ಕರ್ನಾಟಕ

karnataka

ETV Bharat / state

ಮಾಗಡಿ - ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮೇಜರ್ ಆರ್ಟಿರಿಯಲ್ ರಸ್ತೆಯ ನಡುವೆ ಅಂಡರ್‌ಪಾಸ್ - ನಡುವೆ ಅಂಡರ್‌ಪಾಸ್

ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 10.7 ಕಿ.ಮೀ ಉದ್ದದ ಮೇಜರ್ ಆರ್ಟಿರಿಯಲ್ ರಸ್ತೆಯ ನಡುವೆ ಅಂಡರ್‌ಪಾಸ್ ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಯೋಜನೆ ರೂಪಿಸಿದೆ

Etv Bharatbda-plan-to-construct-an-underpass
ಮಾಗಡಿ - ಮೈಸೂರು ರಸ್ತೆೆಗೆ ಸಂಪರ್ಕ ಕಲ್ಪಿಸುವ ರಸ್ತೆೆಯ ನಡುವೆ ಅಂಡರ್‌ಪಾಸ್

By

Published : Apr 3, 2023, 10:53 PM IST

ಬೆಂಗಳೂರು:ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 10.7 ಕಿ.ಮೀ ಉದ್ದದ ಮೇಜರ್ ಆರ್ಟಿರಿಯಲ್ ರಸ್ತೆಯ ನಡುವೆ ಅಂಡರ್‌ಪಾಸ್ ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಯೋಜನೆಯೊಂದನ್ನು ರೂಪಿಸಿದೆ

ಮಾಗಡಿ ರಸ್ತೆ-ಮೈಸೂರು ರಸ್ತೆೆಗೆ ಸಂಪರ್ಕ ಕಲ್ಪಿಸುವ 10.7 ಕಿ.ಮೀ. ಉದ್ದದ ಮೇಜರ್ ಆರ್ಟಿರಿಯಲ್ ರಸ್ತೆ ಮಾಗಡಿ ರಸ್ತೆೆಯಿಂದ ಆರಂಭಗೊಂಡು. 2.90 ಕಿ.ಮೀ ದೂರದಲ್ಲಿ 2 ಮತ್ತು 9ನೇ ಬ್ಲಾಕ್ ಮಧ್ಯ, 5.10 ಕಿ.ಮೀ ದೂರದಲ್ಲಿ 3 ಮತ್ತು 8ನೇ ಬ್ಲಾಕ್ ಮಧ್ಯೆ ಹಾಗೂ 9.7 ಕಿ.ಮೀನಲ್ಲಿ 5 ಮತ್ತು 6ನೇ ಬ್ಲಾಕ್ ನಡುವೆ ಅಂಡರ್‌ಪಾಸ್ ನಿರ್ಮಾಣ ಮಾಡಲು ಬಿಡಿಎ ಆಡಳಿತ ಮಂಡಳಿ ತೀರ್ಮಾನಿಸಿದೆ.

ರೈಲ್ವೆಗಾಗಿ ಪ್ರಮುಖ ಆರ್ಟಿರಿಯಲ್ ರಸ್ತೆಯ ಚೈನೇಜ್ 10.35 ಕಿ.ಮೀ.ನಲ್ಲಿ ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿದ್ದು, ಈ ಕಾಮಗಾರಿಯ ಒಟ್ಟು ಅಂದಾಜು ಮೊತ್ತ 38.81 ಕೋಟಿಗಳಾಗಿವೆ. ಈ ಕಾಮಗಾರಿಯೊಂದಿಗೆ ಉಳಿದ ಮೂರು ಅಂಡರ್ ಪಾಸ್‌ಗಳನ್ನು ಕೂಡ ನಿರ್ಮಾಣ ಮಾಡಲು ಬಿಡಿಎ ಸಭೆಯಲ್ಲಿ ನಿರ್ಧರಿಸಿದ್ದು, ಇದರಿಂದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಕೊರತೆ ನೀಗಲಿದೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಎಂಎಆರ್ ಯೋಜನೆಯಲ್ಲಿ ಐದು ವೃತ್ತಗಳನ್ನು ನಿರ್ಮಿಸಲು ಯೋಜಿಸಲಾಗಿತ್ತು. ಆದರೆ, ನಂತರ ಯೋಜನೆಯಿಂದ 5ನೇ ವೃತ್ತವನ್ನು ಕೈಬಿಡಲಾಗಿತ್ತು. ಇದರಿಂದ 5 ಮತ್ತು 6ನೇ ಬ್ಲಾಕ್ ನಿವಾಸಿಗಳು ಮೂರು ಕಿ.ಮೀ ಬಳಸಿ ಮುಖ್ಯ ರಸ್ತೆಗೆ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.

ಬ್ಲಾಕ್ 5 ಮತ್ತು 6 ನಡುವೆ ರಾಜಕಾಲುವೆ ಮತ್ತು ಎರಡು ಗುಂಟೆಗಳಿದ್ದು ಅವುಗಳ ಮೇಲೆ ಒಂದು ಮೇಲ್ಸೇತುವೆ ನಿರ್ಮಿಸಿ ಎಂಎಆರ್ ರಸ್ತೆಗೆ ಸಂಪರ್ಕ ಕಲ್ಪಿಸಲು ಯೋಜಿಸಲಾಗಿದೆ. ಬ್ಲಾಕ್ 5ರಿಂದ ಮಾಗಡಿ ರಸ್ತೆಗೆ ಹೋಗಲು ಮತ್ತು ಬ್ಲಾಕ್ 6ರಿಂದ ಮೈಸೂರು ರಸ್ತೆ ಭಾಗಕ್ಕೆ ಬರಲು ರೈಲ್ವೆ ಹಳಿಯ ಬಳಿ ನಿರ್ಮಿಸುತ್ತಿರುವ ಕೆಳಸೇತುವೆ ಮೇಲೆ ರಸ್ತೆಗಳನ್ನು ನಿರ್ಮಿಸಿ ಯೂಟರ್ನ್ ಪಡೆಯಲು ಅನುವು ಮಾಡಿಕೊಡಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

ಎಂಎಆರ್‌ನ ಒಂದು ತುದಿಯು ಮಾಗಡಿ ರಸ್ತೆಗೆ ಮತ್ತು ಇನ್ನೊಂದು ತುದಿ ನಮ್ಮ ಮೆಟ್ರೊ ರೈಲು ಡಿಪೋ ಹಾಗೂ ರೈಲು ಮಾರ್ಗದ ಅಡಿಯಲ್ಲಿ ಸುರಂಗದ ಮೂಲಕ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಸುರಂಗ ಮಾರ್ಗ 500 ಮೀಟರ್ ಉದ್ದ ಇದ್ದು, ಮೈಸೂರು ರಸ್ತೆಯನ್ನು ಸಂಪರ್ಕಿಸಲು ರೈಲ್ವೆ ಮಾರ್ಗಗಳ, ಮೆಟ್ರೊ ಡಿಪೋ ಅಡಿ ಸುರಂಗದ ಮೂಲಕ ಮುಖ್ಯ ಕಾರೇಜ್ ಮಾರ್ಗ ಮಾತ್ರ ಹಾದು ಹೋಗುತ್ತದೆ.

ಸವಿರ್ಸ್ ರಸ್ತೆಗಳು ಮೈಸೂರು ರಸ್ತೆ ಸಂಪರ್ಕ ಕಲ್ಪಿಸುವುದಿಲ್ಲ. ಆದರೆ, ಮಾಗಡಿ ರಸ್ತೆಯನ್ನು ಮುಖ್ಯ ಕ್ಯಾರೇಜ್ ಮಾರ್ಗ, ಸವಿರ್ಸ್ ರಸ್ತೆ ಎರಡರಿಂದಲೂ ಕೂಡ ಸಂಪರ್ಕಿಸಬಹುದು. ಅಂಡರ್‌ಪಾಸ್ ನಿರ್ಮಾಣದಿಂದ ಮೇಜರ್ ಆರ್ಟಿರಿಯಲ್ ರಸ್ತೆ ಮೂಲಕ ಮೈಸೂರು ರಸ್ತೆಗೆ ಸಂಪರ್ಕ ಸಿಗಲಿದೆ. 500 ಮೀಟರ್ ಉದ್ದದ ಸುರಂಗ ಮಾರ್ಗವು 6ನೇ ಲೇನ್ ರಾಷ್ಟ್ರೀಯ ಮೈಸೂರು ರಸ್ತೆ ಹೆದ್ದಾರಿಯಲ್ಲಿ ಏಕೈಕ ನಿರ್ಗಮನವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಎಂಎಆರ್ ರಸ್ತೆಯೂ ನೂರು ಮೀಟರ್(330 ಅಡಿ) ಅಗಲದ ರಸ್ತೆಯಾಗಿದೆ. ಇದರಿಂದ ಒಂದು ಕಡೆಯಿಂದ ಕಡೆಗೆ ರಸ್ತೆ ದಾಟಿ ಹೋಗಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆ ನಿವಾರಿಸಿ ಸಂಪರ್ಕ ರಸ್ತೆ ಕಲ್ಪಿಸುವಂತೆ ಬಿಡಿಎ ಆಯುಕ್ತರು ಮತ್ತು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೆವು, ಈ ಮೂರು ಅಂಡರ್‌ಪಾಸ್ ನಿರ್ಮಾಣದಿಂದ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ನೀತಿ ಸಂಹಿತೆಯ ಉಲ್ಲಂಘನೆಯಾದರೆ ದೂರು ನೀಡಲು ಸಹಾಯವಾಣಿ ಆರಂಭ

ABOUT THE AUTHOR

...view details