ಬೆಂಗಳೂರು : ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಸಮರ್ಪಕ ಹಾಗೂ ಸುರಕ್ಷಿತ ಸಾರಿಗೆ ಸೇವೆಯನ್ನು ಒದಗಿಸಲು ಬಿಎಂಟಿಸಿ ಮುಂದಾಗಿದೆ.
ಬಿಎಂಟಿಸಿ ವಾಯುವಜ್ರ ಬಸ್ಗಳ ಓಡಾಟ ಆರಂಭ - ಯಾಣಿಕರಿಗೆ ಸುರಕ್ಷಿತೆ
ಲಾಕ್ಡೌನ್ ನಿರ್ಬಂಧ ಸಡಿಲಿಕೆಯಿಂದ ಬೆಂಗಳೂರು ನಗರ ಮತ್ತು ಹೊರವಲಯ ಪ್ರದೇಶ ದಿನದಿಂದ ದಿನಕ್ಕೆ ಸಹಜ ಸ್ಥಿತಿಯತ್ತ ಮರಳುತ್ತಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿಯು ಪ್ರಯಾಣಿಕರ ಅಗತ್ಯತೆಗನುಗುಣವಾಗಿ ಹವಾನಿಯಂತ್ರಿತ ವಾಯುವಜ್ರ ಬಸ್ಗಳನ್ನು ರಸ್ತೆಗಿಳಿಸಲು ತಯಾರಿ ನಡೆಸಿದೆ.
ಬಿಎಂಟಿಸಿ ವಾಯುವಜ್ರ ಬಸ್
ಈಗಾಗಲೇ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಬಿಎಂಟಿಸಿಯ ಸಾಮಾನ್ಯ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ. ಬೆಂಗಳೂರು ನಗರ ಮತ್ತು ಹೊರವಲಯದ ಪ್ರದೇಶಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಸಂಚಾರ ಹಾಗೂ ವಾಣಿಜ್ಯ ಚಟುವಟಿಕೆಗಳು ದಿನದಿಂದ ದಿನಕ್ಕೆ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಸಾರ್ವಜನಿಕ ಹಾಗೂ ಪ್ರಯಾಣಿಕರ ಬೇಡಿಕೆ ಮತ್ತು ಅಗತ್ಯತೆಗನುಗುಣವಾಗಿ ಬಿಎಂಟಿಸಿ ವಾಯುವಜ್ರ ಹವಾನಿಯಂತ್ರಿತ ಬಸ್ಗಳನ್ನು ಸೋಮವಾರದಿಂದ ರಸ್ತೆಗಿಳಿಸಲು ತಯಾರಿ ನಡೆಸಿದೆ.
ಬಸ್ಗಳ ಓಡಾಟ ಪಟ್ಟಿ ಹೀಗಿದೆ:
ಕ್ರ.ಸಂ | ಬಸ್ ಸಂಖ್ಯೆ | ಎಲ್ಲಿಂದ | ಎಲ್ಲಿಯವರೆಗೆ |
---|---|---|---|
1 | ವಿ-317ಎ | ಕೆಬಿಎಸ್ | ಹೊಸಕೋಟೆ |
2 | ವಿ-360ಬಿ | ಕೆಬಿಎಸ್ | ಅತ್ತಿಬೆಲೆ |
3 | ವಿ-335ಇ | ಕೆಬಿಎಸ್ | ಕಾಡುಗೋಡಿ |
4 | ವಿ-500ಎ | ಬನಶಂಕರಿ | ಹೆಬ್ಬಾಳ |
5 | ವಿ-500ಡಿ | ಸೆಂಟ್ರಲ್ ಸಿಲ್ಕ್ ಬೋರ್ಡ್ | ಹೆಬ್ಬಾಳ |
6 | ವಿ-500ಸಿಎ | ಬನಶಂಕರಿ | ಐಟಿಪಿಎಲ್ |