ಬೆಂಗಳೂರು: ನಗರದಲ್ಲಿ ಪಾಸಿಟಿವ್ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ತಡವಾಗುತ್ತಿದೆ ಎಂಬ ದೂರು ಬಂದಿದ್ದು, ಹೆಚ್ಚಿನ ಆ್ಯಂಬುಲೆನ್ಸ್ ನಿಗದಿ ಮಾಡಲು ಕ್ರಮ ಕೈಗೊಂಡಿದ್ದೇವೆ, ಮುಂದಿನ ದಿನಗಳಲ್ಲಿ 6ಗಂಟೆಗಿಂತ ತಡವಾಗುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಹೇಳಿದರು.
ಕೋವಿಡ್ ಸೋಂಕಿತರನ್ನು 6ಗಂಟೆಯೊಳಗೆ ಆಸ್ಪತ್ರೆಗೆ ರವಾನೆ: ಅಭಯ ನೀಡಿದ ಬಿಬಿಎಂಪಿ ಆಯುಕ್ತರು - ಆರುಗಂಟೆಯೊಳಗೆ ಆಸ್ಪತ್ರೆಗೆ ರವಾನೆ
ನಗರದಲ್ಲಿ ಪಾಸಿಟಿವ್ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ತಡವಾಗುತ್ತಿದೆ ಎಂಬ ದೂರು ಬಂದಿದ್ದು, ಹೆಚ್ಚಿನ ಆ್ಯಂಬುಲೆನ್ಸ್ ನಿಗದಿ ಮಾಡಲು ಕ್ರಮ ಕೈಗೊಂಡಿದ್ದೇವೆ, ಮುಂದಿನ ದಿನಗಳಲ್ಲಿ ಆರುಗಂಟೆಗಿಂತ ತಡವಾಗುವುದಿಲ್ಲ ಎಂದು, ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಹೇಳಿದರು.
ಬಿಬಿಎಂಪಿ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದ್ದು ಕೊರೊನಾ ತಡೆಗಟ್ಟಲು ಕಟ್ಟುನಿಟ್ಟಾಗಿ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಸಭೆ ಕುರಿತು ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್, ಪ್ರತಿದಿನ ಬರುವ ಕೋವಿಡ್ ರೋಗಿಗಳನ್ನು ಅವರ ಸೋಂಕಿನ ಲಕ್ಷಣಗಳಿಗೆ ಅನುಗುಣವಾಗಿ ಆಸ್ಪತ್ರೆ ಅಥವಾ ಆರೈಕೆ ಕೇಂದ್ರಕ್ಕೆ ವರ್ಗಾಯಿಸಲಾಗುತ್ತದೆ. ಅಗತ್ಯವಾದ 50 ಆ್ಯಂಬುಲೆನ್ಸ್ ಸಿದ್ಧಪಡಿಸಿದ್ದು, ನಾಳೆಯಿಂದ ನೂರು ಸಂಖ್ಯೆ ಏರಿಕೆ ಮಾಡಲು ನಿರ್ದೇಶಿಸಲಾಗಿದೆ. 250 ರವರೆಗೆ ಏರಿಸಲು ಕೂಡಾ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಎಸ್ಟಿಮ್ಯಾಟಿಕ್ ಪಾಸಿಟಿವ್ ಇರುವವರಿಗೆ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 1,300 ಬೆಡ್ಗಳನ್ನು ಗುರುತಿಸಲಾಗಿದೆ. 3 ಸಾವಿರ ವರೆಗೆ ಏರಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಕ್ರಿಟಿಕಲ್ ರೋಗಿಗಳನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುವುದು. ಸಿಎಂ ಸೂಚನೆಯಂತೆ ಬೆಂಗಳೂರು ಹಾಗೂ ರಾಜ್ಯದ ಉತ್ತಮ ಕೋವಿಡ್ ನಿರ್ವಹಣೆ ಹೆಸರನ್ನು ಮುಂದುವರಿಸಲು ನಿರ್ದೇಶಿಸಿದ್ದಾರೆ. ಹೊಸದಾಗಿ ಸೀಲ್ ಡೌನ್ ಆಗದಂತೆ ನೋಡಿಕೊಳ್ಳಬೇಕು. ಅಗತ್ಯಬಿದ್ದಾಗ ಮಾತ್ರ ಸೀಲ್ಡೌನ್ ಮಾಡಿ ಉಳಿದಂತೆ ಕಂಟೈನ್ಮೆಂಟ್ ಮಾಡಲು ಸೂಚಿಸಿದ್ದಾರೆ. ಹಾಗಾಗಿ ಸದ್ಯ ನಗರದಲ್ಲಿ ಲಾಕ್ಡೌನ್ ಆಗುವುದಿಲ್ಲ ಎಂದು ಸೂಚನೆ ನೀಡಿದ್ದಾರೆ ಎಂದರು.