ಕರ್ನಾಟಕ

karnataka

ETV Bharat / state

ಮೂರನೇ ಹಂತದ ಇ-ಹರಾಜು : ಬಿಡಿಎ 286 ನಿವೇಶನ​​ ಮಾರಾಟ - ಬಿಡಿಎ ನಿವೇಶನ ಇ-ಹರಾಜು ಪ್ರಕ್ರಿಯೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಒಟ್ಟು 402 ನಿವೇಶನಗಳನ್ನು ಇ-ಹರಾಜಿನಲ್ಲಿ ಅಳವಡಿಸಿದ್ದು, ಇದರಲ್ಲಿ 40 ನಿವೇಶನಗಳನ್ನು ಹಿಂಪಡೆಯಲಾಗಿತ್ತು. ಹರಾಜಿಗಿದ್ದ 362 ನಿವೇಶನಗಳಲ್ಲಿ 286 ನಿವೇಶನಗಳು ಮಾರಾಟವಾಗಿದ್ದು, ಒಟ್ಟು 1,673 ಬಿಡ್​ದಾರರು ಭಾಗವಹಿಸಿದ್ದಾರೆ.

bda-286-sites-sold-in-third-phase-e-auction
ಬಿಡಿಎ

By

Published : Oct 6, 2020, 1:39 AM IST

Updated : Oct 6, 2020, 1:58 AM IST

ಬೆಂಗಳೂರು : ಬಿಡಿಎ ನಿವೇಶನಗಳ ಮೂರನೇ ಹಂತದ ಇ-ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ನಾಲ್ಕನೇ ಹಂತದ ಹರಾಜು ಪ್ರಕ್ರಿಯೆ ಪ್ರಾರಂಭವಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಒಟ್ಟು 402 ನಿವೇಶನಗಳನ್ನು ಇ-ಹರಾಜಿನಲ್ಲಿ ಅಳವಡಿಸಿದ್ದು, ಇದರಲ್ಲಿ 40 ನಿವೇಶನಗಳನ್ನು ಹಿಂಪಡೆಯಲಾಗಿತ್ತು. ಹರಾಜಿಗಿದ್ದ 362 ನಿವೇಶನಗಳಲ್ಲಿ 286 ನಿವೇಶನಗಳು ಮಾರಾಟವಾಗಿದ್ದು, ಒಟ್ಟು 1,673 ಬಿಡ್​ದಾರರು ಭಾಗವಹಿಸಿದ್ದಾರೆ. ಹರಾಜಿಗಿಟ್ಟಿದ್ದ ಮೌಲ್ಯದಲ್ಲಿ ಶೇಕಡಾ 47.58ರಷ್ಟು ಗಳಿಕೆಯಾಗಿದೆ. 55 ನಿವೇಶನಗಳಿಗೆ ಪ್ರತಿಕ್ರಿಯೆ ಬಂದಿಲ್ಲ ಎಂದು ಬಿಡಿಎ ಪ್ರಕಟಣೆ ಹೊರಡಿಸಿದೆ.

ಪತ್ರಿಕಾ ಪ್ರಕಟಣೆ

ಅರ್ಕಾವತಿ ಬಡಾವಣೆಯ ನಿವೇಶನ ಸಂಖ್ಯೆ 1,355ಕ್ಕೆ ಆರಂಭಿಕ ಠೇವಣಿ ರೂ. 44,400 ನಿಗದಿಪಡಿಸಿದ್ದು ಬಿಡ್ ದರವು ಮೂರು ಪಟ್ಟು ಅಂದರೆ 1,54,900 ರೂ.ಗಳಿಗೆ ಬಿಡ್ ಮಾಡಿ ಖರೀದಿಸಿದ್ದಾರೆ. ಹೆಚ್.ಎಸ್.ಆರ್. 3ನೇ ಸೆಕ್ಟರ್ ನಿವೇಶನ ಸಂಖ್ಯೆ 213/ಎಕ್ಕೆ ಆರಂಭಿಕ ಠೇವಣಿ ರೂ. 1,50,000 ನಿಗದಿಪಡಿಸಿದ್ದು, ಬಿಡ್ ದರವು 2,71,000 ರೂ.ಗಳಿಗೆ ಬಿಡ್ ಮಾಡಿ ಖರೀದಿಸಲಾಗಿದೆ.

  • ಅಧಿಸೂಚನೆಗೊಂಡ ಒಟ್ಟು ನಿವೇಶನಗಳ ಸಂಖ್ಯೆ-402
  • ಪ್ರತಿಕ್ರಿಯೆ ಬಾರದಿರುವುದು-55
  • ಶೇ. 5ಕ್ಕಿಂತ ಕಡಿಮೆ ಪ್ರತಿಕ್ರಿಯೆ-21
  • ಹಿಂಪಡೆದ ನಿವೇಶನಗಳ ಸಂಖ್ಯೆ-40
  • ಇ-ಹರಾಜಿನಲ್ಲಿ ಮಾರಾಟವಾದ ಒಟ್ಟು ನಿವೇಶನಗಳು-286
  • ಒಟ್ಟು ಬಿಡ್​​ದಾರರು-1673
  • ಒಟ್ಟು ಮೂಲ ಬೆಲೆ-ರೂ. 1,80,45,73,202
  • ಒಟ್ಟು ಹರಾಜು ಮೌಲ್ಯ-ರೂ. 2,66,31,95,312
  • ಗಳಿಕೆ-ರೂ. 85,86,22,110
  • ಶೇಕಡಾವಾರು ಗಳಿಕೆ-47.58%

ಬನಶಂಕರಿ, ಸರ್. ಎಂ. ವಿಶ್ವೇಶ್ವರಯ್ಯ, ಜೆ.ಪಿ. ನಗರ, ಅರ್ಕಾವತಿ ಬಡಾವಣೆ, ಬಿ.ಟಿ.ಎಂ. ಬಡಾವಣೆಗಳಲ್ಲಿ ವಿವಿಧ ಅಳತೆಯ ಒಟ್ಟು 448 ನಿವೇಶನಗಳಿಗೆ ಬಿಡಿಎ ಅಧಿಸೂಚನೆಯನ್ನು ಹೊರಡಿಸಿದೆ.

12.10.2020ರಿಂದ ಬಿಡ್ಡಿಂಗ್ ಪ್ರಾರಂಭವಾಗಲಿದ್ದು, ದಿನಾಂಕ 03.11.2020ರಿಂದ ದಿನಾಂಕ 09.11.2020ರವರೆಗೆ ಆರು ಹಂತಗಳಲ್ಲಿ ಬಿಡ್ಡಿಂಗ್ ಮುಕ್ತಾಯವಾಗಲಿದೆ. ಈ ನಿವೇಶನಗಳಿಗೆ ಜಿಯೋ ಟ್ಯಾಗ್ ವ್ಯವಸ್ಥೆ ಅಳವಡಿಸಲಾಗಿದ್ದು, ಪ್ರಾಧಿಕಾರದ ಅಧಿಕೃತ ವೆಬ್​ಸೈಟ್​ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಇದರಿಂದಾಗಿ ಬಿಡ್​​ದಾರರು ಎಲ್ಲಿಂದ ಬೇಕಾದರೂ, ನಿವೇಶನಗಳನ್ನು ವೀಕ್ಷಿಸಬಹುದಾಗಿದೆ ಎಂದು ಬಿಡಿಎ ತಿಳಿಸಿದೆ.

Last Updated : Oct 6, 2020, 1:58 AM IST

ABOUT THE AUTHOR

...view details