ಬೆಂಗಳೂರು: ನಗರದ ರಾಜಾಜಿನಗರ ಕೈಗಾರಿಕಾ ಬಡಾವಣೆಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ಬಿಡಿಎ ತೆರವು ಮಾಡಿದೆ.
ರಾಜಾಜಿ ನಗರದಲ್ಲಿ 10 ಕೋಟಿ ರೂ. ಮೌಲ್ಯದ ಒತ್ತುವರಿ ಜಾಗವನ್ನು ತೆರವು ಮಾಡಿದ ಬಿಡಿಎ - ಒತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ಬಿಡಿಎ ತೆರವು
ಬೆಂಗಳೂರಿನ ಪ್ರಮುಖ ಭಾಗಗಳಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ಬಿಡಿಎ ತೆರವುಗೊಳಿಸಿದೆ.

ಸರ್ಕಾರಿ ಜಾಗವನ್ನು ಬಿಡಿಎ ತೆರವು
ಸಾಣೆಗುರುವನಹಳ್ಳಿ ಸರ್ವೆ ನಂಬರ್ 114 ರಲ್ಲಿನ ಒತ್ತುವರಿ ಜಾಗವನ್ನು ಗುರುವಾರ ಬಿಡಿಎ ತೆರವುಗೊಳಿಸಿದೆ. ಈ ಜಾಗದಲ್ಲಿ ವಿದ್ಯುತ್ ಹೈಟೆನ್ಷನ್ ತಂತಿ ಇದ್ದು, ಅದನ್ನ ಮೊದಲು ತೆರವು ಮಾಡಲಾಗಿದೆ.
8 ಸಾವಿರ ಸ್ಕ್ವೇರ್ ಫೀಟ್ನಲ್ಲಿ ಶೆಡ್, ಕಾಂಪೌಂಡ್ ನಿರ್ಮಿಸಿ ಒತ್ತುವರಿ ಮಾಡಲಾಗಿತ್ತು. 10 ಕೋಟಿ ರೂ. ಬೆಲೆಬಾಳುವ ಈ ಜಾಗವನ್ನ ಬಿಡಿಎ ಆಯುಕ್ತ ಪ್ರಕಾಶ್ ಸೂಚನೆ ಮೇರೆಗೆ ತೆರವುಗೊಳಿಸಲಾಗಿದೆ.