ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ನಾಳೆ ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ಸೇವೆಯೇ ಗತಿ. ಯಾಕೆ ಎಂದರೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ-ಟ್ಯಾಕ್ಸಿ ಚಾಲಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಬೆಂಗಳೂರಿಗರ ಗಮನಕ್ಕೆ: ನಾಳೆ ಆಟೋ - ಟ್ಯಾಕ್ಸಿ ರಸ್ತೆಗಿಳಿಯೋಲ್ಲ- ಮುಷ್ಕರಕ್ಕೆ ಕರೆ ನೀಡಿದ ಚಾಲಕರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ಆಟೋ - ಟ್ಯಾಕ್ಸಿ ಚಾಲಕರು ಪ್ರತಿಭಟನೆಗೆ ಕರೆ ನೀಡಿದ್ದು, ಬೆಂಗಳೂರಿನಲ್ಲಿ ನಾಳೆ ಯಾವುದೇ ಆಟೋ, ಟ್ಯಾಕ್ಸಿಗಳು ಪ್ರಯಾಣಕ್ಕೆ ಲಭ್ಯವಿಲ್ಲ.
ಮುಷ್ಕರಕ್ಕೆ ಕರೆ ನೀಡಿದ ಚಾಲಕರು
ನಾಳೆ ನಗರದ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೆ ಚಾಲಕರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 20ಕ್ಕೂ ಹೆಚ್ಚು ಒಕ್ಕೂಟಗಳು ಸೇರಿ ಮುಷ್ಕರಕ್ಕೆ ಕರೆ ನೀಡಿದ್ದು, ಈ ಸಂಬಂಧ ನಮ್ಮ ಪ್ರತಿನಿಧಿಯೊಂದಿಗೆ ಚಾಲಕರ ಸಂಘಟನೆಯ ಸದಸ್ಯರು ಮಾತನಾಡಿ ಮುಷ್ಕರದ ಬಗ್ಗೆ ಮಾಹಿತಿ ನೀಡಿದ್ದಾರೆ.
ಚಾಲಕರ ಬೇಡಿಕೆಗಳು ಏನು?
- ಕೊರೊನಾ ಟೈಂನಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಬೇಕು.
- ಖಾಸಗಿ ಫೈನಾನ್ಸಿಯರ್ಗಳಿಂದ ದುಬಾರಿ ಬಡ್ಡಿ, ಚಕ್ರ ಬಡ್ಡಿ, ಸಾಲ ಮನ್ನಾ ಮಾಡಬೇಕು.
- ದುಬಾರಿ ದಂಡ ವಿಧಿಸುವ ಐಎಂವಿ ಕಾಯ್ದೆ ವಾಪಸಾತಿಗೆ ಒತ್ತಾಯ
- ಕಲ್ಯಾಣ ಮಂಡಳಿ ರಚಿಸಿ ಕಲ್ಯಾಣ ಕಾರ್ಯಕ್ರಮ ಜಾರಿ ಮಾಡಬೇಕು.