ದೇವನಹಳ್ಳಿ:ವಿಶ್ವದ ಅತ್ಯಂತ ಅಪಾಯಕಾರಿಯಾದ ಎಫೆಡ್ರೈನ್ ಡ್ರಗ್ಸ್ ಸಾಗಣೆ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡುವ ಮೂಲಕ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 5 ಕೋಟಿ ಮೌಲ್ಯದ 5.115 ಕೆ.ಜಿ. ಎಫೆಡ್ರೈನ್ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ವಿಶ್ವದ ಅತ್ಯಂತ ಅಪಾಯಕಾರಿಯಾದ ಎಫೆಡ್ರೈನ್ ಡ್ರಗ್ಸ್ ವಿವಿಧ ದೇಶಗಳಲ್ಲಿ ನಿಷೇಧ ಮಾಡಲಾಗಿದೆ. ಎಫೆಡ್ರೈನ್ ಡ್ರಗ್ಸ್ ಕೆಲ ರೋಗಗಳ ಚಿಕಿತ್ಸೆಗಾಗಿ ಕ್ಯಾಪ್ಸೂಲ್, ಟ್ಯಾಬ್ಲೆಟ್, ಚುಚ್ಚುಮದ್ದುಗಳ ರೂಪದಲ್ಲಿ ಬಳಕೆ ಮಾಡಲಾಗುತ್ತಿದೆ. ಚೆನ್ನೈ ಮೂಲದ ವ್ಯಕ್ತಿ ಸುಮಾರು 5 ಕೋಟಿ ಮೌಲ್ಯದ 5.115 ಕೆ.ಜಿ. ಎಫೆಡ್ರೈನ್ ಡ್ರಗ್ಸ್ ಅನ್ನು ಬಟ್ಟೆ ಹೊಲಿಗೆ ಯಂತ್ರದಲ್ಲಿ ಬಳಸುವ ಬಾಬಿನ್ಗಳೊಳಗೆ ಇರಿಸಿ ಆಸ್ಟ್ರೇಲಿಯಾಗೆ ಸಾಗಿಸುತ್ತಿದ್ದ.
ಸುಮಾರು 45 ಬಾಬಿನ್ಗಳೊಳಗೆ ಸುರುಳಿ ರೂಪದಲ್ಲಿ ಎಫೆಡ್ರೈನ್ ಡ್ರಗ್ಸ್ ಇಡಲಾಗಿತ್ತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಮೂಲಕ ಆಸ್ಟ್ರೇಲಿಯಾಗೆ ಕಳಿಸಲಾಗುತ್ತಿತ್ತು. ಈ ಸಂಬಂಧ NDPS ಆಕ್ಟ್ 1985 ಪ್ರಕಾರ ಪ್ರಕರಣ ದಾಖಲಾಗಿದೆ.