ಬೆಂಗಳೂರು:ಚೀನಾದ ಪ್ರಸ್ತುತ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗುವ ಕೋವಿಡ್ ತಳಿಯಾದ ಒಮಿಕ್ರಾನ್ ಉಪ ರೂಪಾಂತರ ಬಿಎಫ್7 ಪತ್ತೆಯಾಗಿದೆ. ಇದರಿಂದ ಕರ್ನಾಟಕದಲ್ಲಿ ಅದರಲ್ಲೂ ರಾಜಧಾನಿಯಲ್ಲಿ ಆತಂಕ ಶುರುವಾಗಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಮಾಧ್ಯಮಗಳಿಗೆ ಕೋವಿಡ್ ಕುರಿತು ಪ್ರತಿಕ್ರಿಯೆ ನೀಡಿದ ತುಷಾರ್ ಗಿರಿನಾಥ್ ಅವರು, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ವಿಧಾನಸಭೆ ಕಲಾಪ ಮುಗಿಯುತ್ತಿದ್ದಂತೆ ಸಿಎಂ ಸಭೆ ನಡೆಸಲಿದ್ದಾರೆ ಎಂದು ಹೇಳಿದರು.