ಬೆಂಗಳೂರು :ಸಾರ್ವಜನಿಕ ಸ್ಥಳಗಳು, ರಸ್ತೆ, ಪಾರ್ಕ್‌ನಂತಹ ಜಾಗಗಳಲ್ಲಿರುವ ಅನಧಿಕೃತ ದೇವಾಲಯಗಳು, ಚರ್ಚ್, ಮಸೀದಿಗಳ ಸರ್ವೇಯನ್ನು ಬಿಬಿಎಂಪಿ ಮಾಡಿ ಮುಗಿಸಿದೆ. ಹೈಕೋರ್ಟ್ ಆದೇಶ ನೀಡದ ಬೆನ್ನಲ್ಲೆ ಅನಧಿಕೃತ ಕಟ್ಟಡಗಳ ಪಟ್ಟಿಯನ್ನು ಬಿಬಿಎಂಪಿ ಸಿದ್ಧಪಡಿಸಿದೆ.
ನಗರದಲ್ಲಿ ಒಟ್ಟು 1,509 ಅನಧಿಕೃತ ದೇವಾಲಯಗಳು, ಚರ್ಚ್, ಮಸೀದಿಗಳಿವೆ ಎಂದು ಪಟ್ಟಿ ಮಾಡಿದೆ. ಪ್ರತಿ ವಲಯವಾರು ಅನಧಿಕೃತ ದೇವಾಲಯ, ಚರ್ಚ್, ಮಸೀದಿಗಳ ವಿವರಗಳಿವೆ. ಸೆಪ್ಟೆಂಬರ್29,2009ಕ್ಕೂ ಮೊದಲಿದ್ದ ಕಟ್ಟಡಗಳು ಹಾಗೂ ನಂತರದ ಕಟ್ಟಡಗಳ ವಿವರವನ್ನು ಹೈಕೋರ್ಟ್ಗೆ ಸಲ್ಲಿಸಿದೆ.