ಬೆಂಗಳೂರು :ದೇಶಾದ್ಯಂತ ಮಾರ್ಚ್ 1ರಿಂದ ಕೋವಿಡ್-19 ಲಸಿಕೆಯ ಎರಡನೇ ಹಂತ ಆರಂಭವಾಗಲಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ಕೋಮಾರ್ಬಿಡಿಟಿ ಇರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
10,000 ಸರ್ಕಾರಿ ಮತ್ತು 20,000 ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಸರ್ಕಾರಿ ಕೇಂದ್ರಗಳಲ್ಲಿ ನೀಡುವ ಲಸಿಕೆ ಉಚಿತವಾಗಿರುತ್ತದೆ.