ಕರ್ನಾಟಕ

karnataka

ETV Bharat / state

ಬಿಡಾಡಿ ದನಗಳನ್ನು ವಶಕ್ಕೆ ಪಡೆದ ಪಾಲಿಕೆ: ಹಸು ಮಾಲೀಕರಿಗೆ ಎಚ್ಚರಿಕೆ ನೀಡಿದ ಬಿಬಿಎಂಪಿ - ದನಗಳನ್ನು ವಶಕ್ಕೆ ಪಡೆದ ಪಾಲಿಕೆ

ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಅಥವಾ ಮನೆ ಸುತ್ತಮುತ್ತ ನೋಡಿಕೊಳ್ಳಬೇಕೇ ಹೊರತು, ಬೀದಿಗೆ ಬಿಡುವುದಲ್ಲ. ಒಂದು ವೇಳೆ ಬಿಡಾಡಿ ದನಗಳು ಕಂಡರೆ ಬಿಬಿಎಂಪಿ ತಂಡ ವಶಕ್ಕೆ ಪಡೆಯಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

BBMP warned cow owners
ಬೀಡಾಡಿ ದನ

By

Published : Sep 25, 2020, 10:56 PM IST

ಬೆಂಗಳೂರು:ನಗರದಲ್ಲಿ ಹಸು ಸಾಕುವವರು ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಅಥವಾ ಮನೆ ಸುತ್ತಮುತ್ತ ನೋಡಿಕೊಳ್ಳಬೇಕೇ ಹೊರತು, ಬೀದಿಗೆ ಬಿಟ್ಟರೆ ಬಿಬಿಎಂಪಿ ತಂಡ ವಶಕ್ಕೆ ಪಡೆಯಲಿದೆ ಎಂದು ಪಾಲಿಕೆ ಎಚ್ಚರಿಕೆ ರವಾನಿಸಿದೆ.

ನಗರದಲ್ಲಿ ಹಸು ಸಾಕಿರುವ ಜನ ಮಾರುಕಟ್ಟೆಗಳಿಗೆ, ರಸ್ತೆಗಳಿಗೆ ಹಸುಗಳನ್ನು ಬೇಕಾ ಬಿಟ್ಟಿಯಾಗಿ ಬಿಟ್ಟು ವಾಹನ ಸಂಚಾರಕ್ಕೆ ಅಡ್ಡಿಪಡಿಸಲಾಗುತ್ತಿದೆ. ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಅಥವಾ ಮನೆ ಸುತ್ತಮುತ್ತ ನೋಡಿಕೊಳ್ಳಬೇಕೇ ಹೊರತು, ಬೀದಿಗೆ ಬಿಡುವುದಲ್ಲ. ಒಂದು ವೇಳೆ ಬಿಡಾಡಿ ದನಗಳು ಕಂಡರೆ ಬಿಬಿಎಂಪಿ ತಂಡ ವಶಕ್ಕೆ ಪಡೆಯಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಆಯುಕ್ತ ಮಂಜುನಾಥ್ ಪ್ರಸಾದ್, ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸುವ ಬಿಡಾಡಿ ದನಗಳನ್ನು ಪಾಲಿಕೆ ತಂಡ ವಶಕ್ಕೆ ಪಡೆಯುತ್ತಿದೆ. ಜನವರಿ 1, 2020 ರಿಂದ ಇಲ್ಲಿಯವರೆಗೆ ಒಟ್ಟು 102 ಬಿಡಾಡಿ ದನಗಳನ್ನು ಹಿಡಿದು ಮಾಲೀಕರಿಂದ ದಂಡ ಕಟ್ಟಿಸಿಕೊಂಡು ಎಚ್ಚರಿಕೆ ನೀಡಲಾಗುತ್ತಿದೆ. ಅಲ್ಲದೇ ಸಾರ್ವಜನಿಕರು ಬಿಡಾಡಿ ದನಗಳ ಸಂಬಂಧ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details