ಕರ್ನಾಟಕ

karnataka

ETV Bharat / state

ನೆರೆ ಸಂತ್ರಸ್ತರು ಮರಳಿ ಸಹಜ ಸ್ಥಿತಿಯತ್ತ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ - Wahnikula community

ರಾಜ್ಯಾದ್ಯಂತ ಪ್ರವಾಹಕ್ಕೆ ಸಿಲುಕಿ ಸಂತ್ರಸ್ತರಾಗಿರುವವರು ಸಹಜ ಸ್ಥಿತಿಯತ್ತ ಮರಳಿ ಜೀವನ ನಡೆಸುವಂತಾಗಲಿ ಎಂದು ವಹ್ನಿಕುಲ ಸಮುದಾಯದವರು ವಿಶೇಷ ಪ್ರಾರ್ಥನೆ ನಡೆಸಿದರು. ಸಮುದಾಯದ ಆರಾಧ್ಯ ದೈವ ದ್ರೌಪತಮ್ಮ ದೇವಿ ಜನ್ಮಾಷ್ಠಮಿಯ ಅಂಗವಾಗಿ ವಿಶೇಷ ಮೆರವಣಿಗೆ ನಡೆಸಿ ಸಂತ್ರಸ್ತರಿಗಾಗಿ ಪ್ರಾರ್ಥಿಸಿದರು.

ದ್ರೌಪತಮ್ಮ ದೇವಿ ವಿಶೇಷ ಮೆರವಣಿಗೆ ನಡೆಯಿತು

By

Published : Aug 20, 2019, 8:34 AM IST

ಅನೇಕಲ್: ರಾಜ್ಯಾದ್ಯಂತ ಪ್ರವಾಹಕ್ಕೆ ಸಿಲುಕಿ ಸಂತ್ರಸ್ತರಾಗಿರುವವರು ಸಹಜ ಸ್ಥಿತಿಯತ್ತ ಮರಳಿ ಜೀವನ ನಡೆಸುವಂತಾಗಲಿ ಎಂದು ವಹ್ನಿಕುಲ ಸಮುದಾಯದವರು ವಿಶೇಷ ಪ್ರಾರ್ಥನೆ ನಡೆಸಿದರು.

ವಹ್ನಿಕುಲ ಸಮುದಾಯದ ಆರಾಧ್ಯ ದೈವ ದ್ರೌಪತಮ್ಮ ದೇವಿ ಜನ್ಮಾಷ್ಠಮಿಯ ಅಂಗವಾಗಿ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ದೇವಿಯ ವಿಶೇಷ ಮೆರವಣಿಗೆ ನಡೆಯಿತು.

ದ್ರೌಪತಮ್ಮ ದೇವಿ ವಿಶೇಷ ಮೆರವಣಿಗೆ

ರಾಜ್ಯಾದ್ಯಂತ ಪ್ರವಾಹದಿಂದ ಆಸ್ತಿ ಪಾಸ್ತಿ ನಷ್ಟವಾಗಿ ಸಾಕಷ್ಟು ಕುಟುಂಬಗಳು ಬೀದಿಪಾಲಾಗಿವೆ. ಅಂತಹ ಕುಟುಂಬಗಳು ಮತ್ತೆ ಸಹಜ ಸ್ಥಿತಿಯತ್ತ ಮರಳಿ ಜೀವನ ನಡೆಸುವಾಂತಾಗಲಿ ಎಂದು ವಹ್ನಿಕುಲದ ನೂರಾರು ಜನರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅರಿಶಿನ ನೀರು ತುಂಬಿದ ಕುಂಭಗಳನ್ನು ಹೊತ್ತು ದ್ರೌಪತಮ್ಮ ದೇವಿಯ ಮೆರೆವಣಿಗೆ ನಡೆಸಿದರು.

ABOUT THE AUTHOR

...view details