ಮಿತಿ ಮೀರಿದ ಕೊರೊನಾದಿಂದಾಗಿ ಕಳೆದ ತಿಂಗಳು ಏಪ್ರಿಲ್ 10 ರಿಂದ ರಾತ್ರಿ ಕರ್ಫ್ಯೂ ಜಾರಿಯಾಗಿತ್ತು. ಈ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಕ್ರೈಂಗಳು ಕಡಿಮೆಯಾಗಿವೆ. ಮಾರ್ಚ್ನಲ್ಲಿ ನಗರದಲ್ಲಿ 3,358 ಪ್ರಕರಣಗಳು ದಾಖಲಾದರೆ, ಏಪ್ರಿಲ್ನಲ್ಲಿ 2520 ಕೇಸ್ಗಳು ದಾಖಲಾಗಿವೆ.
ಬೇಡಿ
By
Published : May 17, 2021, 9:35 PM IST
ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಹೆಚ್ಚಾಗುತ್ತಿದ್ದಂತೆ ಅಪರಾಧ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಕ್ರೈಂನಲ್ಲಿ ಭಾಗಿಯಾಗುತ್ತಿದ್ದವರು ಲಾಕ್ಡೌನ್ನಿಂದಾಗಿ ಸೈಲೆಂಟ್ ಆಗಿದ್ದಾರೆ. ಎಂದಿನಂತೆ ಸೈಬರ್ ಖದೀಮರ ವಂಚನೆ ಮುಂದುವರಿಸಿದ್ದಾರೆ.
ಕೊರೊನಾ ಕರ್ಫ್ಯೂ ಹಾಗೂ ಲಾಕ್ಡೌನ್ನಿಂದಾಗಿ ಮಹಾನಗರ ಸ್ತಬ್ಧವಾಗಿದೆ. ಆರ್ಥಿಕ ಚಟುವಟಿಕೆ ಸಂಪೂರ್ಣ ಕುಸಿದಿದೆ. ಜೀವನಕ್ಕಾಗಿ ಲಕ್ಷಾಂತರ ಜನರು ಮನೆ ಬಿಟ್ಟು ಊರು ಸೇರಿದ್ದಾರೆ. ಕಳ್ಳತನ ಸೇರಿದಂತೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಆರೋಪಿಗಳು ಗಪ್ ಚುಪ್ ಆಗಿದ್ದಾರೆ.
ಫೆಬ್ರವರಿಯಲ್ಲಿ ಹೆಚ್ಚಿದ್ದ ಕ್ರೈಂ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮೂರು ಪಟ್ಟು ಕಡಿಮೆಯಾಗಿದೆ. ಮಾರ್ಚ್ನಲ್ಲಿ 3,358 ಕೇಸ್ಗಳು, ಏಪ್ರಿಲ್ ನಲ್ಲಿ 2,028 ಪ್ರಕರಣಗಳು ವರದಿಯಾದರೆ, ಮೇ 13ರವರೆಗೆ 546 ಕೇಸ್ ದಾಖಲಾಗಿವೆ. ಈ ಪೈಕಿ ಸೈಬರ್ ಕ್ರೈಂ ಪ್ರಕರಣಗಳೇ ಅತಿ ಹೆಚ್ಚು ದಾಖಲಾಗಿವೆ. ದಾಖಲಾದ ಪ್ರಕರಣಗಳಲ್ಲಿ ಹೆಚ್ಚಾಗಿ ಆನ್ಲೈನ್ ಚೀಟಿಂಗ್ ಕೇಸ್ಗಳೇ ಆಗಿವೆ. ಉಳಿದಂತೆ ಕೊಲೆ, ದರೋಡೆ, ಕಳ್ಳತನ, ಸರಗಳ್ಳತನ, ರಾಬರಿ, ಮನೆಗಳ್ಳತನ ಕೇಸ್ಗಳು ತೀರಾ ಕಡಿಮೆಯಾಗಿವೆ.
ಕೊರೊನಾ ಹೆಚ್ಚಾದ ವೇಳೆಯೂ ಅಪರಾಧ ಪ್ರಕರಣಗಳಲ್ಲಿ ಸೈಬರ್ ಕ್ರೈಂನದ್ದೇ ಮೇಲುಗೈಯಾಗಿದೆ. ಕೊರೊನಾ ಲಸಿಕೆಗೆ ಬೆಡ್ ಕೊಡಿಸುವುದಾಗಿ ಹೇಳಿ ಆನ್ಲೈನ್ನಲ್ಲಿ ವಂಚನೆ ಮಾಡಿದ್ದಾರೆ.
ಕೊರೊನಾ 2ನೇ ಅಲೆ ಊಹೆಗೂ ಮೀರಿ ಹರಡಿದೆ. ಇದರಿಂದ ಕ್ಷಣಾರ್ಧದಲ್ಲಿ ಸೋಂಕು ವ್ಯಾಪಿಸಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಕೊರೊನಾ ಸೋಂಕಿನ ಸರಪಳಿ ಮುರಿಯಲು ರಾಜ್ಯ ಸರ್ಕಾರ ಕಳೆದ ತಿಂಗಳು ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ವಿಧಿಸಿತ್ತು. ಇನ್ನಷ್ಟು ಪರಿಣಾಮಕಾರಿಯಾಗಲು ಇದೀಗ 14 ದಿನಗಳ ಕಾಲ ಲಾಕ್ ಡೌನ್ ವಿಧಿಸಿದೆ. ಕಟ್ಟಡ ಕಾರ್ಮಿಕರು ಸೇರಿದಂತೆ ಮಧ್ಯಮ ವರ್ಗದ ಜನರಂತೂ ಕರ್ಫ್ಯೂನಿಂದಾಗಿ ಮನೆಯಲ್ಲೇ ಉಳಿದಿದ್ದಾರೆ. ಐಟಿಬಿಟಿ ನೌಕರರು ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿದ್ದಾರೆ. ಇದುರಿಂದ ಖದೀಮರ ಕಳ್ಳಾಟ ನಿಂತಿದೆ.
ಮಿತಿ ಮೀರಿದ ಕೊರೊನಾದಿಂದಾಗಿ ಕಳೆದ ತಿಂಗಳು ಏಪ್ರಿಲ್ 10 ರಿಂದ ರಾತ್ರಿ ಕರ್ಫ್ಯೂ ಜಾರಿಯಾಗಿತ್ತು. ಈ ಅವಧಿಯಲ್ಲಿ ನಗರದಲ್ಲಿ ಕ್ರೈಂಗಳು ಕಡಿಮೆಯಾಗಿವೆ. ಮಾರ್ಚ್ನಲ್ಲಿ ನಗರದಲ್ಲಿ 3,358 ಪ್ರಕರಣಗಳು ದಾಖಲಾದರೆ, ಏಪ್ರಿಲ್ನಲ್ಲಿ 2,520 ಇಳಿಕೆಯಾಗಿವೆ. ಈ ಪೈಕಿ 43 ರಾಬರಿ ಪ್ರಕರಣ ಯಥಾಸ್ಥಿತಿ ಕಾಯ್ದುಕೊಂಡಿದೆ. ಸರಗಳ್ಳತನ 6, ಮನೆಗಳ್ಳತನ 61, ಬೈಕ್ ಕಳವು 277 ಹಾಗೂ ಕಿಡ್ನ್ಯಾಪ್ 52 ಕೇಸ್ ಗಳು ದಾಖಲಾಗಿತ್ತು. ಮೇ ತಿಂಗಳಲ್ಲಿ 546 ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಮನೆ ಗಲಾಟೆ, ಕಿರುಕುಳ ಹಾಗೂ ಮತ್ತಿತರ ಕೌಟುಂಬಿಕ ಕಲಹ ಪ್ರಕರಣಗಳು ಹೆಚ್ಚಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.