ಕರ್ನಾಟಕ

karnataka

ETV Bharat / state

ಮಾಸ್ಕ್‌ ವಿಲೇವಾರಿ ಬಗ್ಗೆ ಬೆಂಗಳೂರಿಗರ ಬೇಜವಾಬ್ದಾರಿ; ಪೌರಕಾರ್ಮಿಕರಿಗೆ ಪ್ರಾಣಕಂಟಕ - ಜನರ ಈ ನಿರ್ಲಕ್ಷ್ಯ

ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಎಲ್ಲರೂ ಮಾಸ್ಕ್ ಬಳಕೆ ಮಾಡುತ್ತಿದ್ದಾರೆ. ಆದರೆ, ಬಳಸಿದ ಮಾಸ್ಕ್ ಅನ್ನು ಹೇಗೆ ವಿಲೇವಾರಿ ಮಾಡಬೇಕೆಂದು ಗೊತ್ತಿಲ್ಲದೆ, ಪ್ರತ್ಯೇಕವಾಗಿಯೂ ಕೊಡದೆ ಕಸದ ಜೊತೆ ಮಿಶ್ರ ಮಾಡಿ ಕೊಡುತ್ತಿದ್ದಾರೆ. ಜನರ ಈ ನಿರ್ಲಕ್ಷ್ಯ ಕಸ ಸ್ವಚ್ಛ ಮಾಡುವ ಪೌರಕಾರ್ಮಿಕರಿಗೆ ಕಂಟಕವಾಗಿದೆ.

ಪೌರಕಾರ್ಮಿಕ
ಪೌರಕಾರ್ಮಿಕ

By

Published : Jul 4, 2020, 3:25 PM IST

ಬೆಂಗಳೂರು: ಕೋವಿಡ್ ಭೀತಿಯಿಂದಾಗಿ ಎಲ್ಲರೂ ಮಾಸ್ಕ್ ಬಳಕೆ ಮಾಡುತ್ತಿದ್ದಾರೆ. ಆದರೆ, ಬಳಸಿದ ಮಾಸ್ಕ್ ಅನ್ನು ಹೇಗೆ ವಿಲೇವಾರಿ ಮಾಡಬೇಕೆಂದು ಗೊತ್ತಿಲ್ಲದೆ, ಪ್ರತ್ಯೇಕವಾಗಿಯೂ ಕೊಡದೆ ಕಸದ ಜೊತೆ ಮಿಶ್ರ ಮಾಡಿ ಕೊಡುತ್ತಿದ್ದಾರೆ. ಜನರ ಈ ನಿರ್ಲಕ್ಷ್ಯ ಕಸ ಸ್ವಚ್ಛ ಮಾಡುವ ಪೌರಕಾರ್ಮಿಕರಿಗೆ ಕಂಟಕವಾಗಿದೆ.

ಜಯನಗರದ ವಾರ್ಡ್ ನಂ177ರ ಒಣಕಸ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರೊಬ್ಬರು ನಗರದ ನಾಗರಿಕರಲ್ಲಿ ಕಸದ ಬೇರ್ಪಡಿಸುವಿಕೆ ಕುರಿತು ಮನವಿ ಮಾಡಿದ್ದಾರೆ. ಪ್ರತಿ ದಿನ 200-300 ಮಾಸ್ಕ್​ಗಳು ಕಸದ ಜೊತೆ ಬರುತ್ತಿವೆ. ಇದನ್ನು ಪ್ರತ್ಯೇಕಿಸಲು ಭಯವಾಗುತ್ತಿದೆ. ಹೀಗಾಗಿ ಒಂದು ಪೇಪರ್​ನಲ್ಲಿ ಸುತ್ತಿ ಕೊಡಿ. ಒಂದು ರೆಡ್ ಮಾರ್ಕ್ ಹಾಕಿ ಕೊಟ್ಟರೆ ಇನ್ನೂ ಉತ್ತಮ ಎಂದು ಮನವಿ ಮಾಡಿದ್ದಾರೆ.

ಯಾವುದೇ ಕಾರಣಕ್ಕೂ ಮಿಶ್ರಕಸ ಕೊಡಬೇಡಿ, ಪ್ರತ್ಯೇಕ ಮಾಡಿ, ಅದರಲ್ಲೂ ಮಾಸ್ಕ್ ಪ್ರತ್ಯೇಕಿಸಿ ಕೊಡಿ ಎಂದು ಅವರು ಮನವಿ ಮಾಡಿದ್ದಾರೆ.

ABOUT THE AUTHOR

...view details