ಬೆಂಗಳೂರು: ನಗರದಲ್ಲಿ ವಾಹನಗಳಿಂದ ಬರುವ ಧೂಳು, ಹೊಗೆ, ಅಭಿವೃದ್ಧಿ ಕಾಮಗಾರಿಗಳಿಂದಾಗುವ ಮಾಲಿನ್ಯದಿಂದ ಗಾಳಿಯ ಗುಣಮಟ್ಟ ಹಾಳಾಗಿದ್ದು, ದೀಪಾವಳಿ ಹಬ್ಬದಲ್ಲಿ ಸಿಡಿಸಿದ ಪಟಾಕಿಗಳಿಂದ ಮಾಲಿನ್ಯ ಹೆಚ್ಚಳವಾಗಿದೆ.
ದೀಪಾವಳಿ ಪಟಾಕಿ ಅಬ್ಬರದಿಂದ ಕುಸಿದ ಬೆಂಗಳೂರಿನ ವಾಯು ಗುಣಮಟ್ಟ - ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿತ
ದೀಪಾವಳಿ ಹಬ್ಬದಂದು ನಗರದಲ್ಲಿ ಸಿಡಿಸಿದ ಪಟಾಕಿಯಿಂದ ರಾಜಧಾನಿಯಲ್ಲಿ ವಾಯು ಗುಣಮಟ್ಟ ಹದಗೆಟ್ಟಿದೆ.
![ದೀಪಾವಳಿ ಪಟಾಕಿ ಅಬ್ಬರದಿಂದ ಕುಸಿದ ಬೆಂಗಳೂರಿನ ವಾಯು ಗುಣಮಟ್ಟ Bangalore city Air quality](https://etvbharatimages.akamaized.net/etvbharat/prod-images/768-512-13560916-thumbnail-3x2-bngjpg.jpg)
ವಾಯು ಗುಣಮಟ್ಟ
ಸಿಲಿಕಾನ್ ಸಿಟಿಯಲ್ಲಿ ಗಾಳಿ ಗುಣಮಟ್ಟ ಸೂಚ್ಯಂಕ ಉತ್ತಮ ಸ್ಥಿತಿಯಿಂದ ಸಮಾಧಾನಕರ ಸ್ಥಿತಿಗೆ ಇಳಿಕೆಯಾಗಿದೆ. ಆದರೆ ಇತರ ನಗರಗಳಿಗೆ ಹೋಲಿಸಿದರೆ ನಗರದ ವಾಯುಗುಣಮಟ್ಟ ಉತ್ತಮ ಸ್ಥಿತಿಯಲ್ಲಿದೆ. ದೀಪಾವಳಿಗೂ ಮೊದಲು ಅಂದರೆ ನ.0 2 ರಂದು ಹಾಗೂ ದೀಪಾವಳಿ ನಂತರ ನ.0 4 ರಂದು ಗಾಳಿ ಗುಣಮಟ್ಟ ಹೀಗಿದೆ..
ಸ್ಥಳ | ಗಾಳಿಗುಣಮಟ್ಟ(AQI) | (ನ.2- ನ.4) |
ಹೆಬ್ಬಾಳ | 28 | 53 |
ಜಯನಗರ | 62 | 73 |
ಕ.ವಿ.ಕಾ ಮೈಸೂರು ರಸ್ತೆ | 60 | 67 |
ನಿಮ್ಹಾನ್ಸ್ | 24 | 38 |
ಹೆಚ್ಎಸ್ಆರ್ ಲೇಔಟ್ | 43 | 41 |
ಮೆಜೆಸ್ಟಿಕ್ | 104 | 120 |
ಶಿವನಗರ (kspcb) | 39 | 53 |
ಕಾಡುಬೀಸನಹಳ್ಳಿ | 52 | 55 |
ಬಿಟಿಎಂ ಲೇಔಟ್ | 72 | 67 |
ವಿಭಾಗ | ಆರೋಗ್ಯ ಪರಿಣಾಮ |
ಉತ್ತಮ (0-50) | ಸಣ್ಣ ಪ್ರಮಾಣದ ಪ್ರಭಾವ |
ಸಮಾಧಾನಕರ(51-100) | ಸೂಕ್ಷ್ಮ ಜನರಿಗೆ ಉಸಿರಾಟಕ್ಕೆ ಅಡಚಣೆ |
ಮಧ್ಯಮ(101-200) | ಮಕ್ಕಳು, ವಯಸ್ಸಾದವರು, ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ರೋಗಿಗಳಿಗೆ ಉಸಿರಾಟದ ಸಮಸ್ಯೆ |
ವಾಯುಗುಣಮಟ್ಟ ಸೂಚ್ಯಂಕ 201 ರಿಂದ 400 ಮೇಲ್ಪಟ್ಟು ಕಳಪೆ, ತೀರ ಕಳಪೆ ಹಾಗೂ ತೀವ್ರ ಕೆಟ್ಟ ಮಾಲಿನ್ಯದ ಸ್ಥಿತಿ ಉಂಟಾದರೆ ಆರೋಗ್ಯಕರವಾಗಿರುವ ಜನರಿಗೂ ಉಸಿರಾಟದ ಸಮಸ್ಯೆ ಉಂಟಾಗಲಿದೆ.