ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕ್ಷೇತ್ರ ಪುನರ್ ವಿಂಗಡಣೆಯನ್ನು ಅಂತಿಮಗೊಳಿಸಿ ರಾಜ್ಯ ಸರ್ಕಾರ ಅಧಿಸೂಚನೆಯನ್ನು ಸೋಮವಾರ ಹೊರಡಿಸಿದೆ. ವಾರ್ಡ್ ವಿಂಗಡಣೆಯ ಬಗ್ಗೆ ಸಾರ್ವಜನಿಕ ಆಕ್ಷೇಪಣೆಯ ಬಳಿಕ 225 ವಾರ್ಡ್ಗಳನ್ನು ಅಧಿಕೃತಗೊಳಿಸಿ ಸೆಪ್ಟೆಂಬರ್ 25 ರಂದು ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಬಿಜೆಪಿ ಸರ್ಕಾರ 243 ವಾರ್ಡುಗಳನ್ನು ಅಂತಿಮಗೊಳಿಸಿತ್ತು. ಆದರೆ ಈಗ ಕಾಂಗ್ರೆಸ್ ಸರ್ಕಾರ 225 ವಾರ್ಡುಗಳಿಗೆ ಇಳಿಸಿದೆ.
ಸರ್ಕಾರ ಆಗಸ್ಟ್ 4ರಂದು ವಾರ್ಡ್‌ಗಳ ಸಂಖ್ಯೆಯನ್ನು 243 ರಿಂದ 225ಕ್ಕೆ ಇಳಿಸಿ ಅಸೂಚನೆ ಹೊರಡಿಸಿತ್ತು. ಇದಾದ ಬಳಿಕ ಆಯೋಗ ವಾರ್ಡ್‌ಗಳ ಪುನರ್ ರಚಿಸಿ, ಗಡಿ ಗುರುತಿಸಿ ಕರಡು ವರದಿಯನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿತ್ತು. ಬಳಿಕ ವಾರ್ಡ್ ವಿಂಗಡಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಆಕ್ಷೇಪಗಳಿದ್ದರೆ 15 ದಿನದೊಳಗೆ ಲಿಖಿತ ರೂಪದಲ್ಲಿ ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲು ಸೂಚಿಸಲಾಗಿತ್ತು.