ಬೆಂಗಳೂರು: ಜಗಳ ಆಡುತ್ತಿದ್ದ ಇಬ್ಬರು ಯುವಕರನ್ನು ಬಿಡಿಸಲು ಹೋದ ಇನ್ಫೋಸಿಸ್ ಕಂಪನಿಯ ಉದ್ಯೋಗಿ ಮೇಲೆ ಬೆನಕ ಜ್ಯೂವೆಲ್ಲರಿ ಶಾಪ್ ಮಾಲೀಕ ಹಾಗೂ ಆತನ ಸಹಚರರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ಫೋಸಿಸ್ ಕಂಪನಿಯಲ್ಲಿ ಸೀನಿಯರ್ ಅನಾಲಿಸ್ಟ್ ಆಗಿರುವ ಮನೋಹರ್ ನೀಡಿದ ದೂರಿನ ಮೇರೆಗೆ ಬೆನಕ ಆಭರಣ ಕಂಪನಿಯ ಮಾಲೀಕ ಭರತ್ ಹಾಗೂ ಆತನ ಸಹಚರರ ಮೇಲೆ ಎಫ್ಐಆರ್ ದಾಖಲಾಗಿದೆ. ಫೆಬ್ರುವರಿ 20 ರಂದು ಮನೋಹರ್ ಹಾಗೂ ಆತನ ಸಹೋದರಿಬ್ಬರು ಹೊಸಕೆರೆಹಳ್ಳಿ ರಸ್ತೆಯಲ್ಲಿರುವ ಅಕ್ಷಯ್ ಬಾರ್ಗೆ ಹೋಗಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಮೇಲೆ ಹಲ್ಲೆ ಮಾಡುತ್ತಿರುವುದನ್ನು ಕಂಡು ಗಲಾಟೆ ಬಿಡಿಸಲು ಮುಂದಾಗಿದ್ದಾರೆ.