ಕರ್ನಾಟಕ

karnataka

ETV Bharat / state

ಬಿಬಿಎಂಪಿಯೇ ಭರಿಸಲಿದೆಯಂತೆ ಕೋವಿಡ್-19ನಿಂದ ಮೃತಪಟ್ಟವರ ಶವ ಸಂಸ್ಕಾರದ ವೆಚ್ಚ! - ಶವ ಸಂಸ್ಕಾರದ ವೆಚ್ಚ

ಕೋವಿಡ್​ನಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡಲು ತಗಲುವ ವೆಚ್ಚವನ್ನು ಬಿಬಿಎಂಪಿ ಸ್ವತಃ ಭರಿಸಲು ನಿರ್ಧಾರ ಮಾಡಿದೆ.

BBMP
ಬಿಬಿಎಂಪಿ

By

Published : Jul 25, 2020, 12:26 PM IST

ಬೆಂಗಳೂರು:ಕೋವಿಡ್ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಿದ್ಯುತ್ ಚಿತಾಗಾರಗಳ ಸಮಸ್ಯೆ ಎದುರಾಗಿತ್ತು. ಅಲ್ಲದೆ ಶವ ಸಂಸ್ಕಾರಕ್ಕೆ ಹೆಚ್ಚಿನ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪವಿತ್ತು. ಈ ಹಿನ್ನೆಲೆ ಶವ ಸಂಸ್ಕಾರಕ್ಕೆ ತಗಲುವ ವೆಚ್ಚವನ್ನು ಪಾಲಿಕೆಯೇ ಭರಿಸಲು ನಿರ್ಧರಿಸಿದೆ.

ಈ ಕೆಳಗಿನಂತೆ ದಹನ ಶುಲ್ಕ ವಿನಾಯಿತಿ ಹಾಗೂ ಪ್ರೋತ್ಸಾಹಧನವನ್ನು ಪಾಲಿಕೆಯೇ ಮಂಜೂರು ಮಾಡಲಿದೆ.

  • ಶವ ದಹನಕ್ಕೆ 250 ರೂ. ಶುಲ್ಕಕ್ಕೆ ವಿನಾಯಿತಿ
  • ಪ್ರತೀ ಚಟ್ಟಕ್ಕೆ 900 ರೂ.
  • ಶವ ದಹನ ಕ್ರಿಯೆಗೆ 500 ರೂ. ಪ್ರೋತ್ಸಾಹಧನವಾಗಿ ಸಿಬ್ಬಂದಿಗೆ ನೀಡುವುದು
  • ಶವ ಸಂಸ್ಕಾರದ ಬೂದಿ ಸಂಗ್ರಹಿಸಲು ಮಡಿಕೆಗೆ ನೂರು ರೂ.
  • ಇವೆಲ್ಲವನ್ನೂ ತಾತ್ಕಾಲಿಕವಾಗಿ ಪ್ರತೀ ಮಾಹೆಯ ಕೋವಿಡ್-19 ಶವ ಸಂಸ್ಕಾರದ ಆಧಾರದ ಮೇಲೆ ನೌಕರರಿಗೆ 20-21ನೇ ಸಾಲಿನ ಬಜೆಟ್​ನಲ್ಲಿರುವ ನೈಸರ್ಗಿಕ ವಿಕೋಪದಡಿ ಡಿಸಿ ಬಿಲ್ ಮುಖಾಂತರ ಪಾವತಿಸಬೇಕೆಂದು ಬಿಬಿಎಂಪಿ ಆದೇಶ ಹೊರಡಿಸಿದೆ.
    ವೆಚ್ಚ ಭರಿಸುವ ಆದೇಶ ಪ್ರತಿ

ಶವ ಸಂಸ್ಕಾರಕ್ಕೆ ನಾಲ್ಕು ವಿದ್ಯುತ್ ಚಿತಾಗಾರ ಮೀಸಲು:

ಕೋವಿಡ್ ಸೋಂಕಿನಿಂದ ಮೃತಪಡುವವರ ಶವ ಸಂಸ್ಕಾರಕ್ಕೆ 4 ವಿದ್ಯುತ್ ಚಿತಾಗಾರಗಳನ್ನು ಮೀಸಲಿಡಲಾಗಿದೆ.

ಚಿತಾಗಾರದ ಸ್ಥಳ

1) ಆರ್.ಆರ್ ನಗರ- ಕೆಂಗೇರಿ

2) ಯಲಹಂಕ - ಮೇಡಿ ಅಗ್ರಹಾರ

3) ಬೊಮ್ಮನಹಳ್ಳಿ - ಕೂಡ್ಲು

4)ಮಹದೇವಪುರ - ಪಣತ್ತೂರು

ಈ ಚಿತಾಗಾರಗಳನ್ನು ಮೀಸಲಿಟ್ಟಿದ್ದು, ಸಿಬ್ಬಂದಿ ಕಡ್ಡಾಯವಾಗಿ ಕೈಗಳ ಶುಚಿತ್ವಕ್ಕೆ ಸ್ಯಾನಿಟೈಸರ್ ಬಳಸುವುದು, ಪಿಪಿಇ ಕಿಟ್ ಬಳಕೆ, ಶವ ಸಾಗಿಸುವ ಸಂದರ್ಭದಲ್ಲಿ ಉಪಯೋಗಿಸುವ ಶಾರ್ಪ್ಸ್ (sharps)ಗಳ ಸುರಕ್ಷಿತ ನಿರ್ವಹಣೆ, ಮೃತದೇಹದ ನಿರ್ವಹಣೆಯಲ್ಲಿ ಬಳಕೆಯಾಗುವ ಚೀಲ ಮತ್ತು ಸಲಕರಣೆಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡುವುದು, ಮೃತದೇಹವನ್ನು ಇಡುವ ಸ್ಟ್ರೆಚರ್, ಲಿನೆನ್, ಇತರ ಪರಿಸರ ಮೇಲ್ಮೈಗಳ ಸೋಂಕು ನಿವಾರಣೆ ಮಾಡುವುದು ಹಾಗೂ ಶವಗಳನ್ನು ಸಾಗಿಸುವ ವಾಹನಗಳನ್ನು ಶವ ಸಂಸ್ಕಾರದ ನಂತರ ತಕ್ಷಣವೇ ಸೋಂಕು ನಿವಾರಣಾ ದ್ರಾವಣ ಸಿಂಪಡಣೆ ಮಾಡಿ ಶುಚಿಗೊಳಿಸುವುದು... ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ.

ABOUT THE AUTHOR

...view details