ಬೆಂಗಳೂರು:ಅನ್ಲಾಕ್ ಆಗುತ್ತಿದ್ದಂತೆ ಸರಗಳ್ಳರು ಚುರುಕಾಗಿದ್ದಾರೆ. ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಖದೀಮರು ನಗರದ ಪ್ರತ್ಯೇಕ ಎರಡು ಕಡೆಗಳಲ್ಲಿ ಸರಗಳ್ಳತನ ಮಾಡಿ ತಮ್ಮ ಕೈ ಚಳಕ ತೋರಿಸಿದ್ದಾರೆ.
Unlock ಆಗುತ್ತಿದ್ದಂತೆ ಆ್ಯಕ್ಟಿವ್ ಆದ ಸರಗಳ್ಳರು: ಪ್ರತ್ಯೇಕ ಎರಡು ಕಡೆಗಳಲ್ಲಿ ಪ್ರಕರಣ - BENGALURU
ಸಹಕಾರ ನಗರ ಬಳಿ ಇಂದು ಬೆಳಗ್ಗೆ ಲಕ್ಷ್ಮಿ ಎಂಬ ವೃದ್ದೆಯ 12 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ರೀತಿ ಜಯನಗರದ ಸಾಕಮ್ಮ ಗಾರ್ಡನ್ ಬಳಿ ಮಹಿಳೆ ರಾಜೇಶ್ವರಿ ಎಂಬಾಕೆಯ 72 ಗ್ರಾಂ ಮಾಂಗಲ್ಯ ಸರಗಳ್ಳತನ ಮಾಡಿದ್ದಾರೆ.

ಸರಗಳ್ಳತನ
ನಡೆದುಕೊಂಡು ಹೋಗುತ್ತಿದ್ದ ವೃದ್ಧೆ ಗುರಿಯಾಗಿಸಿ ಹಿಂದಿನಿಂದ ಬೈಕ್ನಲ್ಲಿ ಬಂದು ಸರ ಕಸಿದು ಪರಾರಿಯಾಗಿದ್ದಾರೆ. ಸಹಕಾರ ನಗರ ಬಳಿ ಇಂದು ಬೆಳಗ್ಗೆ ಲಕ್ಷ್ಮಿ ಎಂಬ ವೃದ್ದೆಯ 12 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ರೀತಿ ಜಯನಗರದ ಸಾಕಮ್ಮ ಗಾರ್ಡನ್ ಬಳಿ ಮಹಿಳೆ ರಾಜೇಶ್ವರಿ ಎಂಬಾಕೆಯ 72 ಗ್ರಾಂ ಮಾಂಗಲ್ಯ ಸರಗಳ್ಳತನ ಮಾಡಿದ್ದಾರೆ.
Last Updated : Jun 21, 2021, 10:40 PM IST