ಕರ್ನಾಟಕ

karnataka

ETV Bharat / state

Drugs: ಬೆಂಗಳೂರಿನಲ್ಲಿ 1 ತಿಂಗಳಲ್ಲಿ ₹18 ಕೋಟಿ ಮೌಲ್ಯದ 1,785 ಕೆಜಿ ಡ್ರಗ್ಸ್ ಜಪ್ತಿ: 487 ಆರೋಪಿಗಳು ಸೆರೆ - ಮಾದಕ ವಸ್ತು ಸೇವನೆ ಹಾಗೂ ಮಾರಾಟ

Bengaluru Police confiscated drugs: ಜುಲೈ ಒಂದೇ ತಿಂಗಳಿನಲ್ಲಿ ಬೆಂಗಳೂರು ನಗರ ಪೊಲೀಸರು 18 ಕೋಟಿ ರೂ ಮೌಲ್ಯದ ಡ್ರಗ್ಸ್​ ವಶಪಡಿಸಿಕೊಂಡಿದ್ದಾರೆ.

ಡ್ರಗ್ಸ್ ಜಪ್ತಿ
ಡ್ರಗ್ಸ್ ಜಪ್ತಿ

By

Published : Jul 31, 2023, 2:26 PM IST

ಡ್ರಗ್ಸ್‌ ಜಪ್ತಿ

ಬೆಂಗಳೂರು:ಮಾದಕ ವಸ್ತು ಸೇವನೆ, ಮಾರಾಟ ವಿರುದ್ಧ ಸಮರ ಸಾರಿರುವ‌ ನಗರ ಪೊಲೀಸರು ಜುಲೈನಲ್ಲಿ ₹18 ಕೋಟಿ ಮೌಲ್ಯದ 1,785 ಕೆ.ಜಿ ತೂಕದ ವಿವಿಧ ಮಾದರಿಯ ಡ್ರಗ್ಸ್​ ವಶಪಡಿಸಿಕೊಂಡಿದ್ದಾರೆ. ಮಾದಕ ವಸ್ತು ಸೇವನೆ ಹಾಗೂ ಮಾರಾಟ ಮಾಡುವವರ ವಿರುದ್ಧ ಕಳೆದೊಂದು ತಿಂಗಳಲ್ಲಿ 378 ಪ್ರಕರಣಗಳು ದಾಖಲಿಸಲಾಗಿದೆ.

474 ಭಾರತೀಯರನ್ನು ಹಾಗೂ 13 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. 72 ಪ್ರಕರಣಗಳಲ್ಲಿ ಡ್ರಗ್ ಪೆಡ್ಲರ್​ಗಳ‌ ವಿರುದ್ಧ, 306 ಪ್ರಕರಣಗಳಲ್ಲಿ ಡ್ರಗ್ಸ್ ಸೇವನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಕ್ರಮವಾಗಿ ನೆಲೆಸಿದ್ದ 11 ಜನ ವಿದೇಶಿಯರನ್ನು ಗಡಿಪಾರು ಮಾಡಲಾಗಿದೆ‌. 18 ಕೋಟಿ ರೂ ಮೌಲ್ಯದ 1,785 ಕೆ.ಜಿ.‌ಮಾದಕ ವಸ್ತು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಪೈಕಿ 1,723 ಕೆ.ಜಿ ಅಫೀಮು, 55,895 ಕೆ.ಜಿ ಹೆರಾಯಿನ್, 40 ಗ್ರಾಂ ಹಾಶಿಶ್ ಆಯಿಲ್, 1.026 ಕೆ.ಜಿ ಚರಸ್ ಸೇರಿದಂತೆ 572 ವಿವಿಧ ರೀತಿಯ ಮಾತ್ರೆಗಳು 43 ಎಲ್‌ಎಸ್‌ಡಿ ಸ್ಟಿಪ್ಸ್​ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.

ಮಾದಕ ವಸ್ತು ಸೇವನೆ ಬಗ್ಗೆ ಅರಿವು ಮೂಡಿಸಲು ಕಾಲೇಜುಗಳಿಗೆ ತೆಕಳಿ ಪೊಲೀಸರು ತಿಳುವಳಿಕೆ ಮೂಡಿಸುತ್ತಿದ್ದಾರೆ. ನಿರಂತರ ಕಾರ್ಯಾಚರಣೆ ನಡೆಸಿ 21 ಪ್ರಕರಣಗಳನ್ನು ಮತ್ತು ಸೇವನೆ ಮಾಡುತ್ತಿದ್ದವರ ವಿರುದ್ಧ 32 ಪ್ರಕರಣ ದಾಖಲಿಸಿದ್ದಾರೆ. ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದವರ ವಿರುದ್ಧ 24 ಪ್ರಕರಣಗಳ ದಾಖಲಿಸಿಕೊಂಡಿದ್ದಾರೆ. ಇನ್ನೂ 3,588 ಲಘು ಪ್ರಕರಣ ದಾಖಲಿಸಿದ್ದು 5,99,350 ರೂ ದಂಡ ವಿಧಿಸಲಾಗಿದೆ.

ಈ ತಿಂಗಳ ಪ್ರಾರಂಭದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಡ್ರಗ್ಸ್​ ಜಾಲದ ಸದಸ್ಯನೋರ್ವನನ್ನು ವಿ.ವಿ.ಪುರ ಪೊಲೀಸರು ಬಂಧಿಸಿದ್ದರು. ಜ್ಯೂಸ್​ ರೀತಿಯಲ್ಲಿ ತಯಾರಿಸುತ್ತಿದ್ದ ಮಾದಕ ವಸ್ತುವನ್ನು ಮೊದಲಿಗೆ ತೋಟದಲ್ಲಿ ಅಫೀಮು ಗಿಡದಂತೆ ಬೆಳೆಸಲಾಗುತ್ತದೆ. ಗಿಡ ದೊಡ್ಡದಾದ ಬಳಿಕ ಬೆಳೆಯುವ ಕಾಯಿಯನ್ನು ಬ್ಲೇಡ್​ನಿಂದ ಕೆರೆದು ಅದರಿಂದ ಬರುವ ಹಾಲು ಸಂಗ್ರಹಿಸುತ್ತಾರೆ. ಇದರ ಹೆಸರೇ ಅಫೀಮು. ಇದನ್ನೇ ಡ್ರಗ್ಸ್ ಮಾಡಿ ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಆರೋಪಿಗಳು ಮಾದಕ ದ್ರಾವಣವನ್ನು ಜ್ಯೂಸ್​ನೊಂದಿಗೆ ಬೆರೆಸಿ ಕೊಡುತ್ತಿದ್ದರು. ಹೀಗೆ ಬೆಂಗಳೂರಿನ ವಿ.ವಿ.ಪುರಂನಲ್ಲಿ ಶೇಖರಣೆ ಮಾಡಲಾಗಿದ್ದ ಗೋಡೌನ್ ಮೇಲೆ ದಾಳಿ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಇದನ್ನೂ ಓದಿ:ಮಾದಕ ವಸ್ತು ದಂಧೆ: ಜಾರ್ಖಂಡ್‌ನ ಮೂವರು ಮಹಿಳೆಯರು ಬೆಂಗಳೂರಿನಲ್ಲಿ ಸೆರೆ

ABOUT THE AUTHOR

...view details