ಕರ್ನಾಟಕ

karnataka

ETV Bharat / state

ಬಿಡಿಎ ಕಚೇರಿ ಇನ್ಮುಂದೆ ಸಂಪೂರ್ಣ ಇ-ಕಚೇರಿ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಇನ್ನು ಮುಂದೆ ಮೋಸ, ವಂಚನೆಗೆ ಅವಕಾಶವಿಲ್ಲ. ಇ-ಕಚೇರಿಯ ನಿರ್ವಹಣೆಯ ಮೂಲಕ ಎಲ್ಲವೂ ಪಾರದರ್ಶಕವಾಗಿ ನಡೆಯಲಿದೆ.

By

Published : Sep 19, 2019, 11:30 PM IST

ಬಿಡಿಎ ಕಚೇರಿ ಇನ್ಮುಂದೆ  ಸಂಪೂರ್ಣ ಇ-ಕಚೇರಿ

ಬೆಂಗಳೂರು:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದ್ದು, ನಾಳೆಯಿಂದಲೇ ಇ-ಕಚೇರಿ ಜಾರಿಗೆ ಬರಲಿದೆ ಎಂದು ಬಿಡಿಎ ಆಯುಕ್ತರಾದ ಡಾ. ಪ್ರಕಾಶ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಬಿಡಿಎ ಕಚೇರಿ ಇನ್ಮುಂದೆ ಸಂಪೂರ್ಣ ಇ-ಕಚೇರಿ

ಬಿಡಿಎ, ಕಡತಗಳು, ಪತ್ರವ್ಯವಹಾರ, ಪ್ರಸ್ತಾವನೆಗಳ ವಿಲೇವಾರಿ ಇ-ಕಚೇರಿಯಲ್ಲೇ ನಿರ್ವಹಿಸಬೇಕು. ಅಷ್ಟೇ ಅಲ್ಲದೆ ಬಿಡಿಎ ನಿವೇಶನ ಹಂಚಿಕೆಯಾಗಿರುವ ಸಾರ್ವಜನಿಕರ ಶುದ್ಧಕ್ರಯಪತ್ರ ನೋಂದಣಿ, ವಿವೇಶನ ವರ್ಗಾವಣೆ, ನಕ್ಷೆ ಮಂಜೂರಾತಿ ಹಾಗೂ ಇತರ ಎಲ್ಲಾ ಕೆಲಸಗಳು ಇ-ಕಚೇರಿ ಮೂಲಕವೇ ನಡೆಯುವುದರಿಂದ ಮೋಸ ಹಾಗೂ ಅಕ್ರಮಗಳನ್ನು ತಡೆಯಬಹುದಾಗಿದೆ.

ಕೆಂಪೇಗೌಡ, ಅರ್ಕಾವತಿ ಇತರೆ ಬಡಾವಣೆಗಳಲ್ಲಿ ಅಧಿಕಾರಿಗಳಿಂದಲೇ ಅಕ್ರಮಗಳು ನಡೆದಿದ್ದು, ಒಂದೇ ನಿವೇಶನದ ಖಚಿತ ಅಳತೆ ವರದಿಗಳು ಇಬ್ಬರು ಹಂಚಿಕೆದಾರರಿಗೆ ನೀಡುವುದು, ವರದಿಗಳು ನಕಲಿಯಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದರು.

ರೈತರಿಗೆ, ಸಾರ್ವಜನಿಕರಿಗೆ ಬ್ರೋಕರುಗಳ ಹಾವಳಿಯಿಂದ ತಪ್ಪಿಸಿ ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಿ, ಗೊಂದಲಗಳನ್ನು ಪರಿಹರಿಸಬಹುದು. ಎಲ್ಲಾ ಕಡತಗಳು ಎಲ್ಲಾ ಸಮಯದಲ್ಲಿ ಇ- ಕಚೇರಿಯಲ್ಲಿ ಲಭ್ಯವಿರಲಿದೆ ಎಂದರು. ಎರಡು ಸಾವಿರ ಫ್ಲಾಟ್‌ಗಳು ಹಂಚಿಕೆಯಾಗಲು ಬಾಕಿ ಇದ್ದು, ಆದಷ್ಟು ಬೇಗ ಮಾರಾಟ ಮಾಡಲಾಗುವುದು. ಇದರಿಂದ ಬಿಡಿಎ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಲಿದೆ ಎಂದರು.

ಬಿಡಿಎ ಸದ್ಯದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದು, ಒಂದು ವರ್ಷದಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂದು ಆಯುಕ್ತರು ತಿಳಿಸಿದರು. ಸದ್ಯ ಐದು ಕೋಟಿ ರೂಪಾಯಿ ಮಾತ್ರ ಬ್ಯಾಂಕ್ ಬ್ಯಾಲೆನ್ಸ್ ಇದ್ದು, 400 ಕೋಟಿ ಬಿಲ್ ಬಾಕಿ ಇದೆ, 250 ಕೋಟಿ ರೂ ಸಾಲ ಇದೆ ಎಂದರು.

ಬಿಡಿಎನಿಂದ ಹೊಸ ಯೋಜನೆಗಳು ಸದ್ಯಕ್ಕಿಲ್ಲ. ಬಿಡಿಎ ವತಿಯಿಂದ ಹೊಸ ವಸತಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಿಲ್ಲ. ಈಗಾಗಲೇ ಇರುವ ಬಡಾವಣೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು.

ABOUT THE AUTHOR

...view details