಾವುದೇ ತುರ್ತು ಸಂದರ್ಭದಲ್ಲಿ ಆರೋಗ್ಯ ವಿಚಾರಕ್ಕೆ ಕರೆ ಮಾಡಿದಾಗ ಮನೆ ಹತ್ತಿರ ತೆರಳಿಸೇವೆ ಸಲ್ಲಿಸಲಿದೆ.