ಕರ್ನಾಟಕ

karnataka

ETV Bharat / state

ಗಲಭೆ ವೇಳೆ ಪೊಲೀಸರು ಬಳಸಿದ ಪಿಸ್ತೂಲ್, ರೈಫಲ್ , ಬುಲೆಟ್​ ಎಷ್ಟು? ತನಿಖೆಗಿಳಿದ ಸಿಸಿಬಿ

ಬೆಂಗಳೂರು ಗಲಭೆಯ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಬಳಸಿದ ಪಿಸ್ತೂಲ್, ರೈಫಲ್ಸ್ ಮತ್ತು ಬುಲೆಟ್​ಗಳ ಬಗ್ಗೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಗಲಭೆ ನಡೆದ ದಿನ ಹಲವು ಮಂದಿಗೆ ಗುಂಡು ತಾಗಿದೆ. ಕೆಲವರು ಪೊಲೀಸರಿಗೆ ಸಿಕ್ಕಿಬಿದ್ದು ಚಿಕಿತ್ಸೆ ಪಡೆದಿದ್ದಾರೆ. ಇನ್ನೂ ಕೆಲವರು ತಲೆ ಮರೆಸಿಕೊಂಡಿರುವ ಸಾಧ್ಯತೆಯಿದೆ. ಹೀಗಾಗಿ ಪಿಸ್ತೂಲ್, ರೈಫಲ್​ ತನಿಖೆ ಮಹತ್ವ ಪಡೆದುಕೊಂಡಿದೆ.

Bengalruu riot update
ಬೆಂಗಳೂರು ಗಲಭೆ ಪಿಸ್ತೂಲ್, ರೈಫಲ್ ಬಗ್ಗೆ ತನಿಖೆ

By

Published : Aug 24, 2020, 4:11 PM IST

ಬೆಂಗಳೂರು:ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ವೇಳೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಗುಂಡು ಹಾರಿಸಿದ್ದರು. ಪೊಲೀಸರ ಗುಂಡಿಗೆ ಮೂವರು ಯುವಕರು ಬಲಿಯಾಗಿದ್ದರು. ಇದೀಗ ಘಟನೆ ನಡೆದ ದಿನ ಪೊಲೀಸರು ಮತ್ತು ಕೆಎಸ್​ಆರ್​ಪಿ ಸಿಬ್ಬಂದಿ ಬಳಸಿದ ಪಿಸ್ತೂಲ್, ರೈಫಲ್ ಮತ್ತು ಬುಲೆಟ್​ಗಳ ಬಗ್ಗೆ ಸಿಸಿಬಿ ತಂಡ ತನಿಖೆ ಕೈಗೊಂಡಿದೆ.

ಗಲಭೆ ನಡೆದ ದಿನ ಕೆಎಸ್ಆರ್​ಪಿ ಹಾಗೂ ಪೊಲೀಸ್ ಸಿಬ್ಬಂದಿ ಎಷ್ಟು ಸುತ್ತು ಗುಂಡು ಹಾರಿಸಿದ್ದರು. ಎಷ್ಟು ರೈಫಲ್ ಹಾಗೂ ಪಿಸ್ತೂಲ್​ಗಳನ್ನು ಬಳಸಲಾಗಿತ್ತು. ಎಷ್ಟು ಗುಂಡುಗಳು ಗಲಭೆಕೋರರ ದೇಹಕ್ಕೆ ತಾಗಿದೆ ಎಂಬುದರ ಬಗ್ಗೆ ಸಿಸಿಬಿ ತಂಡ ಮಾಹಿತಿ ಕಲೆ ಹಾಕುತ್ತಿದ್ದು, ‌ಡಿ.ಜೆ. ಹಳ್ಳಿ ಠಾಣೆಗೆ ಭೇಟಿ ನೀಡಿದ ಸಿಸಿಬಿ ಇನ್​ಸ್ಪೆಕ್ಟರ್​ ಮುರುಗೇಂದ್ರಪ್ಪ ಪರಿಶೀಲನೆ ನಡೆಸಿದ್ದಾರೆ.

ಗಲಭೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳಿಗೆ, ಪೊಲೀಸರು ಗಲಭೆ ನಿಯಂತ್ರಿಸಲು ಬಳಸಿದ ಪಿಸ್ತೂಲ್​, ರೈಫಲ್ ಕೂಡ ಪ್ರಮುಖ ಸಾಕ್ಷಿಯಾಗಿವೆ. ಹೀಗಾಗಿ, ಪೊಲೀಸರು ಗುಂಡು ಹಾರಿಸಿದ ಬಗ್ಗೆ ಅಧಿಕಾರಿಗಳು ತನಿಖೆಗಿಳಿದಿದ್ದಾರೆ. ಗಲಭೆ ನಡೆದ ದಿನ ಹಲವು ಮಂದಿಗೆ ಗುಂಡು ತಾಗಿವೆ. ಕೆಲವರು ಪೊಲೀಸರಿಗೆ ಸಿಕ್ಕಿಬಿದ್ದು ಚಿಕಿತ್ಸೆ ಪಡೆದಿದ್ದಾರೆ. ಇನ್ನೂ ಕೆಲವರು ತಲೆಮರೆಸಿಕೊಂಡಿರುವ ಸಾಧ್ಯತೆಯಿದೆ. ಹೀಗಾಗಿ ಪಿಸ್ತೂಲ್, ರೈಫಲ್​ ತನಿಖೆ ಮಹತ್ವ ಪಡೆದುಕೊಂಡಿದೆ.

ಮತ್ತೊಂದೆಡೆ ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿ ‌ಮನೆಗೆ ಬೆಂಕಿ ‌ಹಚ್ಚಿದ್ದ ಆರೋಪಿಗಳಾದ ಫಿರ್ದೋಸ್ ಹಾಗೂ ಸೈಯದ್​​ನನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ಪೊಲೀಸರು ಮತ್ತೆ ವಿಚಾರಣೆಗೆ ಒಳಪಡಿಸಿದ್ದಾರೆ.

ABOUT THE AUTHOR

...view details