ಕರ್ನಾಟಕ

karnataka

ETV Bharat / state

ಬಳ್ಳಾರಿ ಪಾಲಿಕೆ ಚುನಾವಣೆ: ಆಕಾಂಕ್ಷಿಗಳ ಜೊತೆ ಡಿಕೆಶಿ ಸಭೆ - ಪಾಲಿಕೆ ಚುನಾವಣಾ ಆಕಾಂಕ್ಷಿಗಳೊಂದಿಗೆ ಡಿಕೆಶಿ ಸಭೆ

ಬಳ್ಳಾರಿ ಪಾಲಿಕೆಯ ಮೇಯರ್​ ಉಪ ಮೇಯರ್​ ಸ್ಥಾನಕ್ಕೆ ಆಕಾಂಕ್ಷಿಗಳು ಬಹಳಷ್ಟಿದ್ದು ಮುಂದಿನ ವಿಧಾನಸಭಾ ಚುನಾವಣೆಯ ದೃಷ್ಟಿಕೋನದಲ್ಲಿ ಪ್ರಬಲ ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್​ ಚಿಂತನೆ ನಡೆಸುತ್ತಿದೆ.

Bellary municipality Election congers leaders meeting
ಬಳ್ಳಾರಿ ಪಾಲಿಕೆ ಚುನಾವಣೆ: ಆಕಾಂಕ್ಷಿಗಳೊಂದಿಗೆ ಡಿಕೆಶಿ ಸಭೆ

By

Published : Mar 8, 2022, 6:32 PM IST

ಬೆಂಗಳೂರು: ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ಸಂಬಂಧ ಮುಖಂಡರು ಹಾಗೂ ಪಕ್ಷದ ಪಾಲಿಕೆ ಸದಸ್ಯರ ಜತೆ ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ಸಮಾಲೋಚನೆ ನಡೆಸಿದರು.

ಇದೇ ತಿಂಗಳ 19ರಂದು ಮಹಾನಗರ ಪಾಲಿಕೆಯ ಮೇಯರ್, ಉಪ‌ಮೇಯರ್ ಮತ್ತು ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಅವರು ಸಭೆ ನಡೆಸಿದರು.

ಮೇಯರ್ ಸ್ಥಾನಕ್ಕೆ 34 ನೇ ವಾರ್ಡ್‌ನ ಎಂ.ರಾಜೇಶ್ವರಿ ಸುಬ್ಬರಾಯ್ಡು, 6 ನೇ ವಾರ್ಡ್‌ನ ಎಂ. ಪದ್ಮಜಾ ವಿವೇಕ್, 39ನೇ ವಾರ್ಡ್‌ನ ಪಿ. ಶಶಿಕಲಾ ಜಗನ್ನಾಥ, ಮುಸ್ಲಿಂ ಸಮುದಾಯದ 26ನೇ ವಾರ್ಡ್‌ನ ಸದಸ್ಯೆ ಡಿ. ಸುಕುಂ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಈ ಸಭೆಯಲ್ಲಿ ಹಿರಿಯ ಮುಖಂಡ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಸಂಸದ ಡಿ.ಕೆ.ಸುರೇಶ್, ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಶಾಸಕ ನಾಗೇಂದ್ರ, ಮಾಜಿ ಶಾಸಕ ಅನಿಲ್ ಲಾಡ್ ಮತ್ತಿತರರು ಇದ್ದರು.

ಇದನ್ನೂ ಓದಿ:ನಾನು ಸಿಎಂ ಆದ್ರೆ ನಿಮ್ಮ ಸರ್ಕಾರನೇ ಬರೋದಿಲ್ಲ, 20 ವರ್ಷ ನಾನೇ ಸಿಎಂ ಆಗಿರುತ್ತೇನೆ: ಸಿದ್ದರಾಮಯ್ಯಗೆ ಯತ್ನಾಳ್ ಟಾಂಗ್

ABOUT THE AUTHOR

...view details