ಯಲಹಂಕ (ಬೆಂಗಳೂರು): ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ಉತ್ತರ ತಾಲೂಕಿನ 17 ಗ್ರಾಮಗಳನ್ನು ಒಳಗೊಂಡ 3,546 ಎಕರೆ 12 ಗುಂಟೆ ಜಾಗ ಸ್ವಾಧೀನಕ್ಕೆ ಬಿಡಿಎ ಅಧಿಸೂಚನೆ ಹೊರಡಿಸಿದೆ.
ಶಿವರಾಮ ಕಾರಂತ ಬಡಾವಣೆ ಭೂಸ್ವಾಧೀನಕ್ಕೆ ಬಿಡಿಎಯಿಂದ ಅಧಿಸೂಚನೆ ಸುಪ್ರೀಂಕೋರ್ಟ್ ಆದೇಶದಂತೆ ನ್ಯಾಯಮೂರ್ತಿ ಎ. ವಿ. ಚಂದ್ರಶೇಖರ್ ಸಮಿತಿ ರಚನೆ ಮಾಡಿದ್ದು, ಸಮಿತಿಯು ದಿನಾಂಕ 03/08/2018ಕ್ಕೆ ಮುಂಚಿತವಾಗಿ ನಿರ್ಮಿಸಲಾದ ಕಟ್ಟಡ ಮತ್ತು ಮನೆಗಳ ಬಗ್ಗೆ ಮಾಹಿತಿಯನ್ನು ಸರ್ವೆ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಮಿತಿಯು ಕಟ್ಟಡ ಮಾಲೀಕರಿಂದ ಅರ್ಜಿಗಳನ್ನು ಸ್ವೀಕರಿಸಲು ಸಹಾಯ ಕೇಂದ್ರವನ್ನು ತೆರೆದಿದೆ.
ಭೂಸ್ವಾಧೀನ ಆತಂಕದಲ್ಲಿ ಭೂ ಮಾಲೀಕರು:
ಶಿವರಾಮ ಕಾರಂತ ಬಡಾವಣೆಗೆ ಬಿಡಿಎ 2008ರ ಡಿಸೆಂಬರ್‌ನಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 10 ವರ್ಷದ ಬಳಿಕ ಬೆಂಗಳೂರು ಉತ್ತರ ತಾಲೂಕಿನ 17 ಗ್ರಾಮಗಳ 3,546 ಎಕರೆ 12 ಗುಂಟೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಿತು. ಭೂಸ್ವಾಧೀನ ವಿರೋಧಿಸಿ ರೈತರಿಂದ ಆಕ್ಷೇಪಣೆಗಳು ಬಂದ ಹಿನ್ನೆಲೆ ರಾಜ್ಯ ಸರ್ಕಾರ 257 ಎಕರೆ 20 ಗುಂಟೆ ಜಾಗಕ್ಕೆ ಸಂಬಂಧಿಸಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಆರಂಭದಲ್ಲೇ ಬಿಡಿಎಗೆ ಸೂಚಿಸಿತ್ತು.
2012ರಲ್ಲಿ ಮತ್ತೆ ನಾಲೈದು ಹಳ್ಳಿಗಳ 446 ಎಕರೆ 7 ಗುಂಟೆ ಜಾಗ ಕೈಬಿಡುವಂತೆ ಭೂಮಾಲೀಕರು ಒತ್ತಾಯಿಸಿದ್ದರು. ಇದೇ ವಿಷಯವಾಗಿ ಭೂಮಾಲೀಕರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ನ ಏಕವ್ಯಕ್ತಿ ಪೀಠವು 2014 ನ. 26ರಂದು ಅರ್ಜಿದಾರರ ಪರವಾಗಿ ತೀರ್ಪು ನೀಡಿತ್ತು. ಆ ಸಮಯದಲ್ಲಿ ಇದನ್ನು ಬಿಡಿಎ ವಿಭಾಗೀಯ ಪೀಠದಲ್ಲಿ ಪ್ರಶ್ನೆ ಮಾಡಿತ್ತು. ವಿಭಾಗೀಯ ಪೀಠ ಕೂಡ ರೈತರ ಪರವಾಗಿ ತೀರ್ಪು ನೀಡಿತ್ತು. ಇದನ್ನು ಬಿಡಿಎ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಸುಪ್ರೀಂಕೋರ್ಟ್‌ನ ವಿಭಾಗಿಯ ಪೀಠವು ಈ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹಾಗೂ ಬಿಡಿಎಗೆ 2018ರ ಆಗಸ್ಟ್ 3ರಂದು ನಿರ್ದೇಶನ ನೀಡಿತ್ತು.
ಕಾನೂನುಬದ್ಧವಾಗಿ ನಿರ್ಮಾಣವಾದ ಮನೆಗಳ ರಕ್ಷಣೆಗೆ ಸುಪ್ರೀಂಕೋರ್ಟ್ ಆದೇಶ:
ಸುಪ್ರೀಂಕೋರ್ಟ್ ಆದೇಶದಂತೆ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಸಮಿತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಜಯಕರ್ ಜರೋಮ್, ನಿವೃತ್ತ ಡಿಜಿಪಿ ಡಾ.ಎಸ್.ಟಿ ರಮೇಶ್ ಇದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ಕಾನೂನುಬದ್ಧವಾಗಿ ನಿರ್ಮಾಣವಾದ ಮನೆಗಳ ರಕ್ಷಣೆಗಾಗಿ ಸಮಿತಿ ರಚನೆ ಮಾಡಲಾಗಿದ್ದು, ಬೆಂಗಳೂರು ಉತ್ತರ ತಾಲೂಕಿನ 17 ಗ್ರಾಮಗಳಲ್ಲಿ ದಿನಾಂ 03/08/2018 ಕ್ಕೆ ಮುಂಚೆ ನಿರ್ಮಾಣ ಮಾಡಲಾಗಿರುವ ಕಟ್ಟಡ ಮತ್ತು ಮನೆಗಳನ್ನ ಪರಿಶೀಲನೆ ಮಾಡಿ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಬೇಕಾಗಿದೆ. ಈ ಹಿನ್ನೆಲೆ ಸಮಿತಿಯು ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲು 5 ಕಡೇ ಸಹಾ ಕೇಂದ್ರಗಳನ್ನು ತೆರೆದಿದೆ. ಮೊದಲಿಗೆ ಮೇಡಿ ಅಗ್ರಹಾರದಲ್ಲಿ ಸಹಾಯ ಕೇಂದ್ರವನ್ನು ತೆರೆಯಲಾಗಿದೆ. ಸಹಾಯ ಕೇಂದ್ರವು ಸಾರ್ವಜನಿಕ ರಜೆ ದಿನವನ್ನು ಹೊರತುಪಡಿಸಿ ಬೆಳಗ್ಗೆ 10:30 ರಿಂದ ಸಂಜೆ 4: 30ರವರೆಗೂ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಸೋಮಶೆಟ್ಟಿಹಳ್ಳಿ, ಬ್ಯಾಲಕೆರೆ, ಸಿಂಗನಾಯಕನಹಳ್ಳಿ, ಬಿಡಿಎ ಪ್ರಧಾನ ಕಚೇರಿಯಲ್ಲಿ ಸಹಾಯ ಕೇಂದ್ರ ತೆರೆಯಲಾಗುವುದು.
ಸ್ವಾಧೀನಕ್ಕೆ ಒಳಪಟ್ಟ ಜಾಗದಲ್ಲಿ 7500 ಕಟ್ಟಡಗಳು:
ಶಿವರಾಮ ಕಾರಂತ ಬಡಾವಣೆ ಸ್ವಾಧೀನಕ್ಕೆ ಒಳಗಾಗುವ ಜಾಗದಲ್ಲಿ 2008ರಲ್ಲಿ 2200 ಕಟ್ಟಡಗಳಿದ್ದು, ಸ್ಯಾಟಲೇಟ್ ಮೂಲಕ ನೋಡಿದ್ದಾಗ 2018ರ ಹೊತ್ತಿಗೆ 7500 ಕಟ್ಟಡಗಳಿರುವುದು. ಬೆಳಕಿಗೆ ಬಂದಿದೆ. 7500 ಜನರು ಸಹಾಯ ಕೇಂದ್ರಕ್ಕೆ ದಾಖಲೆ ಮತ್ತು ಮಾಹಿತಿ ನೀಡಬೇಕಿದೆ. ಕಟ್ಟಡ ಮತ್ತು ಮನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನ ಸ್ವೀಕರಿಸಿದ ನಂತರ ಅರ್ಜಿದಾರರಿಗೆ ಯೂನಿಟ್ ನಂಬರ್ ಕೊಟ್ಪು ಅಕೌಂಟ್ ಕ್ರಿಯೆಟ್ ಮಾಡಲಾಗುವುದು. ದಾಖಲೆಗಳನ್ನ ಸ್ಕ್ಯಾನ್ ಮಾಡಿ ಅಕೌಂಟ್ ನಲ್ಲಿ ಇಡಲಾಗುವುದು. ಭೂ ಸ್ವಾಧೀನಕ್ಕೆ ರೈತರಿಂದ ವಿರೋಧ ಸಹ ವ್ಯಕವಾಗಿದೆ. ಸಹಾಯ ಕೇಂದ್ರಕ್ಕೆ ಮಾಹಿತಿ ಕೊಡದಂತೆ ಪ್ರಚಾರ ಸಹ ನಡೆಯುತ್ತಿದೆ. ಈ ಬಗ್ಗೆ ಮಾತನಾಡಿದ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸುಪ್ರೀಂಕೋರ್ಟ್ ಆದೇಶದಂತೆ ಜನರು ದಾಖಲೆಗಳನ್ನು ಕೊಡಬೇಕಿದೆ ಎಂದರು.
ಇದನ್ನೂ ಓದಿ: ಒಳ್ಳೆಯ ಸಮಯವೇಕೆ?, ಸಿಡಿ ಇದ್ರೆ ನಾಳೆಯೇ ಬಿಡುಗಡೆ ಮಾಡ್ಲಿ: ಯೋಗೇಶ್ವರ್ಗೆ ಹೆಚ್ಡಿಕೆ ಸವಾಲ್
ಶಿವರಾಮ ಕಾರಂತ ಬಡಾವಣೆಗೆ ಭೂಸ್ವಾಧೀನಕ್ಕೆ ಒಳಗಾಗುವ ರೈತರು ತಮ್ಮ ಜಮೀನು ಬಿಟ್ಟು ಕೊಡಲು ಮನಸಿಲ್ಲ. ಬಿಡಿಎಯಿಂದ ಸೂಕ್ತ ಪರಿಹಾರ ಸಿಗುತ್ತದೆಯೋ ಎಂಬ ಅನುಮಾನ ಸಹ ಇದೆ. ರೈತರ ಜಮೀನು ಸ್ವಾಧೀನ ಮಾಡಿಕೊಂಡು ಶ್ರೀಮಂತರಿಗೆ ನಿವೇಶನ ಕೊಡುವ ಕಾರಣಕ್ಕೆ ಬಡಾವಣೆ ನಿರ್ಮಾಣ ಮಾಡಲಾಗುತ್ತಿದೆ ಎಂಬ ಅಕ್ರೋಶ ಸಹ ರೈತರಲ್ಲಿದೆ. ಇದರ ನಡುವೆ ಸುಪ್ರೀಂಕೋರ್ಟ್ ಆದೇಶ ರೈತರಿಗೆ ಒಂದು ಆಶಾಭಾವನೆ ಬಂದಿದ್ದು, ರೈತರು ತಮ್ಮ ಕಟ್ಟಡ ಮತ್ತು ಮನೆಗಳ ಬಗ್ಗೆ ದಾಖಲೆ ಮತ್ತು ಮಾಹಿತಿಗಳನ್ನ ನೀಡುತ್ತಿದ್ದಾರೆ.