ಬೆಂಗಳೂರು: ಕೋವಿಡ್ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಎಲ್ಲರೂ ಕೋವಿಡ್ ಲಸಿಕೆಯತ್ತ ಚಿತ್ತ ನೆಟ್ಟಿದ್ದಾರೆ.
ಇಂದು ನಗರದ ಕಾಮಾಕ್ಷಿಪಾಳ್ಯ, ವಿದ್ಯಾಪೀಠ, ಯಲಹಂಕ ಹಾಗೂ ಆನೇಕಲ್ ತಾಲೂಕಿನ ನಗರ ಒಟ್ಟು ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ನಡೆಯಿತು. ಪ್ರತೀ ಆಸ್ಪತ್ರೆಯಲ್ಲೂ 25 ಜನರಂತೆ ಇಂದು ನೂರು ಜನರಿಗೆ ವ್ಯಾಕ್ಸಿನ್ ನೀಡುವ ಸಿದ್ಧತೆ ಕುರಿತು ತಾಲೀಮು ನಡೆಸಲಾಯಿತು.
ಓದಿ :ಮೊದಲ ಹಂತದಲ್ಲಿ ಮೂರು ಕೋಟಿ ಜನರಿಗೆ ಮಾತ್ರ ಉಚಿತ ಕೋವಿಡ್ ಲಸಿಕೆ: ಹರ್ಷವರ್ಧನ್
ಕಲಾಸಿಪಾಳ್ಯ ಆರೋಗ್ಯ ಕೇಂದ್ರಕ್ಕೆ ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯ ಬೇಟಿ ನೀಡಿದರು. ಆರೋಗ್ಯ ಸಿಬ್ಬಂದಿ ಜೊತೆ ಸಂವಾದ ನಡೆಸಿದರು.
ಬಳಿಕ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, 2020ನೇ ವರ್ಷ ಕೊರೊನಾದಿಂದ ಸವಾಲಾಗಿತ್ತು. 2021 ನೇ ವರ್ಷ ಕೊರೊನಾ ಲಸಿಕೆ ಜನರಿಗೆ ಮುಟ್ಟಿಸುವ ಸವಾಲಿದೆ. ಭಾರತದ ಎಲ್ಲಾ ಮೂಲೆಗಳಲ್ಲಿ ಇರುವ ಆರೋಗ್ಯ ಸಿಬ್ಬಂದಿಗೆ ಮೊದಲ ಆದ್ಯತೆ ಕೊಡಲಾಗಿದೆ. ಬೆಂಗಳೂರಿನಿಂದ 1.65 ಸಿಬ್ಬಂದಿ ಭಾರತದ ಸರ್ಕಾರದ ಕೋವಿಡ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಆದಷ್ಟು ಬೇಗ ಜನರಿಗೂ ಲಭ್ಯ ಆಗಲಿದೆ. ಇದು ಹೊಸ ರೂಪಾಂತರ ವೈರಸ್ಗೂ ಆಗಲಿದೆ. ಲಸಿಕೆ ಹಂಚಿಕೆಯಾಗುವವರೆಗೆ ಸಾರ್ವಜನಿಕರು ಎಚ್ಚರ ವಹಿಸಬೇಕು. ವ್ಯಾಕ್ಸಿನ್ನಿಂದ ಅಡ್ಡ ಪರಿಣಾಮಗಳು ಇದೆ ಎಂಬ ಗುಲ್ಲು ಹಬ್ಬಿದೆ. ಇದು ಸತ್ಯಕ್ಕೆ ದೂರವಾದ್ದು, ಹಿರಿಯ ತಜ್ಞರು ಇದರಿಂದ ಸೈಡ್ ಎಫೆಕ್ಟ್ ಇಲ್ಲ ಅಂತ ಖಚಿತಪಡಿಸಿದ್ದಾರೆ. ಯಾರೂ ಭಯ ಪಡುವ ಅಗತ್ಯ ಇಲ್ಲ. ಜನರಿಗೆ ನಂಬಿಕೆ ಬರಲು ಮುಂದಿನ ದಿನಗಳಲ್ಲಿ ನಾನೂ ಲಸಿಕೆ ತೆಗೆದುಕೊಳ್ಳುತ್ತೇನೆ ಎಂದರು.
ಬೆಂಗಳೂರಿನಲ್ಲಿ ವ್ಯಾಕ್ಸಿನ್ ಡ್ರೈ ರನ್ ಆರಂಭ ಕಾಮಾಕ್ಷಿಪಾಳ್ಯ ಆರೋಗ್ಯ ಕೇಂದ್ರದಲ್ಲೂ ಡ್ರೈ ರನ್ ತಾಲೀಮು ನಡೆಯಿತು. ನೋಂದಣಿ ವಿಭಾಗ, ಕಾಯುವಿಕೆ ರೂಂ, ವಾಕ್ಸಿನೇಷನ್ ರೂಂ, ಅಬ್ಸರ್ವೇಷನ್ ರೂಂ ಈ ರೀತಿ ಹಂತದಲ್ಲಿ ವ್ಯಾಕ್ಸಿನ್ ಪಡೆಯಬೇಕು. ವ್ಯಾಕ್ಸಿನ್ ರೂಂನಲ್ಲಿ ಬಂದ ಬಳಿಕ, ಮೊಬೈಲ್ಗೆ ಬಂದ ಮಾಹಿತಿ, ದಾಖಲೆಗಳನ್ನು ಪರಿಶೀಲಿಸಿ ಕೋವಿಡ್ ಆ್ಯಪ್ನಲ್ಲಿ ದಾಖಲಿಸುತ್ತಾರೆ. ವ್ಯಾಕ್ಸಿನ್ ಯಾವ ರೀತಿ ಕೊಡಲಾಗುತ್ತದೆ, ಎರಡನೇ ಬಾರಿಗೆ ಯಾವಾಗ ಬರಬೇಕು ಎಂಬ ಮಾಹಿತಿ ನೋಡಲಾಗುತ್ತದೆ. ಒಂದು ಬಾರಿ ಲಸಿಕೆ ತೆಗೆದುಕೊಂಡ ಬಳಿಕ 28 ದಿನದ ಬಳಿಕ ಎರಡನೇ ಡೋಸ್ಗೆ ಬರಬೇಕು. ಅವರ ಮೊಬೈಲ್ಗೆ ಮೆಸೇಜ್ ಬರಲಿದೆ. ಆಗ ಬಂದು ಎರಡನೇ ಬಾರಿಗೆ ಬರಬೇಕು ಎಂದರು.
ಓದಿ:ಕಲಬುರಗಿ: ಕೋವಿಡ್ ಲಸಿಕಾ ಡ್ರೈ ರನ್ ಕೇಂದ್ರಕ್ಕೆ ಭೇಟಿ ಡಿಸಿ ಭೇಟಿ, ಪರಿಶೀಲನೆ
ವ್ಯಾಕ್ಸಿನ್ ತೆಗೆದುಕೊಂಡು ಹೋಗುವಾಗ, ಆಶಾ ಹಾಗೂ ಸಿಸ್ಟರ್ಗಳ ನಂಬರ್ ಕೊಡಲಾಗುತ್ತದೆ. ಮನೆಗೆ ಹೋದಬಳಿಕ ಯಾವುದೇ ಅಡ್ಡಪರಿಣಾಮ ಕಂಡುಬಂದರೂ ಕರೆ ಮಾಡಬಹುದು ಎಂದರು. ವ್ಯಾಕ್ಸಿನ್ ಸ್ಟೋರೇಜ್ನಿಂದ ವ್ಯಾಕ್ಸಿನ್ ಕ್ಯಾರಿಯರ್ಗೆ ಶಿಫ್ಟ್ ಮಾಡಿ ಒಂದೊಂದೇ ತೆರೆದುಕೊಡಲಾಗುತ್ತದೆ ಎಂದರು.
ಬಿಬಿಎಂಪಿ ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಮನೋರಂಜನ್ ಹೆಗಡೆ ಮಾತನಾಡಿ, ಎಲ್ಲರೂ ನಿರೀಕ್ಷೆಯಲ್ಲಿದ್ದಾರೆ. ಕಳೆದ ಒಂದು ವರ್ಷದಿಂದ ಹಗಲು ರಾತ್ರಿ ಕೆಲಸ ಮಾಡಿದ್ದು, ವ್ಯಾಕ್ಸಿನ್ಗಾಗಿ ಎದುರು ನೋಡ್ತಿದಾರೆ ಎಂದರು.