ಬೆಂಗಳೂರು: ರಾಜಕಾಲುವೆಗೆ ಬಿದ್ದು ಮಗು ಕೊಚ್ಚಿ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಮಧ್ಯೆ ಕಾಲುವೆಗೆ ಬಿದ್ದ ಬಾಲಕ ಮಹಮ್ಮದ್ನನ್ನು ಪಕ್ಕದ ಮನೆಯ ಬಾಲಕಿವೋರ್ವಳು ಕಸ ಬಿಸಾಡಲು ಕರೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಾಲಕ ರಾಜಕಾಲುವೆಗೆ ಬಿದ್ದ ಪ್ರಕರಣಕ್ಕೆ ಟ್ವಿಸ್ಟ್: ದೃಶ್ಯ ಸಿಸಿಟಿವಿಯಲ್ಲಿ ಕೊನೆಕ್ಷಣದ ದೃಶ್ಯ ಸೆರೆ - Boy fallen in to canel
ಗುಡ್ಡದಹಳ್ಳಿಯಲ್ಲಿ ಬಾಲಕ ರಾಜಕಾಲುವೆಗೆ ಬಿದ್ದು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಕೈಗೊಂಡಿರುವ ಪೊಲೀಸರು ನಾಪತ್ತೆಯಾದ ಬಾಲಕ, ಪಕ್ಕದ ಮನೆಯ ಬಾಲಕಿವೋರ್ವಳೊಂದಿಗೆ ಕಸ ಎಸೆಯಲು ತೆರಳಿದ್ದ ದೃಶ್ಯ ಸಿಸಿಟಿವಿ ಪತ್ತೆಯಾಗಿದೆ.

ಕಳೆದ ಶುಕ್ರವಾರ ಬಾಲಕ ಮಹಮ್ಮದ್ ತನ್ನ ಪಕ್ಕದ ಮನೆ ಹುಡುಗಿ ಜೊತೆ ಕಸ ಎಸೆಯಲು ತೆರಳಿದ್ದ. ಈ ವೇಳೆ ಆಯತಪ್ಪಿ ಗುಡ್ಡದಹಳ್ಳಿಯ ದೊಡ್ಡ ಮೊರಿಯೊಳಗೆ ಬಿದ್ದಿದ್ದ. ಆತ ಬಿದ್ದಿದ್ದನ್ನು ನೋಡಿದ ಬಾಲಕಿ ಸ್ಥಳದಿಂದ ಓಡಿ ಬಂದಿದ್ದಳು. ಆದ್ರೆ ಮಹಮ್ಮದ್ ಕಾಲುವೆಯಲ್ಲಿ ಬಿದ್ದಿರುವ ಬಗ್ಗೆ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ ಎನ್ನಲಾಗ್ತಿದೆ.
ಇನ್ನು ಮಹಮ್ಮದ್ ಕಾಣೆಯಾಗಿರುವ ವಿಚಾರ ತಿಳಿದ ಆತನ ತಾಯಿ ಗುಲ್ಶಾನ್, ಮಗನನ್ನು ಹುಡುಕಿದ್ದಾಳೆ. ಮಗು ಎಲ್ಲೂ ಪತ್ತೆಯಾಗದಿದ್ದರಿಂದ ಮರುದಿನ ಬೆಳಗ್ಗೆ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪೊಲೀಸರು ಬಾಲಕನಿಗಾಗಿ ಶೋಧಕಾರ್ಯ ಆರಂಭಿಸಿದ್ದರು. ಈ ವೇಳೆ ಸಿಸಿಟಿವಿ ಪರಿಶೀಲಿಸಿದಾಗ ಮಹಮ್ಮದ್ ನ್ನ್ನು ಬಾಲಕಿ ಕರೆದೊಯ್ದಿರುವ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಬಾಲಕಿಯನ್ನು ಪೋಷಕರು ವಿಚಾರಣೆ ನಡೆಸುತ್ತಿದ್ದು, ಆಕೆ ಹೆದರಿಕೊಂಡಿದ್ದು ಸರಿಯಾದ ಉತ್ತರ ನೀಡದ್ದಕ್ಕೆ ಪೋಷಕರು ಕಂಗಾಲಾಗಿದ್ದಾರೆ.