ಬೆಂಗಳೂರು :ಮೂರನೇ ಅಲೆ ಮಕ್ಕಳಿಗೆ ಬರಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಜ್ಞರು ಸಹ ಮಕ್ಕಳಿಗೆ ಆತಂಕವಿದೆ ಎಂದು ಹೇಳಿದ್ದಾರೆ. ಜುಲೈ, ಆಗಸ್ಟ್, ಸೆಪ್ಟೆಂಬರ್ ಮೂರು ತಿಂಗಳು ಸಮಯ ಇದೆ. ಬೆಡ್ ಆಕ್ಸಿಜನ್ ಎಲ್ಲದರ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದ್ರು.
12 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊಡಬಹುದು. ಗರ್ಭಿಣಿಯರಿಗೂ ಸಹ ಲಸಿಕೆ ಹಾಕಬಹುದು, ಆದ್ರೆ ಕೊಡ್ತಿಲ್ಲ. ಹೀಗಾಗಿ, ಮಕ್ಕಳ ಮೇಲೆ 3ನೇ ಅಲೆ ಬರುತ್ತೆ ಎಂದು ತಜ್ಞರು ಹೇಳುತ್ತಿದ್ದಾರೆ. ಸರ್ಕಾರ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೊರೊನಾ 3ನೇ ಅಲೆ ಯಾವುದೇ ಸಂದರ್ಭದಲ್ಲಿ ಬರಬಹುದು. ಮಕ್ಕಳಿಗೆ ಅಟ್ಯಾಕ್ ಆಗುವ ಬಗ್ಗೆ ಖಚಿತತೆ ಇಲ್ಲ. ಮಕ್ಕಳಿಗೆ ಲಸಿಕೆ ಕೊಟ್ಟಿಲ್ಲ. ಹಾಗಾಗಿ, ಮಕ್ಕಳಿಗೆ ಬರಬಹುದು ಅಂತ ತಜ್ಞರು ಹೇಳಿದ್ದಾರೆ. 2ನೇ ಅಲೆಯಲ್ಲಿ ಯುವಕರು ಹೆಚ್ಚು ಸತ್ರು. ಹಾಗಾಗಿ, ಮೂರನೇ ಅಲೆ ಎದುರಿಸಲು ಈಗಲೇ ಸಿದ್ಧತೆ ಮಾಡಬೇಕು. ಡೆಲ್ಟಾ ಪ್ಲಸ್ ಈಗ ಕಾಣಿಸಿಕೊಳ್ಳತ್ತಿದೆ. ಯಾವ ಅಲೆಗೂ ಸರ್ಕಾರ ಸಿದ್ಧತೆ ಮಾಡಿಲ್ಲ. 2ನೇ ಅಲೆಯಲ್ಲ ಬೆಡ್,ಆಕ್ಸಿಜನ್, ಇಂಜೆಕ್ಷನ್ ಸಿಗಲಿಲ್ಲ. ಇದು ಸರ್ಕಾರದ ವೈಫಲ್ಯ. ಈಗ ಮೂರನೇ ಅಲೆಗೆ ಸಿದ್ಧತೆ ಕೂಡ ನಡೆಸಿಲ್ಲ. ಬೇಜವಾಬ್ದಾರಿ ಸರ್ಕಾರ ಇದು ಎಂದರು.