ಕರ್ನಾಟಕ

karnataka

ETV Bharat / state

ಬೆಂಗಳೂರಿನ ಹಾಟ್ ಸ್ಪಾಟ್​ಗಳಲ್ಲಿ ಇನ್ನಷ್ಟು ಕಟ್ಟೆಚ್ಚರ: ನಿಯಂತ್ರಿತ ವಲಯ-ಬಫರ್ ವಲಯವಾಗಿ ವಿಂಗಡಣೆ - ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್

ರಾಜ್ಯ ಸರ್ಕಾರ ಲಾಕ್​​​​​ಡೌನ್​​​​​ಗೆ ಹೊಸ ಸುತ್ತೋಲೆ ಹೊರಡಿಸಿದೆ. ನಿಯಂತ್ರಿತ ವಲಯ, ಬಫರ್ ಝೋನ್ ಹೇಗಿರಬೇಕು ಎಂದು ಸರ್ಕಾರ ನಿರ್ದೇಶನ ಕೊಟ್ಟಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.

bbpm containment areas details
ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್

By

Published : Apr 18, 2020, 5:25 PM IST

ಬೆಂಗಳೂರು: ನಗರದ 32 ಹಾಟ್​​​​ ​ಸ್ಪಾಟ್​​​ಗಳಲ್ಲಿ ಇನ್ನಷ್ಟು ಕಟ್ಟೆಚ್ಚರ ವಹಿಸಲು ಬಿಬಿಎಂಪಿ ಸಿದ್ಧತೆ‌ ನಡೆಸುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್, ರಾಜ್ಯ ಸರ್ಕಾರ ಲಾಕ್​​​​​ಡೌನ್​​​​​ಗೆ ಹೊಸ ಸುತ್ತೋಲೆ ಹೊರಡಿಸಿದೆ. ನಿಯಂತ್ರಿತ ವಲಯ, ಬಫರ್ ಝೋನ್ ಹೇಗಿರಬೇಕು ಎಂದು ಸರ್ಕಾರ ನಿರ್ದೇಶನ ಕೊಟ್ಟಿದೆ ಎಂದು ತಿಳಿಸಿದ್ದಾರೆ.

ನಗರದ 32 ಹಾಟ್ ಸ್ಪಾಟ್​​​​​ಗೂ ನಿಯಂತ್ರಿತ ವಲಯ ಹಾಗೂ ಬಫರ್ ಝೋನ್ ಮಾಡಿ ಆದೇಶ ಹೊರಡಿಸಲಾಗಿದೆ. ನಿಯಂತ್ರಿತ ವಲಯದಲ್ಲಿ ಒಬ್ಬ ಕಮಾಂಡರ್ ಇರ್ತಾರೆ. ಅವರ ಕೆಳಗೆ ಆರೋಗ್ಯ ಅಧಿಕಾರಿಗಳು, ಇಂಜಿನಿಯರ್​​ಗಳು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಇರುತ್ತಾರೆ. ಕಮಾಂಡರ್ ಅವರಿಗೆ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಪವರ್ ಇರುತ್ತದೆ. ಅವರು ಆ ವಲಯಕ್ಕೆ ಜವಾಬ್ದಾರರು ಆಗಿರುತ್ತಾರೆ. ಅವರ ಉಸ್ತುವಾರಿಯಲ್ಲಿ ಡೋರ್ ಟು ಡೋರ್​ ಸರ್ವೇ, ಪ್ರತಿ ಮನೆಯ ಆರೋಗ್ಯ ಸಮೀಕ್ಷೆ ನಡೆಸಲಾಗುತ್ತದೆ. ಇವತ್ತು ಆ ಕಮಾಂಡರ್​​​​ಗಳನ್ನು ನೇಮಕ ಮಾಡಿ ಆದೇಶ ಹೊರಡಿಸುತ್ತೇವೆ ಎಂದು ಬಿಬಿಎಂಪಿ ಆಯುಕ್ತರು ವಿವರಿಸಿದರು.

ಬೆಂಗಳೂರಿನ ಹಾಟ್ ಸ್ಪಾಟ್ ಗಳಲ್ಲಿ ಇನ್ನಷ್ಟು ಕಟ್ಟೆಚ್ಚರ

ಇನ್ನು ಒಂದು ಕಮಾಂಡರ್ ತಂಡದಲ್ಲಿ 6 ರಿಂದ 7 ಜನ ಇರ್ತಾರೆ. ನಿಯಂತ್ರಿತ ವಲಯದಲ್ಲಿ ಯಾವುದೇ ವ್ಯಕ್ತಿ ಒಳಗೆ ಹಾಗೂ ಹೊರಗೆ ಬರುವ ಹಾಗಿಲ್ಲ. ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ನಿಗದಿಪಡಿಸಿದ ವ್ಯಕ್ತಿಗಳೇ ಇರಬೇಕು ಎಂದರು. ಎಲ್ಲೆಲ್ಲಿ ಹೆಚ್ಚು ಕೊರೊನಾ ಪ್ರಕರಣಗಳಿವೆಯೋ ಆ ಏರಿಯಾಗಳು ಕಂಟೋನ್ಮೆಂಟ್​ ಝೋನ್​​​ಗಳಾಗಲಿವೆ ಎಂದು ತಿಳಿಸಿದರು. ಪಾಸಿಟಿವ್ ಕೇಸ್ ಕಾಣಿಸಿಕೊಂಡ ಮನೆಯನ್ನು ಎಪಿಸೆಂಟರ್ ಎಂದು ಗುರುತಿಸಿ, ಎಪಿಸೆಂಟರ್‌ನಿಂದ ಮೂರು ಕಿಲೋ ಮೀಟರ್ ಕಂಟೋನ್ಮೆಂಟ್​ ಝೋನ್ ಮಾಡಲಾಗುತ್ತಿದೆ. ಬ್ಯಾರಿಕೇಡ್ ಹಾಕಿ ರಸ್ತೆಗಳ‌್ನು ಮುಚ್ಚಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರಿನ ಹಾಟ್ ಸ್ಪಾಟ್ ಗಳಲ್ಲಿ ಇನ್ನಷ್ಟು ಕಟ್ಟೆಚ್ಚರ

ಮೂರು ಕಿಲೋ ‌ಮೀಟರ್ ನಂತರದ ಐದು ಕಿಲೋ ಮೀಟರ್ ವ್ಯಾಪ್ತಿ ಬಫರ್ ಝೋನ್ ಇರಲಿದೆ. ಒಟ್ಟು ಎಂಟು ಕಿಲೋ ಮೀಟರ್​​​​ವರೆಗೂ ಕಂಟೋನ್ಮೆಂಟ್​ ಝೋನ್ ಹಾಗೂ ಬಫರ್ ವಲಯ ವ್ಯಾಪ್ತಿ ಇರಲಿದೆ. ಏರಿಯಾದ ಮನೆಗಳನ್ನು ಸೆಕ್ಟರ್ ಗಳಾಗಿ ವಿಭಾಗಿಸಿ, ತಲಾ 50 ಮನೆಗಳಿರೋ ಜಾಗ ಒಂದು ಸೆಕ್ಟರ್ ಆಗಲಿದೆ. ಸೆಕ್ಟರ್ ವೈಸ್ ಹೆಲ್ತ್ ಚೆಕಪ್ ಮಾಡಲಾಗುತ್ತದೆ. ಈ ಝೋನ್​​​ನ ಪ್ರತಿಯೊಬ್ಬರ ಚಲನವಲನದ ಮೇಲೆ ಹದ್ದಿನ ಕಣ್ಣು ಇಡಲಾಗುತ್ತದೆ. ಆ ಪ್ರದೇಶದಿಂದ ಅನುಮತಿ ಇಲ್ಲದೇ‌ ವಾಹನಗಳು ಹೊರ ಬರುವ ಹಾಗಿಲ್ಲ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ಇರುತ್ತದೆ ಎಂದು ಬಿಬಿಎಂಪಿ ಆಯುಕ್ತ ಅನೀಲ್​ ಕುಮಾರ್​ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details