ಬೆಂಗಳೂರು:ರಾಜ್ಯ ರಾಜಧಾನಿಯಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಯು ಅವಾಂತರವನ್ನೇ ಸೃಷ್ಟಿಸಿತ್ತು. ಹೊಸಕೆರೆಹಳ್ಳಿ ,ಮೈಸೂರು ರಸ್ತೆಯ ಸುತ್ತ ಮುತ್ತಲಿನ ಪ್ರದೇಶಗಳಂತೂ ರಾಜಕಾಲುವೆಯ ನೀರಿನ ಜೊತೆಗೆ ಮಳೆ ನೀರು ನುಗ್ಗಿ ಇಡೀ ಮನೆಗಳೇ ಜಲಾವೃತಗೊಂಡಿದ್ದವು. ಸ್ಥಳೀಯ ನಿವಾಸಿಗಳು ಪ್ರಾಣ ಉಳಿಸಿಕೊಳ್ಳಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸ್ಥಳಕ್ಕೆ ಸಿಎಂ ಯಡಿಯೂರಪ್ಪ, ಕಂದಾಯ ಸಚಿವ ಅಶೋಕ್ ಅವರೊಟ್ಟಿಗೆ ಪಾಲಿಕೆ ಆಯುಕ್ತರು ಭೇಟಿ ನೀಡಿದ ನಂತರ ಸಮರೋಪಾದಿಯಲ್ಲಿ ಕೆಲಸಗಳು ನೆಡೆದರು ಸಹ ಸಂಜೆಯವರೆಗೂ ಜನರ ಪರದಾಟ ಮುಂದುವರೆದಿದೆ.
ರಾಜ ಕಾಲುವೆ ಒತ್ತುವರಿಯನ್ನು ಪಾಲಿಕೆಯಿಂದ ತೆರವು ಗೊಳಿಸುವುದಾಗಿ ಹಾಗೂ ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದರೂ. ಈ ಆಶ್ವಾಸನೆ ಈಡೇರುವ ಬಗ್ಗೆ ಜನ ಅನುಮಾನ ವ್ಯಕ್ತ ಪಡಿಸಿದರು.
ಇತ್ತ ಪರಿಹಾರದ ಮೊತ್ತ 25,000. ನೀಡಿರುವುದಕ್ಕೂ ವಿರೋಧ ವ್ಯಕ್ತವಾಗಿದೆ. ಬೆಲೆಬಾಳುವ ವಸ್ತುಗಳು ನೀರುಪಾಲಾಗಿದ್ದು, ಒಂದ್ ಲ್ಯಾಪ್‌ಟಾಪ್ ಬೆಲೆಯೇ 25 ಸಾವಿರ ಇರುತ್ತೆ, ಹೀಗಿರುವಾಗ ಪರಿಹಾರದ ಮೊತ್ತವಾಗಿ 25,000 ಸಾಕಾ ಅನ್ನೋ ಪ್ರಶ್ನೆಯೂ ಕೇಳಿ ಬಂದಿದೆ.
ಒಟ್ಟಿನಲ್ಲಿ ಜನರು ದುಡಿದು ಸಂಪಾದಿಸಿದ ತಮ್ಮ ವಾಹನಗಳು, ಸಾಮಾನು, ಬಟ್ಟೆ, ವಸ್ತುಗಳನ್ನು ಕಳೆದುಕೊಂಡು ಪರದಾಡುತ್ತಿದ್ದು, ಮನೆಯ ಶುಚಿತ್ವ ಕಾರ್ಯವೂ ಈ ರಾತ್ರಿಯು ಮುಂದೆವರೆದಿದೆ.. ಶಿವರಾತ್ರಿ ಇಲ್ಲದೇ ಜಾಗರಣೆ ಮಾಡುವ ಸ್ಥಿತಿ ಸದ್ಯ ನೆರೆ ಸಂತ್ರಸ್ತರದ್ದು.