ಬೆಂಗಳೂರು:ನಿನ್ನೆಯಷ್ಟೇ ಕೊರೊನಾ ಸೋಂಕಿತರ ಮನೆ ಬಾಗಿಲಿಗೆ ತಗಡಿನ ಶೀಟ್ ಬಳಸಿ ಸೀಲ್ಡೌನ್ ಮಾಡಿ ಬಿಬಿಎಂಪಿ ಎಡವಟ್ಟು ಮಾಡಿಕೊಂಡಿತ್ತು. ಬಳಿಕ ಈ ಕುರಿತು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಶೀಟ್ ತೆರವುಗೊಳಿಸಲಾಗಿತ್ತು.
ಶಾಂತಿನಗರದಲ್ಲಿ ಸೋಂಕಿತರ ಮನೆ ಬಾಗಿಲಿಗೆ ತಗಡಿನ ಶೀಟ್ ಬಳಸಿ ಸೀಲ್ಡೌನ್ ಮಾಡಿದ್ದ ಬಿಬಿಎಂಪಿ ಆದರೆ ಇಂದು ಕಾರ್ಯಪಾಲಕ ಅಭಿಯಂತರ ರಾಧಾಕೃಷ್ಣ, ವಿವೇಕನಗರದಲ್ಲೂ ಒಂದು ಕಟ್ಟಡದ ಗೇಟ್ಗೆ ತಗಡಿನ ಶೀಟ್ ಹಾಕಿ ಸೀಲ್ ಡೌನ್ ಮಾಡಿ ಅದೇ ಎಡವಟ್ಟು ಮಾಡಿದ್ದಾರೆ. 100 ಮೀಟರ್ ದೂರದಲ್ಲಿ ರಸ್ತೆಯನ್ನೂ ಸೀಲ್ ಡೌನ್ ಮಾಡಿದ್ದಾರೆ.
ಬೆಂಗಳೂರಿನ ವನ್ನಾರ್ ಪೇಟೆ ವಾರ್ಡ್ನ ವಿವೇಕನಗರದ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಭಾನುವಾರದಿಂದ ಮನೆಯ ಗೇಟ್ಗೆ ಶೀಟ್ ಹಾಕಿ ಸೀಲ್ ಮಾಡಿದ್ದು, ಕಟ್ಟಡದಲ್ಲಿ ಏನಾದರೂ ತುರ್ತು ಪರಿಸ್ಥಿತಿ ಏರ್ಪಟ್ಟರೆ, ಹೊರಗೆ ಬರಲು ಹೇಗೆ ಸಾಧ್ಯ, ಬೆಂಕಿ ಅವಘಡ ಸಂಭವಿಸಿದರೆ ತಪ್ಪಿಸಿಕೊಳ್ಳೋದು ಹೇಗೆ ಎಂದು ಒಳಗಡೆ ಮಂದಿ ಚಿಂತೆಯಲ್ಲಿದ್ದಾರೆ.
ಸೀಲ್ಡೌನ್ ವೇಳೆ ಬಿಬಿಎಂಪಿ ಮತ್ತೆ ಎಡವಟ್ಟು...ಮನೆಯ ಗೇಟ್ಗೆ ಶಿಟ್ ಬಳಿಸಿ ಸೀಲ್ಡೌನ್ ಆಯುಕ್ತರು, ಮೇಲಧಿಕಾರಿಗಳು ಇನ್ನಾದಾರೂ ಗಮನಹರಿಸಿ ಮಾರ್ಗಸೂಚಿಯಂತೆ ಸೀಲ್ಡೌನ್ ಮಾಡುವಂತೆ ಸೂಚಿಸಬೇಕಿದೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.