ಬೆಂಗಳೂರು: ಬೆಳಗಾವಿ ಜಿಲ್ಲೆಯಲ್ಲಿ ಸಿಆರ್ಪಿಎಫ್ ಯೋಧನನ್ನು ಬಂಧಿಸಿರುವ ಪ್ರಕರಣ, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಸದ್ಯ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಪ್ರಕರಣದ ತನಿಖೆಯನ್ನು ಬೆಳಗಾವಿ ವಲಯ ಐಜಿಪಿ ನಡೆಸಬೇಕೆಂದು ಆದೇಶ ನೀಡಿದ್ದಾರೆ. ತನಿಖೆಯನ್ನು ನಡೆಸಿದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ.
ಚಿಕ್ಕೋಡಿ ಸಿಆರ್ಪಿಎಫ್ ಯೋಧನ ಬಂಧನ ಪ್ರಕರಣ: ಐಜಿಪಿ ಮಟ್ಟದ ತನಿಖೆಗೆ ಡಿಜಿಪಿ ಆದೇಶ - ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್
ಬೆಳಗಾವಿ ಜಿಲ್ಲೆಯಲ್ಲಿ ಸಿಆರ್ಪಿಎಫ್ ಯೋಧನನ್ನು ಬಂಧಿಸಿರುವ ಪ್ರಕರಣದ ತನಿಖೆಯನ್ನು ಬೆಳಗಾವಿ ವಲಯ ಐಜಿಪಿ ನಡೆಸಬೇಕೆಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಆದೇಶ ನೀಡಿದ್ದಾರೆ.
![ಚಿಕ್ಕೋಡಿ ಸಿಆರ್ಪಿಎಫ್ ಯೋಧನ ಬಂಧನ ಪ್ರಕರಣ: ಐಜಿಪಿ ಮಟ್ಟದ ತನಿಖೆಗೆ ಡಿಜಿಪಿ ಆದೇಶ Belgaum CRPF warrior detention case](https://etvbharatimages.akamaized.net/etvbharat/prod-images/768-512-6970925-thumbnail-3x2-smk.jpg)
ಸಿಆರ್ಪಿಎಫ್ ಯೋಧ ಬಂಧನ ಪ್ರಕರಣ
ಏನಿದು ಪ್ರಕರಣ..?
ಚಿಕ್ಕೋಡಿ ತಾಲೂಕಿನ ಯಕ್ಸಂಬಾ ನಿವಾಸಿಯಾದ ಯೋಧ ಸಚಿನ್ ಸಾವಂತ್ ಅವರು ತಮ್ಮ ಮನೆಯ ಮುಂಭಾಗದಲ್ಲಿ ಬೈಕ್ ಕಾರು ತೊಳೆಯುತ್ತಿದ್ದರು. ಈ ವೇಳೆ ಮಾಸ್ಕ್ ಹಾಕಿಲ್ಲ ಎಂಬ ಕಾರಣಕ್ಕೆ ಪೊಲೀಸರು ಯೋಧನನ್ನು ಪ್ರಶ್ನಿಸಿದ್ದರು. ಈ ವೇಳೆ ಸಿಆರ್ಪಿಎಫ್ ಕೊಬ್ರಾ ಕಮಾಂಡೋ ಸಚಿನ್ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ, ತಳ್ಳಾಟ-ನೂಕಾಟ ನಡೆದಿತ್ತು. ಬಳಿಕ ಪೊಲೀಸರು ಯೋಧನನ್ನು ಬಂಧಿಸಿದ್ದರು.