ಕರ್ನಾಟಕ

karnataka

ETV Bharat / state

40 ಕೋಟಿ ಮೌಲ್ಯದ ಆಸ್ತಿ ಒತ್ತುವರಿ ತೆರವು ಮಾಡಿದ ಬಿಡಿಎ - ಬಿಡಿಎ ಅಧಿಕಾರಿಗಳು ತೆರವು

ಖಾಸಗಿ ವ್ಯಕ್ತಿಗಳು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ, ಶೆಡ್​​ ಹಾಕಿದ್ದರು. ಈ ಜಾಗವನ್ನು ಇಂದು ಬಿಡಿಎ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

BDA cleared of forty crores of assets
ಒತ್ತುವರಿ ತೆರವು ಮಾಡಿದ ಬಿಡಿಎ

By

Published : Jan 22, 2020, 8:40 PM IST

ಬೆಂಗಳೂರು: ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದವರ ವಿರುದ್ಧ ಬಿಡಿಎ ಇಂದು ಕಾರ್ಯಾಚರಣೆ ನಡೆಸಿದೆ.

ನಾಗರಬಾವಿ ಗ್ರಾಮ ಸರ್ವೆ ನಂ.120 ರಲ್ಲಿನ 24 ಗುಂಟೆ ಜಾಗವನ್ನು ಒತ್ತುವರಿ ಮಾಡಲಾಗಿತ್ತು. 40 ಕೋಟಿ ಬೆಲೆಬಾಳುವ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿ ಶೆಡ್ ನಿರ್ಮಿಸಿಕೊಂಡಿದ್ದರು.

ಈ ಜಾಗವನ್ನ ಗುರುತಿಸಿದ ಬಿಡಿಎ ಅಧಿಕಾರಿಗಳು, ಬಿಡಿಎ ಆಯುಕ್ತ ಜೆಸಿ ಪ್ರಕಾಶ್ ಆದೇಶದಂತೆ, ಬಿಡಿಎ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ತೆರವು ಮಾಡಿದೆ. ಅಲ್ಲದೇ ಜಾಗದ ಸುತ್ತ ಬಿಡಿಎ ಎಂದು ಬರೆದು ಬೇಲಿ ಹಾಕಲಾಗಿದೆ.

ABOUT THE AUTHOR

...view details