ಬೆಂಗಳೂರು:ಡಿ.ಜೆ ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ಗಲಭೆಗೆ ಕಾರಣವಾಗಿದ್ದ ಅವಹೇಳನಕಾರಿ ಪೋಸ್ಟ್ ಹಾಕಿದ್ದ ನವೀನ್ ವಿರುದ್ಧ ದೂರು ನೀಡಲು ಬಂದ ಮೌಲ್ವಿಯ ಬೈಕ್ಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು.
ಮನವಿ ಮಾಡಿದರೂ ಕೇಳದೆ ಪೊಲೀಸ್ ಠಾಣೆ, ವಾಹನಗಳಿಗೆ ಬೆಂಕಿ ಇಟ್ಟರು: ಮೌಲ್ವಿ ಬೇಸರ
ನನಗಿರುವ ಮಾಹಿತಿ ಪ್ರಕಾರ ಗಲಭೆಕೋರರು ಡಿ.ಜೆ. ಹಳ್ಳಿಯವರಲ್ಲ. ಒಂದು ವೇಳೆ ಇಲ್ಲಿಯವರೇ ಆಗಿದ್ದರೆ ನನ್ನ ಮಾತನ್ನು ಕೇಳುತ್ತಿದ್ದರು. ಪೊಲೀಸ್ ಠಾಣೆ ನಮಗೆ ಮಸೀದಿ, ಮಂದಿರವಿದ್ದಂತೆ. ಏನೇ ತೊಂದರೆಯಾದರೂ ನಾವು ಇಲ್ಲಿಗೆ ಬರುತ್ತೇವೆ. ಇಂತಹ ದುಷ್ಕೃತ ಎಸಗಿರುವುದು ನಿಜಕ್ಕೂ ದುರಂತ ಎಂದು ಮೌಲ್ವಿ ಮೌಲಾನ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಮೌಲ್ವಿ ಮೌಲಾನ ಫಿರ್ದೋಸ್ ಪಾಷಾ, ಅವಹೇಳನಕಾರಿ ಪೋಸ್ಟ್ ಹಾಕಿದವನ ವಿರುದ್ಧ ದೂರು ನೀಡಲು ನಾವು ಡಿ.ಜೆ. ಹಳ್ಳಿ ಠಾಣೆಗೆ ಬಂದಿದ್ದೆವು. ಈ ವೇಳೆ ಠಾಣಾಧಿಕಾರಿಗಳು ಒಂದೆರಡು ಗಂಟೆ ಕಾಲ ಕಾಯಿರಿ ಎಂದು ಹೇಳಿದ್ದರು. ಅದರಂತೆ ನಾವು ಠಾಣೆ ಮುಂದೆ ನಿಂತಿದ್ದಾಗ ಹೊರಗಡೆಯಿಂದ ಬಂದ ಗುಂಪೊಂದು ಗಲಭೆ ಎಬ್ಬಿಸಲು ಮುಂದಾಗಿತ್ತು. ಈ ವೇಳೆ ಗಲಾಟೆ ಎಬ್ಬಿಸದಂತೆ ನಾವು ಅವರಿಗೆ ಮನವಿ ಮಾಡಿದ್ದೆವು. ನಮ್ಮ ಮಾತು ಕೇಳದೆ ಠಾಣೆಗೆ ನುಗ್ಗಲು ಯತ್ನಿಸಿದ್ದರು. ಠಾಣೆಯೊಳಗೆ ಹೋಗಲು ವಿಫಲಯತ್ನ ನಡೆಸಿ, ಬಳಿಕ ಪಾರ್ಕಿಂಗ್ ಲಾಟ್ನಲ್ಲಿದ್ದ ನನ್ನ ಬೈಕ್ ಸೇರಿದಂತೆ ಇತರ ವಾಹನಗಳನ್ನು ಸುಟ್ಟಿದ್ದಾರೆ ಎಂದು ತಿಳಿಸಿದರು.
ನನಗಿರುವ ಮಾಹಿತಿ ಪ್ರಕಾರ ಗಲಭೆಕೋರರು ಡಿ.ಜೆ. ಹಳ್ಳಿಯವರಲ್ಲ. ಒಂದು ವೇಳೆ ಇಲ್ಲಿಯವರೇ ಆಗಿದ್ದರೆ ನನ್ನ ಮಾತನ್ನು ಕೇಳುತ್ತಿದ್ದರು. ಪೊಲೀಸ್ ಠಾಣೆ ನಮಗೆ ಮಸೀದಿ, ಮಂದಿರವಿದ್ದಂತೆ, ಏನೇ ತೊಂದರೆಯಾದರೂ ನಾವು ಇಲ್ಲಿಗೆ ಬರುತ್ತೇವೆ. ಇಂತಹ ದುಷ್ಕೃತ ಎಸಗಿರುವುದು ನಿಜಕ್ಕೂ ದುರಂತ ಎಂದು ಮೌಲಾನ ಬೇಸರ ವ್ಯಕ್ತಪಡಿಸಿದರು.