ಕರ್ನಾಟಕ

karnataka

ETV Bharat / state

ಬೆಂಗಳೂರು ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ‌ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆ ಹೇಳಿಕೆ ದಾಖಲು - ಆ್ಯಸಿಡ್ ದಾಳಿ ಸಂತ್ರಸ್ತೆ ಹೇಳಿಕೆ ಮ್ಯಾಜಿಸ್ಟ್ರೇಟ್ ಎದುರು ದಾಖಲು

ಬೆಂಗಳೂರಿನಲ್ಲಿ ನಡೆದ ಆ್ಯಸಿಡ್‌ ದಾಳಿ ಪ್ರಕರಣದಲ್ಲಿ ಸಂತ್ರಸ್ತ ಯುವತಿಯ ಹೇಳಿಕೆಯನ್ನು ಪೊಲೀಸರು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಿದ್ದಾರೆ.

bengaluru-acid-attack-victim-statement-recorded-before-magistrate
ಬೆಂಗಳೂರು ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ‌ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆ ಹೇಳಿಕೆ ದಾಖಲು

By

Published : Apr 30, 2022, 10:59 PM IST

ಬೆಂಗಳೂರು:ನಗರದಲ್ಲಿ ನಡೆದ ಆ್ಯಸಿಡ್‌ ದಾಳಿ ಪ್ರಕರಣದಲ್ಲಿ ಸಂತ್ರಸ್ತ ಯುವತಿಯ ಹೇಳಿಕೆಯನ್ನು ಪೊಲೀಸರು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಿದ್ದಾರೆ. ಯುವತಿಯಿಂದ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್/ತಹಶಿಲ್ದಾರ್ ಮುಂದೆ ಈ ಹೇಳಿಕೆ ದಾಖಲು ಮಾಡಲಾಗಿದೆ.

ಕಾನೂನಿನ ಕುಣಿಕೆ ಬಿಗಿಗೊಳಿಸಲು ಪೊಲೀಸರಿಂದ ಈ ಕ್ರಮ ಕೈಗೊಳ್ಳಲಾಗಿದೆ. ತಹಶಿಲ್ದಾರ್ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆದಿದೆ. ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ಬಳಿ ತೆರಳಿ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ 32(1)ಅಡಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ‌. ಒಂದು ವೇಳೆ ದುರಾದೃಷ್ಟವಶಾತ್ ಯುವತಿ ಸಾವನ್ನಪ್ಪಿದಂತಹ ಸಂದರ್ಭದಲ್ಲಿ ಆರೋಪಿಗೆ ಕಠಿಣ ಶಿಕ್ಷೆ ನೀಡಲು ಈ ಹೇಳಿಕೆ ಪ್ರಮುಖ ಅಗತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾರ್ಮೆಂಟ್ಸ್​ನಲ್ಲಿ ಬಳಸುವ ಆ್ಯಸಿಡ್: ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಬಲವಾದ ಸಾಕ್ಷ್ಯಗಳು ಸಂಗ್ರಹವಾಗುತ್ತಿವೆ. ಪ್ರಕರಣದ ತನಿಖೆಯ ವೇಳೆ ಆ್ಯಸಿಡ್ ಎಲ್ಲಿಂದ ಬಂತು ಎಂದು ಮಾಹಿತಿ ಕಲೆ ಹಾಕಲಾಗುತ್ತಿದೆ. ಗಾರ್ಮೆಂಟ್ಸ್ ನಲ್ಲಿ ಬಟ್ಟೆ ವಾಶಿಂಗ್​ಗೆ ಬಳಸುವ ಆ್ಯಸಿಡ್ ಬಳಸಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅರ್ಧ ಲೀಟರ್ ಆ್ಯಸಿಡ್​​ಗೆ ಕೆಮಿಕಲ್ ಮಿಕ್ಸ್ ಮಾಡಿ 10 ಲೀಟರ್​ಗೂ ಹೆಚ್ಚು ನೀರನ್ನು ಸೇರಿಸಿ ಬಳಸುತ್ತಾರೆ. ಬಟ್ಟೆ ಮೇಲಿರುವ ಕೊಳೆ ಹಾಗೂ ಮಾರ್ಕ್​​ಗಳು ಹೋಗಲು ಬಳಸುವ ಆ್ಯಸಿಡ್ ಇದಾಗಿದೆ. ಇದನ್ನು ನೇರವಾಗಿ ಬಳಸಲಾಗಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಆ್ಯಸಿಡ್ ದಾಳಿ ಸಂತ್ರಸ್ತೆಯ ಆರೋಗ್ಯದಲ್ಲಿ ಸುಧಾರಣೆ ಬಳಿಕ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಚಿಂತನೆ: ಸಚಿವ ಸುಧಾಕರ್

ABOUT THE AUTHOR

...view details