ಕರ್ನಾಟಕ

karnataka

ETV Bharat / state

ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಲು ನಿರ್ಬಂಧ : ಬಿಡಿಎ ಆಯುಕ್ತರ ವಿರುದ್ಧ ಹೈಕೋರ್ಟ್ ಅಸಮಾಧಾನ

ತನಿಖಾ ಸಂಸ್ಥೆಗಳಿಗೆ ತಮ್ಮ ಅನುಮತಿ ಇಲ್ಲದೆ ಮಾಹಿತಿ, ದಾಖಲೆ ನೀಡಬಾರದು ಎಂದು ಬಿಡಿಎ ಆಯುಕ್ತ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಎಸ್. ಅರುಣಾಚಲಂ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

High Court
ಹೈಕೋರ್ಟ್

By

Published : Nov 10, 2020, 6:24 PM IST

ಬೆಂಗಳೂರು: ತನಿಖಾ ಸಂಸ್ಥೆಗಳಿಗೆ ತಮ್ಮ ಅನುಮತಿ ಇಲ್ಲದೆ ಯಾವುದೇ ದಾಖಲೆ, ಮಾಹಿತಿ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿ ಆದೇಶ ಹೊರಡಿಸಿದ್ದ ಬಿಡಿಎ ಆಯುಕ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಸಂಬಂಧ ರಾಜ್ಯ ಸರ್ಕಾರ ಸೂಕ್ತ ಕ್ರಮ ಜರುಗಿಸುವಂತೆ ಸೂಚನೆ ನೀಡಿದೆ. ತನಿಖಾ ಸಂಸ್ಥೆಗಳಿಗೆ ತಮ್ಮ ಅನುಮತಿ ಇಲ್ಲದೆ ಮಾಹಿತಿ, ದಾಖಲೆ ನೀಡಬಾರದು ಎಂದು ಬಿಡಿಎ ಆಯುಕ್ತ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಎಸ್. ಅರುಣಾಚಲಂ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಬಿಡಿಎ ಸಲ್ಲಿಸಿದ್ದ ಆಕ್ಷೇಪಣೆ ಗಮನಿಸಿ ಅಸಮಾಧಾನ ವ್ಯಕ್ತಪಡಿಸಿತು.

ತನಿಖಾ ಸಂಸ್ಥೆಗಳಿಗೆ ಆಯುಕ್ತರ ಅನುಮತಿ ಇಲ್ಲದೆ ಮಾಹಿತಿ ಅಥವಾ ದಾಖಲೆ ನೀಡಬಾರದು ಎಂಬ ಆದೇಶ ಎಷ್ಟು ಸರಿ. ಇದರಿಂದ ತನಿಖಾ ಸಂಸ್ಥೆಗಳ ಕಾರ್ಯಕ್ಕೆ ಅಡ್ಡಿಯಾಗುವುದಿಲ್ಲವೇ ಎಂದು ಪ್ರಶ್ನಿಸಿತು. ಇದಕ್ಕೆ ಬಿಡಿಎ ಪರ ವಕೀಲರು ಉತ್ತರಿಸಿ, ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಬಾರದು ಎಂದು ಎಲ್ಲಿಯೂ ಹೇಳಿಲ್ಲ. ಸಿಬ್ಬಂದಿ ತನಿಖೆಗೆ ಮಾಹಿತಿ ನೀಡುವ ಮುನ್ನ ಆಯುಕ್ತರಿಗೆ ತಿಳಿಸಿ ಹೋಗಬೇಕೆಂದು ಹೇಳಲಾಗಿದೆ. ಆದೇಶವನ್ನು ಇಂಗ್ಲಿಷ್​ಗೆ ಭಾಷಾಂತರ ಮಾಡುವಾಗ ಸ್ವಲ್ಪ ಏರುಪೇರಾಗಿದೆ ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು.

ಬಿಡಿಎ ಪರ ವಕೀಲರ ಹೇಳಿಕೆಗೆ ತೃಪ್ತವಾಗದ ಪೀಠ, ತನಿಖಾ ಸಂಸ್ಥೆಗಳಿಗೆ ತಮ್ಮನ್ನು ಕೇಳಿಯೇ ಮಾಹಿತಿ ನೀಡಬೇಕು ಎಂದು ಆಯುಕ್ತರು ಹೊರಡಿಸಿರುವ ಆದೇಶ ಸೂಕ್ತ ಎನ್ನಿಸುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಆಯುಕ್ತರ ಆದೇಶ ಪರಿಶೀಲಿಸಿ, ಸೂಕ್ತ ಕ್ರಮ ಜರುಗಿಸಬೇಕು. ಈ ವಿಚಾರವಾಗಿ ನ್ಯಾಯಾಲಯ ಮುಂದಿನ ವಿಚಾರಣೆ ವೇಳೆ ಆದೇಶ ಹೊರಡಿಸಲಿದೆ ಎಂದು ತಿಳಿಸಿ, ವಿಚಾರಣೆಯನ್ನು ನವೆಂಬರ್ 24ಕ್ಕೆ ಮುಂದೂಡಿತು.

ABOUT THE AUTHOR

...view details