ಬೆಂಗಳೂರು: ಜಯನಗರದ 9ನೇ ಬ್ಲಾಕ್ನ ಮೇವ ಕಾಲೇಜು ಪಕ್ಕದಲ್ಲಿ ಬಿಡಿಎಗೆ ಸೇರಿದಂತೆ ಎರಡು ಜಾಗಗಳನ್ನ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಬಿಡಿಎ ತೆರವುಗೊಳಿಸಿ ವಶಪಡಿಸಿಕೊಂಡಿದೆ.
ಅನಧಿಕೃತವಾಗಿ ಒತ್ತುವರಿ ಮಾಡಿದ್ದ ಜಾಗ ತೆರವುಗೊಳಿಸಿದ ಬಿಡಿಎ.. - jayanagara
ಜಯನಗರ 9ನೇ ಬ್ಲಾಕ್, ಈಸ್ಟ್ ಎಂಡ್ ರೋಡ್ನಲ್ಲಿರುವ ಸುಮಾರು 204.96 ಚದರ ಮೂಲೆಯಲ್ಲಿರುವ ನಿವೇಶನ ಸಂಖ್ಯೆ 469 ಹಾಗೂ ಸಾರಕ್ಕಿ ಗ್ರಾಮದ ಸರ್ವೆ ನಂಬರ್ 42ರಲ್ಲಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ರಚಿಸಿರುವ ಜೆಪಿನಗರ 6ನೇ ಫೇಸ್ ಬಡಾವಣೆಯಲ್ಲಿರುವ ಸುಮಾರು 111.02 ಚದರ ಮೀಟರ್ ಉದ್ದಳತೆಯ ನಿವೇಶನ ಸಂಖ್ಯೆ 453 ಜಾಗವನ್ನು ಬಿಡಿಎ ವಶಪಡಿಸಿಕೊಂಡಿದೆ.
ಜಯನಗರ 9ನೇ ಬ್ಲಾಕ್, ಈಸ್ಟ್ ಎಂಡ್ ರೋಡ್ನಲ್ಲಿರುವ ಸುಮಾರು 204.96 ಚದರ ಮೂಲೆಯಲ್ಲಿರುವ ನಿವೇಶನ ಸಂಖ್ಯೆ 469 ಹಾಗೂ ಸಾರಕ್ಕಿ ಗ್ರಾಮದ ಸರ್ವೆ ನಂಬರ್ 42ರಲ್ಲಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ರಚಿಸಿರುವ ಜೆಪಿನಗರ 6ನೇ ಫೇಸ್ ಬಡಾವಣೆಯಲ್ಲಿರುವ ಸುಮಾರು 111.02 ಚದರ ಮೀಟರ್ ಉದ್ದಳತೆಯ ನಿವೇಶನ ಸಂಖ್ಯೆ 453 ಜಾಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಳ್ಳಲಾಗಿತ್ತು.
ಸುಮಾರು 5 ಕೋಟಿ ರೂಪಾಯಿ ಬೆಲೆ ಬಾಳುವ ಎರಡು ನಿವೇಶನಗಳನ್ನು ಅಗಸ್ಟ್ 29 ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಆದೇಶದ ಮೇರೆಗೆ, ಪ್ರಾಧಿಕಾರದ ದಕ್ಷಿಣ ವಿಭಾಗದ ಅಭಿಯಂತರರು ಮತ್ತು ಕಾರ್ಯನಿರತ ಪಡೆಯ ಪೊಲೀಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಎರಡು ನಿವೇಶನಗಳ ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸಿ, ಪ್ರಾಧಿಕಾರದ ಸುಪರ್ಧಿಗೆ ತೆಗೆದುಕೊಂಡಿದೆ.