ಬೆಳಗಾವಿ:ಜಿಲ್ಲೆಯಲ್ಲಿ ನಡೆದ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 12ಕ್ಕೇರಿದೆ. ಮಹಿಳೆಯ ಹೇಳಿಕೆ ಮತ್ತು ದೂರಿನ ಪ್ರಕಾರ ಒಟ್ಟು 12 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಗಳಾದ ಸಂತೋಷ ಬಸಪ್ಪ ನಾಯಿಕ, ಶೋಭಾ ರಾಜಪ್ಪ ನಾಯಿಕ, ಲಕ್ಕವ್ವ ಯಲ್ಲಪ್ಪ ನಾಯಿಕ ಅವರನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಬಳಿಕ ಈ ಮೂವರು ತಲೆ ಮರೆಸಿಕೊಂಡಿದ್ದರು.
ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಪುತ್ರನ ಪ್ರೇಯಸಿಯ ತಾಯಿ, ತಂದೆ, ಚಿಕ್ಕಪ್ಪ, ಸಹೋದರರು ಸೇರಿದಂತೆ ಒಟ್ಟು 7 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅದಾದ ಬಳಿಕ ಇಬ್ಬರನ್ನು ಬಂಧಿಸಿದ್ದ ಪೊಲೀಸರು ಇಂದು ಮತ್ತೆ ಮೂವರನ್ನು ಬಂಧಿಸಿದ್ದಾರೆ.
ಒಟ್ಟು ಇಲ್ಲಿಯವರೆಗೆ 12 ಆರೋಪಿಗಳನ್ನು ಬಂಧಿಸಲಾಗಿದ್ದು, ಬಸಪ್ಪ ರುದ್ರಪ್ಪ ನಾಯಿಕ, ರಾಜು ರುದ್ರಪ್ಪ ನಾಯಿಕ, ಕೆಂಪಣ್ಣ ರಾಜು ನಾಯಿಕ, ಪಾರ್ವತಿ ಬಸಪ್ಪ ನಾಯಿಕ, ಯಲ್ಲಪ್ಪ ರುದ್ರಪ್ಪ ನಾಯಿಕ, ಲಕ್ಕಪ್ಪ ರುದ್ರಪ್ಪ ನಾಯಿಕ, ಗಂಗವ್ವ ಬಸಪ್ಪ ವಾಲಿಕಾರ, ಸಂಗೀತಾ ಸದಾಶಿವ ಹೆಗ್ಗನಾಯಿಕ, ಪ್ರದೀಪ ಬಸಪ್ಪ ನಾಯಿಕ, ಸಂತೋಷ ಬಸಪ್ಪ ನಾಯಿಕ, ಶೋಭಾ ರಾಜಪ್ಪ ನಾಯಿಕ, ಲಕ್ಕವ್ವ ಯಲ್ಲಪ್ಪ ನಾಯಿಕ ಅವರನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.