ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ಗೆ ಸಹಾಯ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಆರೋಪಿ ಸುಧೀಂದ್ರ ಶಿಂಧೆಯನ್ನ ತಮ್ಮ ವಶಕ್ಕೆ ಪಡೆದಿದ್ದಾರೆ.
1ನೇ ಎಸಿಎಂಎಂ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ನೀಡುವಂತೆ ಸಿಸಿಬಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ರು. ಹೀಗಾಗಿ ನ್ಯಾಯಾಲಯ ಆರೋಪಿಯನ್ನು 7.12.19ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿ ಹೊರಡಿಸಿದೆ.
ಸುಧೀಂದ್ರ ಶಿಂಧೆ ಸಿಸಿಬಿ ವಶಕ್ಕೆ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಮ್ಯಾಚ್ ಫಿಕ್ಸಿಂಗ್ಗೆ ಸಹಾಯ ಮಾಡಿರುವ ಆರೋಪದ ಮೇಲೆ ಬೆಳಗಾವಿ ಪ್ಯಾಂಥರ್ಸ್ ಕೋಚ್ ಹಾಗೂ ಕೆಎಸ್ ಸಿಎ ಆಡಳಿತ ಸಮಿತಿಯ ಸದಸ್ಯ ಸುಧೀಂದ್ರ ಶಿಂಧೆ ಸದ್ಯ ಬಂಧನಕ್ಕೊಳಗಾಗಿದ್ದಾರೆ.
ಸುಧೀಂದ್ರ ಜೊತೆ ಹಲವು ಮಂದಿ ಮ್ಯಾಚ್ ಫಿಕ್ಸಿಂಗ್ ದಂಧೆಯಲ್ಲಿ ಭಾಗಿಯಾಗಿರುವ ಶಂಕೆ ಹಿನ್ನೆಲೆ ಸದ್ಯ ಹೆಚ್ಚಿನ ವಿಚಾರಣೆಗೆ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.