ಆನೇಕಲ್ :ಬನ್ನೇರುಘಟ್ಟ ಅರಣ್ಯ ಭಾಗದ ಗ್ರಾಮದಲ್ಲಿ ತಡರಾತ್ರಿ ಕರಡಿಯೊಂದು ಮನೆಯ ಬಳಿ ಓಡಾಟ ನಡೆಸಿದ್ದು, ಸುತ್ತಮುತ್ತಲ ಹಳ್ಳಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಬನ್ನೇರುಘಟ್ಟ ಸಮೀಪದ ಬೇಗಿಹಳ್ಳಿ ಬಳಿ 2ನೇ ಬಾರಿ ಕರಡಿ ಪ್ರತ್ಯಕ್ಷವಾಗಿದ್ದರಿಂದ, ಭಯದ ವಾತವರಣ ಮರುಕಳಿಸಿದೆ. ಬೇಗಿಹಳ್ಳಿ ಗ್ರಾಮದ ಅಪರ್ಣಮ್ಮ-ರೇವಣ್ಣ ಮನೆಯ ಬಳಿ ಕಳೆದ ರಾತ್ರಿ 2 ಗಂಟೆ ಸುಮಾರಿಗೆ ಕರಡಿ ಓಡಾಟ ಮನೆಯ ಸುತ್ತ ಸುಳಿದಾಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.