ಕರ್ನಾಟಕ

karnataka

ETV Bharat / state

ಆಸ್ಪತ್ರೆಗಳಲ್ಲಿ ಬೆಡ್​​ಗಳ ಸಂಖ್ಯೆ ಹೆಚ್ಚಾಗಿದ್ದು ಕೋವಿಡ್​ ಅವಧಿಯಲ್ಲಿ! - Lack of beds in Government Hospitals

ಕೊರೊನಾಗೂ ಮುನ್ನ ಇದ್ದ ಬೆಡ್​ಗಳ ಸಮಸ್ಯೆ ಮಹಾಮಾರಿ ನಂತರ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಅದರ ಸಂಖ್ಯೆ ದುಪ್ಪಾಟ್ಟಾಗಿದೆ.

Bed numbers rise in government hospitals during corona period
ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್​ ಸಂಖ್ಯೆ ಏರಿಕೆ

By

Published : Jan 7, 2021, 9:05 PM IST

ಬೆಂಗಳೂರು:ಕೊರೊನಾ ಅವಧಿಯಲ್ಲಿ ತುರ್ತು ಪ್ರಕರಣಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್​ ಕೊರತೆ ಉಂಟಾಗಿದ್ದೇ ಹೆಚ್ಚು.ಆದರೆ, ಜನಪ್ರಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಅವುಗಳ ಸಂಖ್ಯೆ ಏರಿಕೆ ಕಂಡಿದೆ.

ಜನಪ್ರಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಹೆಚ್ಚಿನವರು ಬಡವರೇ ಆಗಿರುತ್ತಾರೆ. ಕೊರೊನಾಗೂ ಮುನ್ನ ರೋಗಿಗಳು ಬೇಡ್​ ಸಿಗದೆ ತೀವ್ರ ತೊಂದರೆ ಅನುಭವಿಸಿದರು. ಎಷ್ಟೋ ಕಡೆ ಬೆಡ್​ಗಳಿಲ್ಲ. ಬೇರೆ ಆಸ್ಪತ್ರೆಗಳಿಗೆ ಹೋಗಿ ಎಂದು ಶಿಫಾರಸು ಕೂಡ ಮಾಡಲಾಗಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಕೋವಿಡ್​ ಬೆಡ್​​ಗಳ ಲಭ್ಯತೆಯ ಮಾಹಿತಿ

ತುರ್ತು ಪ್ರಕರಣ ದಾಖಲಾತಿ ಪ್ರಮಾಣ ದೈನಂದಿನ ಸರಾಸರಿ ಸಂಖ್ಯೆ ಮೀರಿದಾಗಲೂ ಹಾಸಿಗೆಗಳ ಸಮಸ್ಯೆ ಉದ್ಭವವಾಗಿದೆ. ಕೋವಿಡ್ ಕಾಲಿಟ್ಟಿದ್ದೇ ಈ ಸಮಸ್ಯೆ ಭಾಗಶಃ ಕಡಿಮೆಯಾಗಿದೆ. ಕೊರೊನಾದ ಆರಂಭದಲ್ಲಿ ಹಾಸಿಗೆಗಳ ಸಮಸ್ಯೆ ಇತ್ತು. ಆಗ ಬಹುತೇಕರು ಖಾಸಗಿ ಆಸ್ಪತ್ರೆಗಳ ಬಾಗಿಲು ತಟ್ಟಿದ್ದೇ ಹೆಚ್ಚು. ಆದರೆ, ದುಬಾರಿ ಹಣ ಪೀಕುತ್ತಿದ್ದ ಕಾರಣ ಕ್ರಮ ಕೈಗೊಳ್ಳುವಂತೆ ರಾಜ್ಯದ ಜನತೆ ಆಕ್ರೋಶ ವ್ಯಕ್ತಪಡಿಸಿದರು. ಅದನ್ನು ಅರಿತ ಸರ್ಕಾರ ಪ್ರಮುಖ ಆಸ್ಪತ್ರೆಗಳಲ್ಲಿ ಬೆಡ್​​ ಸಂಖ್ಯೆ ಹೆಚ್ಚಿಸಿ ಕೋವಿಡೇತರ ರೋಗಿಗಳಿಗೆ ನೆರವಾಯಿತು.

ಇದನ್ನೂ ಓದಿ:ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತೆ ಉದ್ಭವಿಸಿದ ಬೆಡ್ ಸಮಸ್ಯೆ

ಈ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಸಿಗೆಗಳ ಕೊರತೆ ಸದ್ಯಕ್ಕಿಲ್ಲ. ರೂಪಾಂತರ ಕೊರೊನಾ ಸೋಂಕು ಹೆಚ್ಚಾದರೂ ನಮ್ಮಲ್ಲಿ ಸಾಕಷ್ಟು ಹಾಸಿಗೆಗಳು ಲಭ್ಯವಿವೆ ಎಂದು ತಿಳಿಸಿದರು.

ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ 965 ಹಾಗೂ ಸರ್ಕಾರಿ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ 548 ಹಾಸಿಗೆಗಳ ಸೌಲಭ್ಯವಿದೆ. ಅದರಲ್ಲಿ ಕೋವಿಡ್ ಹಾಸಿಗೆಗಳು​​​ ಹಾಗೂ ಸಾಮಾನ್ಯ ಚಿಕಿತ್ಸೆ ಹಾಸಿಗೆಗಳು ಸೇರಿಕೊಂಡಿದೆ. ಕೋವಿಡ್​​ಗಾಗಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 100 ಬೆಡ್​ಗಳ ಐಸಿಯು ಕಟ್ಟಡವನ್ನೇ ಕಟ್ಟಲಾಗಿದೆ.

ABOUT THE AUTHOR

...view details