ಕರ್ನಾಟಕ

karnataka

ETV Bharat / state

ಗುದನಾಳದಲ್ಲಿ ಚಿನ್ನ ಕಳ್ಳಸಾಗಾಣಿಕೆ... ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಮಹಿಳೆ - ಬೆಂಗಳೂರು ವಿಮಾನ ನಿಲ್ದಾಣ ಸುದ್ದಿ

ಕ್ಯಾಪ್ಸುಲ್​ವೊಳಗೆ ಚಿನ್ನವಿಟ್ಟು, ಅಂತಹ ಚಿನ್ನದ ಕ್ಯಾಪ್ಸುಲ್​ಗಳನ್ನು ಗುದನಾಳದಲ್ಲಿಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಮಹಿಳೆಯನ್ನ ಕಸ್ಟಮ್ಸ್​ ಅಧಿಕಾರಿಗಳು ಬೆಂಗಳೂರು ಏರ್​ಪೋರ್ಟ್​ನಲ್ಲಿ ಬಂಧಿಸಿದ್ದಾರೆ.

Airport customs officers seized gold, Bengaluru Airport customs officers, Bengaluru Airport news, ಬಂಗಾರ ವಶಕ್ಕೆ ಪಡೆದ ಏರ್​ಪೋರ್ಟ್​ ಕಸ್ಟಮ್ಸ್ ಅಧಿಕಾರಿಗಳು, ಬೆಂಗಳೂರು ವಿಮಾನ ನಿಲ್ದಾಣ ಸುದ್ದಿ,
ಏರ್​ಪೋರ್ಟ್​ ಕಸ್ಟಮ್ಸ್ ಅಧಿಕಾರಿಗಳು

By

Published : Dec 24, 2021, 3:42 AM IST

ದೇವನಹಳ್ಳಿ :ಗುದನಾಳದಲ್ಲಿ ಮರೆಮಾಚಿ ಚಿನ್ನ ತುಂಬಿರುವ ಕ್ಯಾಪ್ಸುಲ್​ಗಳನ್ನ ಇಟ್ಟುಕೊಂಡು ಕಳ್ಳ ಸಾಗಣಿಕೆ ಮಾಡುತ್ತಿದ್ದ ಮಹಿಳೆಯನ್ನ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಆರೋಪಿಯಿಂದ 535 ಗ್ರಾಂ ತೂಕದ 26.11 ಲಕ್ಷ ಮೌಲ್ಯದ ಚಿನ್ನ ಜಪ್ತಿ ಮಾಡಿದ್ದಾರೆ.

ಮಂಗಳವಾರ ರಾತ್ರಿ 9: 30 ಕ್ಕೆ ಶಾರ್ಜಾದಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಏರ್ ಅರೇಬಿಯಾ ಜಿ9 498 ವಿಮಾನದಲ್ಲಿ ಮಹಿಳಾ ಪ್ರಯಾಣಿಕೆಯೊಬ್ಬರು ಬಂದಿದ್ದಾರೆ. ಮಹಿಳೆ ಮೇಲೆ ಅನುಮಾನಸ್ಪದ ಮೂಡಿದ ಹಿನ್ನೆಲೆ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಆಕೆಯನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆಕೆ ತನ್ನ ಗುದನಾಳದಲ್ಲಿ ಕ್ಯಾಪ್ಸುಲ್​ಗಳನ್ನ ಅಡಗಿಸಿಕೊಂಡು ಚಿನ್ನ ಕಳ್ಳ ಸಾಗಣಿಕೆ ಮಾಡುತ್ತಿರುವುದರ ಬಗ್ಗೆ ತಿಳಿದಿದೆ.

ಓದಿ:ಫುಡ್ ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬಿದ ಮಹಿಳೆ!

ಸುಡಾನ್ ದೇಶದ ಪಾಸ್ ಪೋರ್ಟ್ ಹೊಂದಿದ ಆಕೆ ವೈದಕೀಯ ವೀಸಾದಲ್ಲಿ ಭಾರತಕ್ಕೆ ಬಂದಿದ್ದಳು. ಏರ್​ಪೋರ್ಟ್ ಟರ್ಮಿನಲ್​ನಲ್ಲಿ ಮಹಿಳೆ ಅನುಮಾನಸ್ಪದ ರೀತಿಯಲ್ಲಿ ಕಂಡಿದ್ದು, ಆಕೆಯನ್ನ ವಿಚಾರಣೆ ನಡೆಸಿದ್ದಾಗ ಚಿನ್ನ ಕಳ್ಳಸಾಗಾಣಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details