ಕರ್ನಾಟಕ

karnataka

ETV Bharat / state

Jobs in Bengaluru: ಬೆಂಗಳೂರು ಕಾಫಿ ಬೋರ್ಡ್​ನಲ್ಲಿದೆ ಉದ್ಯೋಗ; ಅರ್ಹತೆ ಏನು? ಸಂಬಳ ಎಷ್ಟು? ಸಂಪೂರ್ಣ ಮಾಹಿತಿ - ಎರಡು ತಾಂತ್ರಿಕ ಸಹಾಯಕರು

ಬೆಂಗಳೂರು ಕಾಫಿ ಬೋರ್ಡ್​​ ಮತ್ತು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

Bengaluru Coffee board and Karnataka High Court Recruitment
Bengaluru Coffee board and Karnataka High Court Recruitment

By

Published : Jun 23, 2023, 6:58 PM IST

ಬೆಂಗಳೂರಿನ ಕಾಫಿ ಬೋರ್ಡ್​ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಾಫಿ ಬೋರ್ಡ್​ನಲ್ಲಿ ಎರಡು ತಾಂತ್ರಿಕ ಸಹಾಯಕರು - ಕೆಮಿಸ್ಟ್ರಿ/ ಮೈಕ್ರೋಬಯೋಲಾಜಿ ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುವುದು. ಎಂಎಸ್‌ಸಿ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ನೇಮಕಾತಿ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ಹುದ್ದೆಗಳ ವಿವರ: ತಾಂತ್ರಿಕ ಹುದ್ದೆಗಳಿಗೆ ಕೆಮಿಸ್ಟ್ರಿ, ಅಪ್ಲೈಡ್​ ಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಪದವಿ, ಮೈಕ್ರೋಬಯೋಲಾಜಿ ಅಥವಾ ಅಪ್ಲೈಡ್​ ಮೈಕ್ರೋಬಯೋಲಾಜಿ, ಫುಡ್​ ಮೈಕ್ರೋಬಯೋಲಾಜಿಯಲ್ಲಿ ಪದವಿ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು.

ಅರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಹಾರ ಗುಣಮಟ್ಟ ವಿಚಾರದಲ್ಲಿ ಎರಡು ವರ್ಷದ ಅನುಭವ ಹೊಂದಿರಬೇಕು.

ವಯೋಮಿತಿ: ಗರಿಷ್ಠ ವಯೋಮಿತಿ 35 ವರ್ಷ ಮೀರಿರಬಾರದು.

ಅಧಿಸೂಚನೆ

ಈ ಹುದ್ದೆಗಳು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ಎರಡು ವರ್ಷದ ಗುತ್ತಿಗೆ ಅವಧಿಗೆ ನೇಮಕ ಮಾಡಲಾಗುತ್ತದೆ. ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ವಿಸ್ತರಣೆ ನಡೆಸಲಾಗುವುದು. ಮಾಸಿಕ 30 ಸಾವಿರ ರೂ ವೇತನ ನಿಗದಿಪಡಿಸಲಾಗಿದೆ.

ಅಭ್ಯರ್ಥಿಗಳು ಇಮೇಲ್​​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. cqd.coffeeboard@gmail.com ಇಮೇಲ್​ ವಿಳಾಸಕ್ಕೆ ಪಿಡಿಎಫ್​ ಫಾರ್ಮಾಟ್​ನಲ್ಲಿ ಅಗತ್ಯ ಶೈಕ್ಷಣಿಕ, ಅನುಭವ ಸೇರಿದಂತೆ ಇನ್ನಿತರ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಬೇಕಿದೆ. ಈ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 23 ಆಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಸೇರಿದಂತೆ ಅಧಿಕೃತ ಅಧಿಸೂಚನೆಗೆ indiacoffee.org ಭೇಟಿ ನೀಡಬಹುದು.

ಹೈಕೋರ್ಟ್​ನಲ್ಲಿದೆ ಕೇಬಲ್​ ಆಪರೇಟರ್​ ಹುದ್ದೆ:ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಖಾಲಿ ಇರುವ ಕೇಬಲ್​​ ಆಪರೇಟರ್​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್​ಎಸ್​ಎಲ್​ಸಿ ಅಥವಾ ಐಟಿಐ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಗ್ರೂಪ್​ ಡಿ ವೃಂದದ ಈ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.

18ರಿಂದ 35 ವರ್ಷ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ, ವರ್ಗ2 ಎ, 2ಬಿ, 3ಎ ಮತ್ತು 3ಬಿ ಮತ್ತು ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಮಾಸಿಕ 19,900 ರೂ ರಿಂದ 63,200 ರೂ ವೇತನ ನಿಗದಿ ಮಾಡಲಾಗಿದೆ. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಸಾಮಾನ್ಯ ಅಭ್ಯರ್ಥಿಗಳಿಗೆ 200 ರೂ ಅರ್ಜಿ ಶುಲ್ಕ, ಉಳಿದ ಅಭ್ಯರ್ಥಿಗಳಿಗೆ 100 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 17 ಆಗಿದ್ದು, ಕಡೆಯ ದಿನಾಂಕ ಜುಲೈ 20 ಆಗಿದೆ. ಹೆಚ್ಚಿನ ಮಾಹಿತಿ ಸೇರಿದಂತೆ ಅಧಿಕೃತ ಅಧಿಸೂಚನೆಗೆ karnatakajuduciary.kar.nic.in ಭೇಟಿ ನೀಡಿ.

ಇದನ್ನೂ ಓದಿ: Govt Jobs: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇದೆ ಸಮಾಲೋಚಕರ ಹುದ್ದೆ

ABOUT THE AUTHOR

...view details