ಕರ್ನಾಟಕ

karnataka

ETV Bharat / state

ಮಂಡಿ ಶಸ್ತ್ರಚಿಕಿತ್ಸೆಗೊಳಗಾದ ಬಿಸಿ ಪಾಟೀಲ್: ಸಚಿವರಿಂದ ವರ್ಕ್ ಫ್ರಂ ಹಾಸ್ಪಿಟಲ್..! - ಈಟಿವಿ ಭಾರತ ಕನ್ನಡ

ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಮಂಡಿ ಚಿಕಿತ್ಸೆಗತೆ ಒಳಗಾಗಿರುವ ಕೃಷಿ ಸಚಿವ ಬಿ ಸಿ ಪಾಟೀಲ್‌ ವರ್ಕ್ ಫ್ರಂ ಹಾಸ್ಪಿಟಲ್ ಮಾಡುತ್ತಿದ್ದಾರೆ.

bc-patil-underwent-knee-pain-surgery
ಬಿಸಿ ಪಾಟೀಲ್

By

Published : Nov 22, 2022, 3:34 PM IST

ಬೆಂಗಳೂರು: ಮಂಡಿನೋವಿನಿಂದ ಬಳಲುತ್ತಿರುವ ಕೃಷಿ ಸಚಿವ ಬಿ.ಸಿ ಪಾಟೀಲ್‌ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಆಸ್ಪತ್ರೆಯಿಂದಲೇ ಕೃಷಿ ಇಲಾಖೆಯ ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದಾರೆ. ಕೃಷಿ ಚಟುವಟಿಕೆಗಳ ಕುರಿತು ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡುತ್ತಿದ್ದಾರೆ.

ಮಂಡಿ ನೋವಿನ ಹಿನ್ನೆಲೆಯಲ್ಲಿ ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್‌ ಆಸ್ಪತ್ರೆಯಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸಧ್ಯ ಆಸ್ಪತ್ರೆಯಲ್ಲಿ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದು, ವರ್ಕ್ ಫ್ರಂ ಹಾಸ್ಪಿಟಲ್ ಮೂಲಕ ತಮ್ಮ ಇಲಾಖೆಯ ಕಾರ್ಯಭಾರ ಮಾಡುತ್ತಿದ್ದಾರೆ. ಕೃಷಿ ಇಲಾಖೆ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ಸಾಗಲು ಅಧಿಕಾರಿಗಳ ಜೊತೆ ಸಚಿವರು ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ಸಲಹೆ ಸೂಚನೆ ನೀಡುತ್ತಿದ್ದಾರೆ.

ಮಂಡಿ ಶಸ್ತ್ರಚಿಕಿತ್ಸೆಗೊಳಗಾದ ಬಿಸಿ ಪಾಟೀಲ್

ಕೋವಿಡ್ ಮೊದಲ ಅಲೆಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದರಿಂದ ಹೋಂ ಕ್ವಾರಂಟೈನ್‌ ಆಗಿದ್ದ ಸಚಿವರು, ಮನೆಯಿಂದಲೇ ಇಲಾಖೆಯ ಜವಾಬ್ದಾರಿ ನಿರ್ವಹಣೆ ಮಾಡಿದ್ದರು. ಇದೀಗ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಆಸ್ಪತ್ರೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಮುಂಗಾರು ಹಂಗಾಮಿನ ಬೆಳೆ ವಿಮೆ ಕುರಿತು ಇತ್ತೀಚೆಗಷ್ಟೇ ವಿಕಾಸಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದ ಸಚಿವರು, ಇದೀಗ ಬೆಳೆ ವಿಮೆ ಯಾವ ಕಾರಣಕ್ಕೂ ರೈತರ ಕೈತಪ್ಪಬಾರದು ಎಂದು ಸೂಚಿಸಿದ್ದಾರೆ. ದಾಖಲಾತಿ ಲೋಪ ಇತ್ಯಾದಿ ಕಾರಣಗಳನ್ನು ಏಜೆನ್ಸಿಗಳು ನೀಡಬಾರದು ಎಂದು ಮತ್ತೊಮ್ಮೆ ಹೇಳಿದ್ದು, ಈ ಕುರಿತು ಪರಿಶೀಲನೆ ನಡೆಸುವಂತೆ ಆಸ್ಪತ್ರೆಯಿಂದಲೇ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ:ಅನಸ್ತೇಷಿಯಾ ನೀಡದೇ ಐವಿ ಸೆಡೇಷನ್ ಟೆಕ್ನಿಕ್ ಮೂಲಕ ಕ್ಲಿಷ್ಟಕರ ಕಿಡ್ನಿ ಕಲ್ಲು ಶಸ್ತ್ರಚಿಕಿತ್ಸೆ

ABOUT THE AUTHOR

...view details