ಯಲಹಂಕ (ಬೆಂಗಳೂರು) :ವಂದೇ ಮಾತರಂ ಹಾಡಲು ಒಪ್ಪದ ಮಾಜಿ ಸಿಎಂ ಸಿದ್ದರಾಮಯ್ಯ ಭಾರತ ದೇಶದವರಲ್ಲ ಎನ್ನಬೇಕಾಗುತ್ತದೆ ಎಂದು ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಕಿಡಿಿಕಾರಿದ್ದಾರೆ.
ಯಲಹಂಕ ತಾಲೂಕು ಬಳಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂವಿಧಾನ ಸಂಸ್ಮರಣಾ ದಿನದಂದು ವೇದಿಕೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ವಂದೇ ಮಾತರಂ ಹಾಡಲು ಒಪ್ಪಿರಲಿಲ್ಲ. 60ಕ್ಕೆ ಅರಳೊ ಮರಳೊ ಅಂತಾರೆ, ಅಂತಹುದರಲ್ಲಿ ಸಿದ್ದರಾಮಯ್ಯ 75 ವರ್ಷದ ಹಿರಿಯರು. ಅವರು ಏನು ಮಾತನಾಡ್ತಾರೊ ಅದು ಅವರಿಗೆ ಗೊತ್ತಾಗಲ್ಲ ಎಂದು ಟೀಕಿಸಿದರು.