ಕರ್ನಾಟಕ

karnataka

ETV Bharat / state

ಸಮಸ್ಯೆಯಾದ್ರೆ ತಕ್ಷಣವೇ ಪೊಲೀಸರಿಗೆ ತಿಳಿಸಿ... ಬೆಂಗಳೂರಲ್ಲಿ ಮಹಿಳೆಯರಿಗಾಗಿ ಪಿಂಕ್ ಹೊಯ್ಸಳ - ದಕ್ಷಿಣಾ ವಿಭಾಗ ಡಿಸಿಪಿ ರೋಹಿಣಿ ಸಫೇಟ್

ಇತ್ತೀಚಿನ ದಿನಗಳಲ್ಲಿ ಓಲಾ, ಊಬರ್ ಕ್ಯಾಬಲ್ಲಿ ಪ್ರಯಾಣ ಮಾಡುವಾಗ ಡ್ರೈವರ್​ಗಳು ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈಗ ಅದರ ಬಗ್ಗೆ ಹೆದರುವ ಅವಶ್ಯಕತೆಯಿಲ್ಲ. ಸಿಲಿಕಾನ್ ಸಿಟಿಯಲ್ಲಿ ಪಿಂಕ್ ಹೊಯ್ಸಳ ಇದೆ. ಸಮಸ್ಯೆಯಾದರೆ ತಕ್ಷಣ ಪೋಲಿಸರಿಗೆ ಮಾಹಿತಿ ನೀಡಬಹುದು.

ಓಲಾ ಉಬರ್ ನಲ್ಲಿ ಪ್ರಯಾಣಿಸುವ ಯುವತಿಯರು ಹೆದರಬೇಕಿಲ್ಲ... ನಿಮಗಾಗಿ ಇದೆ ಪಿಂಕ್​ ಹೊಯ್ಸಳ

By

Published : Aug 27, 2019, 11:47 PM IST

Updated : Aug 28, 2019, 5:05 AM IST

ಬೆಂಗಳೂರು:ಸಿಲಿಕಾನ್ ಸಿಟಿ ಹೇಳಿ ಕೇಳಿ ಫುಲ್ ಬ್ಯುಸಿ. ಈ‌ ಸಿಟಿಗೆ ಬೇರೆ ಬೇರೆ ರಾಜ್ಯಗಳಿಂದ ಉದ್ಯೋಗ ಅರಸಿ ಬರ್ತಾರೆ. ಅದ್ರಲ್ಲೂ ಮಹಿಳೆಯರು ಕೆಲಸಕ್ಕೆ ಬಂದು ಕೆಲಸದಲ್ಲಿ ತಮ್ಮನ್ನ ತೊಡಗಿಸ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಓಲಾ, ಊಬರ್ ಕ್ಯಾಬಲ್ಲಿ ಪ್ರಯಾಣ ಮಾಡುವಾಗ ಡ್ರೈವರ್​ಗಳು ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈಗ ಅದರ ಬಗ್ಗೆ ಹೆದರುವ ಅವಶ್ಯಕತೆಯಿಲ್ಲ. ಸಿಲಿಕಾನ್ ಸಿಟಿಯಲ್ಲಿ ಪಿಂಕ್ ಹೊಯ್ಸಳ ಇದೆ. ಸಮಸ್ಯೆಯಾದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬಹುದು.

ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸಫೇಟ್

ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸಫೇಟ್ ಈಟಿವಿ ಭಾರತ ಜೊತೆ ಈ ಸೇವೆ ಕುರಿತು ಮಾತನಾಡಿದ್ದು, ಓಲಾ ಊಬರ್ ಕ್ಯಾಬಲ್ಲಿ ಪ್ರಯಾಣ ಮಾಡುವಾಗ ಹೆದರುವ ಅವಶ್ಯಕತೆ ಇಲ್ಲ. ಸಿಲಿಕಾನ್ ಸಿಟಿಯಲ್ಲಿ ಪಿಂಕ್ ಹೊಯ್ಸಳ ಇದೆ. ಮಹಿಳೆಯರ ರಕ್ಷಣೆಯೇ ಇದರ ಗುರಿ. ಸಮಸ್ಯೆಯಾದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬಹುದು . ಹಾಗೆ ಒಂದು ವೇಳೆ ಸಂಚಾರ‌ ಮಾಡುವಾಗ ತೊಂದರೆಯಾದ್ರೆ ಕುಗ್ಗಬಾರದು. ತಕ್ಷಣ ಎಚ್ಚೆತ್ತು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದಿದ್ದಾರೆ. ಹಾಗೆಯೇ ಮಹಿಳೆಯರು ಸೈಡ್ ಬ್ಯಾಗಲ್ಲಿ ಪೆಪ್ಪರ್ ಸ್ಪ್ರೇ ಇಟ್ಟುಕೊಂಡು ಪ್ರಯಾಣ ಮಾಡಿದ್ರು ಒಳ್ಳೆದು ಅಂತ ಕಿವಿ ಮಾತು ಹೇಳಿದ್ದಾರೆ.

ಹೀಗಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕ್ಯಾಬ್ ಚಾಲಕರ ನೇಮಕ‌ ಮಾಡುವಾಗ ಅವರ ಪೂರ್ವಾಪರ ಕಲೆಹಾಕಬೇಕು. ಹಾಗೆ ಅವ್ರ ಹಿನ್ನೆಲೆ ಏನು? ಕೆಲಸ ಕೊಡುವ ಮೊದಲು ಅವ್ರ ಡಾಕ್ಯುಮೆಂಟ್​​ ಪಡೆದುಕೊಳ್ಳಲು ಎಲ್ಲಾ ಕ್ಯಾಬ್ ಉಬರ್ ಕಂಪೆನಿಗಳಿಗೆ ಸಂದೇಶ ರವಾನೆ ಮಾಡಲು ನಿರ್ಧಾರ ಮಾಡಿದ್ದಾರೆ.‌ ಹಾಗೆ ಸಿಲಿಕಾನ್ ಸಿಟಿಯ‌ ಮಹಿಳೆಯರು ಏನೇ ತೊಂದರೆ ಆದ್ರು ತಕ್ಷಣ ಮಹಿಳಾ ಪೊಲೀಸ್ ಸಿಬ್ಬಂದಿಗೆ ತಿಳಿಸುವಂತೆ ಹೇಳಿದರು.

Last Updated : Aug 28, 2019, 5:05 AM IST

ABOUT THE AUTHOR

...view details